ETV Bharat / bharat

ಪೊಲೀಸ್​ ಎನ್ಕೌಂಟರ್​ನಲ್ಲಿ ಮೋಸ್ಟ್​ ವಾಂಟೆಡ್​ ಆರೋಪಿ ಅರೆಸ್ಟ್! - Noida news

ಮೋಸ್ಟ್​ ವಾಂಟೆಡ್​​ ಕ್ರಿಮಿನಲ್​ ಒಬ್ಬನನ್ನು ಪೊಲೀಸರು ನೋಯ್ಡಾದಲ್ಲಿ ಬಂಧಿಸಿದ್ದು, ಈತನ ಬಗ್ಗೆ ಮಾಹಿತಿ ನೀಡಿದವರಿಗೆ 25 ಸಾವಿರ ಬಹುಮಾನ ಘೋಷಿಸಲಾಗಿತ್ತು.

arrest of miscreant by police in Noida
ಮೋಸ್ಟ್​ ವಾಂಟೆಡ್​ ಆರೋಪಿ ಅರೆಸ್ಟ್
author img

By

Published : Aug 19, 2020, 5:00 PM IST

ನೋಯ್ಡಾ(ಉತ್ತರ ಪ್ರದೇಶ): ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೋಸ್ಟ್​ ವಾಂಟೆಡ್​​ ಕ್ರಿಮಿನಲ್​ ಒಬ್ಬನನ್ನು ಪೊಲೀಸರು ನೋಯ್ಡಾದಲ್ಲಿ ಮಂಗಳವಾರ ಬಂಧಿಸಿದ್ದು, ಕಾರ್ಯಾಚರಣೆ ವೇಳೆ ಪೊಲೀಸರು ಆರೋಪಿ ಕಾಳಿಗೆ ಗುಂಡು ಹೊಡೆದಿದ್ದಾರೆ.

ವರದಿಗಳ ಪ್ರಕಾರ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮತ್ತು ಪೊಲೀಸರ ನಡುವೆ ಪರಸ್ಪರ ಲಘು ಗುಂಡಿನ ದಾಳಿ ನಡೆದಿದೆ. ಎನ್ಕೌಂಟರ್ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಲು ಪ್ರಯತ್ನಿಸಿದಾಗ ಆರೋಪಿಗಳು ಪೊಲೀಸರಿಗೆ ಗುಂಡು ಹಾರಿಸಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಪೊಲೀಸರು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಆರೋಪಿ ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದಾನೆ. ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಮೋಸ್ಟ್​ ವಾಂಟೆಡ್​ ಆರೋಪಿ ಅರೆಸ್ಟ್

ಗೌತಮ ಬುದ್ಧನಗರದ ಇಕೋಟೆಕ್-3 ಪೊಲೀಸ್ ಠಾಣೆ ಬಳಿ ನಡೆದ ಫೈರಿಂಗ್​ನಲ್ಲಿ ಆರೋಪಿ ಅರ್ಬಾಝ್​ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಒಂದು ನಾಡ ಪಿಸ್ತೂಲ್ ಹಾಗೂ ಬೈಕ್​ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ಘೋಷಿಸಲಾಗಿತ್ತು. ಸದ್ಯ ಈತ ಪೊಲೀಸರ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.