ETV Bharat / bharat

ಕಾಶ್ಮೀರಕ್ಕೆ ಯುರೋಪ್​ ಸಂಸದರ ನಿಯೋಗ: ಆರ್ಟಿಕಲ್​ 370, ಭಾರತ ಪರ ಧ್ವನಿ... ಉಗ್ರರ​ ವಿರುದ್ಧ ಗುಡುಗು - EU parliamentarians

ಯುರೋಪ್‌ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಉಗ್ರರು ಅಟ್ಟಹಾಸ ಮೆರೆದಿದ್ದು, 6 ಮಂದಿಯನ್ನು ಹತ್ಯೆ ಮಾಡಿದ್ದರು. ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ, ಆರ್ಟಿಕಲ್​ 370 ಭಾರತದ ಆಂತರಿಕ ವಿಷಯ. ಉಗ್ರರ ವಿರುದ್ಧ ಹೋರಾಡುತ್ತಿರುವ ಭಾರತದ ಪರ ನಾವು ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಯುರೋಪ್ ಸಂಸದರ ನಿಯೋಗ
author img

By

Published : Oct 30, 2019, 3:02 PM IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪಿಯನ್​ ಒಕ್ಕೂಟದ ಸಂಸದರು, ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​ 370 ಸ್ಥಾನಮಾನವನ್ನು ಹಿಂದಕ್ಕೆ ಪಡೆದಿದ್ದು ಭಾರತದ ಆಂತರಿಕ ವಿಷಯ ಎಂದು ಕೇಂದ್ರದ ನಡೆ ಸಮರ್ಥಿಸಿದರು. ಜೊತೆಗೆ ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟ ಅಗತ್ಯ ಎಂದು ಪ್ರತಿಪಾದಿಸಿದರು.

ಕಣಿವೆ ರಾಜ್ಯಕ್ಕೆ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡ 23 ಯುರೋಪಿಯನ್ ಸಂಸದರು, ಪಶ್ಚಿಮ ಬಂಗಾಳದ ಐವರು ಕಾರ್ಮಿಕರನ್ನು ಹತ್ಯೆ ಮಾಡಿದ ಉಗ್ರರ ನಡೆಯನ್ನು ಖಂಡಿಸಿದರು. ಈ ನಿಯೋಗವು ಸೈನ್ಯ ಮತ್ತು ಪೊಲೀಸರು ಹಾಗೂ ಯುವ ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡು ಶಾಂತಿಯ ವಿಚಾರಗಳನ್ನು ವಿನಿಮಯ ಮಾಡಿಕೊಂಡಿದೆ.

'ಆರ್ಟಿಕಲ್ 370 ಬಗ್ಗೆ ಮಾತನಾಡುವುದಾದರೇ ಇದೊಂದು ಭಾರತದ ಆಂತರಿಕ ವಿಷಯ. ನಮಗೆ ಆತಂಕಕಾರಿ ಸಂಗತಿಯೆಂದರೆ ಭಯೋತ್ಪಾದನೆ. ಇದು ಜಾಗತಿಕ ಭೀತಿಯಾಗಿದ್ದು, ಇದರ ವಿರುದ್ಧ ಹೋರಾಡುತ್ತಿರುವ ಭಾರತದೊಂದಿಗೆ ನಾವೆಲ್ಲರೂ ನಿಲ್ಲಬೇಕು. ಐವರು ಅಮಾಯಕ ಕಾರ್ಮಿಕರನ್ನು ಭಯೋತ್ಪಾದಕರು ಕೊಂದದ್ದು ದುರದೃಷ್ಟಕರ ಘಟನೆ. ನಾವು ಇದನ್ನು ಖಂಡಿಸುತ್ತೇವೆ' ಎಂದು ಫ್ರಾನ್ಸ್‌ ಸಂಸದ ಹೆನ್ರಿ ಮಾಲೋಸ್ಸೆ ಹೇಳಿದರು.

ಇಂಗ್ಲೆಂಡ್​ ಸಂಸದ ನ್ಯೂಟನ್ ಡನ್ ಮಾತನಾಡಿ, ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ಬಳಿಕದ ಪರಿಸ್ಥಿತಿಯ ಬಗ್ಗೆ ಮೊದಲು ಮೌಲ್ಯಮಾಪನ ಪಡೆಯುವ ಗುರಿ ಹೊಂದಿದೆ. ಆರ್ಟಿಕಲ್​ 370 ಇಲ್ಲಿನವರ ಕಣ್ಣು ತೆರೆಸಿದೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.