ETV Bharat / bharat

ಕೋವಿಡ್​-19 ತಡೆಗಟ್ಟುವಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಪಾತ್ರ

author img

By

Published : Aug 8, 2020, 8:32 PM IST

ವ್ಯಾಕ್ಸಿನ್​ ಬರುವವರೆಗಾದರೂ ನಾವೆಲ್ಲ ಜಾಗರೂಕರಾಗಿ, ಸುರಕ್ಷತೆಯನ್ನು ಕಾಪಾಡಿಕೊಳ್ಳಲೇಬೇಕಿದೆ. ಆದರೆ ಈ ವಿಚಿತ್ರ ವೈರಸ್​ನ ಹರಡುವಿಕೆಯ ವಿಧಾನ ಹಾಗೂ ಇದನ್ನು ಗುಣಪಡಿಸಲು ಬೇಕಾದ ಔಷಧಿಗಳ ಬಗ್ಗೆಯೇ ಇನ್ನೂ ಗೊಂದಲ ಇರುವುದರಿಂದ ಮನುಷ್ಯರ ಸ್ಥಿತಿ ಅಯೋಮಯವಾಗಿದೆ.

artificial-intelligence
artificial-intelligence

ನವದೆಹಲಿ: ಜಗತ್ತಿನಲ್ಲಿ ಅತಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಕಾಯಿಲೆಯಿಂದಾಗಿ ವಿಶ್ವಾದ್ಯಂತ ಜನತೆ ಭೀತಿಗೊಳಗಾಗಿದ್ದು, ಒಂದು ರೀತಿಯ ಅಸಹಾಯಕತೆಯ ಭಾವನೆ ಅವರನ್ನು ಕಾಡುತ್ತಿದೆ. ನಿರೀಕ್ಷೆಗೂ ಮೀರಿ ಅಪಾಯಕಾರಿಯಾಗಿ ಹರಡುತ್ತಿರುವ ವೈರಸ್ ಕಾರಣದಿಂದ ಜನ ಅನಿವಾರ್ಯವಾಗಿ ತಮ್ಮ ದಿನನಿತ್ಯದ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವಂತಾಗಿದೆ ಹಾಗೂ ಅದೆಷ್ಟೋ ಅಗತ್ಯ ಕೆಲಸಗಳನ್ನು ಮಾಡದೆ ಸುಮ್ಮನಿರುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಕೊರೊನಾ ವೈರಸ್ ಬರದಂತೆ ತಡೆಯುವ ಸುರಕ್ಷಿತ ವ್ಯಾಕ್ಸಿನ್ ಈಗ ಅತಿ ತುರ್ತಾಗಿ ವಿಶ್ವಕ್ಕೆ ಬೇಕಾಗಿದೆ.

ವ್ಯಾಕ್ಸಿನ್ ಬರುವವರೆಗಾದರೂ ನಾವೆಲ್ಲ ಜಾಗರೂಕರಾಗಿ, ಸುರಕ್ಷತೆಯನ್ನು ಕಾಪಾಡಿಕೊಳ್ಳಲೇಬೇಕಿದೆ. ಆದರೆ ಈ ವಿಚಿತ್ರ ವೈರಸ್ನ ಹರಡುವಿಕೆಯ ವಿಧಾನ ಹಾಗೂ ಇದನ್ನು ಗುಣಪಡಿಸಲು ಬೇಕಾದ ಔಷಧಿಗಳ ಬಗ್ಗೆಯೇ ಇನ್ನೂ ಗೊಂದಲ ಇರುವುದರಿಂದ ಮನುಷ್ಯರ ಸ್ಥಿತಿ ಅಯೋಮಯವಾಗಿದೆ.

artificial-intelligence
artificial-intelligence

ಇಂಥ ಪರಿಸ್ಥಿತಿಗಳಲ್ಲಿ ಮಾನವ ಕುಲಕ್ಕೆ ಆಶಾದಾಯಕವಾಗಿ ಕಾಣುತ್ತಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಹಾಗೂ ಮಶೀನ್ ಲರ್ನಿಂಗ್ ತಂತ್ರಜ್ಞಾನ. ಧ್ವನಿ ಗುರುತಿಸುವ ತಂತ್ರಜ್ಞಾನ, ಡೇಟಾ ಅನಲಿಟಿಕ್ಸ್, ಮಶೀನ್ ಲರ್ನಿಂಗ್, ಡೀಪ್ ಲರ್ನಿಂಗ್, ಚಾಟ್ ಬಾಟ್ ತಂತ್ರಜ್ಞಾನ ಅಭಿವೃದ್ಧಿ ಮತ್ತು ಫೇಸ್ ರಿಕಗ್ನಿಷನ್ (ಮುಖ ಗುರುತು ಪತ್ತೆ) ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಆವಿಷ್ಕಾರಗಳ ಕಾರಣದಿಂದ ಕೋವಿಡ್-19ನ ಬಿಕ್ಕಟ್ಟಿನ ಸಮಯದಲ್ಲಿ ಸಾಕಷ್ಟು ಸಹಾಯವಾಗುತ್ತಿದೆ. ದೂರದಿಂದಲೇ ರೋಗ ಪತ್ತೆ ಮಾಡುವಿಕೆ, ಔಷಧಿ ನೀಡುವಿಕೆ ಸೇರಿದಂತೆ ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲು (ಕಾಂಟ್ಯಾಕ್ಟ್ ಟ್ರೇಸಿಂಗ್) ಮತ್ತು ವ್ಯಾಕ್ಸಿನ್ ಅಭಿವೃದ್ಧಿಪಡಿಸಲು ಈ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲು ಜಗತ್ತಿನ ಹಲವಾರು ಪ್ರಯೋಗಾಲಯಗಳು ಈಗ ಮುಂದಾಗಿವೆ.

ಕೋವಿಡ್-19 ಸೋಂಕಿನ ಸಂಭವನೀಯ ಹರಡುವಿಕೆಯ ಕುರಿತಾದ ಅನಲಿಟಿಕ್ಸ್ ಬಗ್ಗೆ ಮಾಹಿತಿ ನೀಡುವಲ್ಲಿ ಹಾಗೂ ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗಾಗಲೇ ಸಾಕಷ್ಟು ಸಹಾಯ ಮಾಡಿದೆ. ಕೋವಿಡ್ ರೋಗಿಯ ಪ್ರತಿದಿನದ ಅಪ್ಡೇಟ್ ನೀಡಲು ಸಹ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನುಕೂಲಕರವಾಗಿದೆ.

artificial-intelligence
artificial-intelligence

ನಿರ್ದಿಷ್ಟ ಪ್ರದೇಶವೊಂದರಲ್ಲಿ ಸೋಂಕು ಹರಡಿರುವುದು, ವೈರಸ್​ನ ತೀವ್ರತೆ, ಅದಕ್ಕನುಗುಣವಾಗಿ ಬೆಡ್ಗಳ ಅವಶ್ಯಕತೆ ಹಾಗೂ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ಮುಂತಾದ ಲೆಕ್ಕಾಚಾರಗಳನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕ್ಷಣಾರ್ಧದಲ್ಲಿ ಮಾಡಬಹುದು. ಹಾಗೆಯೇ ಈಗಾಗಲೇ ಚಿಕಿತ್ಸೆ ನೀಡಲಾದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಭವಿಷ್ಯದಲ್ಲಿ ವೈರಸ್ ವ್ಯಾಪಕವಾಗಿ ಹರಡದಂತೆ ತಡೆಗಟ್ಟಬಹುದು ಹಾಗೂ ಆಯಾ ಕಾಲಕ್ಕೆ ತಕ್ಕಂತೆ ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.

ಕೋವಿಡ್ ನಿರ್ವಹಣೆಯಲ್ಲಿ ವಿಶ್ವಾಸಾರ್ಹ ಮಾಹಿತಿಯು ಸಕಾಲಕ್ಕೆ ಲಭ್ಯವಾಗುವುದು ತುಂಬಾ ಅಗತ್ಯ. ಬಿಗ್ ಡೇಟಾ ವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನೊಂದಿಗೆ ಸಂಯೋಜಿಸಿದಲ್ಲಿ ಕೋವಿಡ್ ಕುರಿತಾದ ನಿರ್ಣಯಗಳನ್ನು ಕೈಗೊಳ್ಳಲು ಬಹು ಮಹತ್ವದ ಅಸ್ತ್ರವನ್ನು ತಯಾರಿಸಬಹುದು. ಏನೇ ಆದರೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ನಿರ್ಧಾರ ಕೈಗೊಳ್ಳುವ ಸಾಧನವಲ್ಲ. ಇದೇನಿದ್ದರೂ ನಿರ್ಧಾರ ಕೈಗೊಳ್ಳಲು ಪೂರಕವಾಗಿ ಸಹಾಯ ಮಾಡುವ ಸಾಧನ ಮಾತ್ರ ಎಂಬುದು ಗಮನದಲ್ಲಿರಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.