ETV Bharat / bharat

ಭಾರತ್​​ ಬಂದ್​ ವೇಳೆಯೇ ಬಂದ ರೈಲು: ಚೆಲ್ಲಾಪಿಲ್ಲಿಯಾಗಿ ಪ್ರಾಣ ಉಳಿಸಿಕೊಂಡ ಆರ್​ಜೆಡಿ ಕಾ​ರ್ಯಕರ್ತರು - ಆರ್​ಜೆಡಿ ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರು

ರೈಲ್ವೆ ಟ್ರ್ಯಾಕ್​ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 25 ಮಂದಿ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಕಾರ್ಯಕರ್ತರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ..

RJD supporters narrowly escape death on rail tracks
ಆರ್​ಜೆಡಿ ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರು
author img

By

Published : Dec 8, 2020, 10:06 PM IST

Updated : Dec 8, 2020, 10:43 PM IST

ಪಾಟ್ನಾ (ಬಿಹಾರ): ಭಾರತ್ ಬಂದ್ ವೇಳೆ ರೈಲ್ವೆ ಟ್ರ್ಯಾಕ್​ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 25 ಮಂದಿ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಕಾರ್ಯಕರ್ತರು ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ನಳಂದಾ ಬಳಿಯ ರೈಲ್ವೆ ಟ್ರ್ಯಾಕ್​​ ಬಳಿ ಆರ್​ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ರಾಜಗೀರ್ ಮತ್ತು ನವದೆಹಲಿ ನಡುವೆ ಸಂಚಾರ ಮಾಡುವ ಶ್ರಮಜೀವಿ ಎಕ್ಸ್​ಪ್ರೆಸ್ ರೈಲನ್ನು ಪಾವಾಪುರಿ ರೈಲು ನಿಲ್ದಾಣದಲ್ಲಿ ತಡೆಯಲು ಮುಂದಾಗಿದ್ದಾರೆ.

ಆರ್​ಜೆಡಿ ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರು

ಈ ವೇಳೆ ರೈಲು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ರೈಲು ಮುಂದೆ ಚಲಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದ 25ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ರೈಲ್ವೆ ಟ್ರ್ಯಾಕ್​​ನಿಂದ ಹೊರಗೆ ಬಂದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಮಂಜು ಆವರಿಸಿದ್ದ ಕಾರಣದಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ರೈಲು ಚಾಲಕನಿಗೆ ದೂರಕ್ಕೆ ಕಾಣಿಸಲಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್​ಜೆಡಿ ಪಕ್ಷದ ನಳಂದಾ ಜಿಲ್ಲೆಯ ನಾಯಕ ಅಶೋಕ್ ಕುಮಾರ್ ಸುಮನ್, ಇದು ರೈಲ್ವೆ ಇಲಾಖೆಯಿಂದಾದ ಅಮಾನವೀಯ ವರ್ತನೆ ಎಂದು ಕಿರಿಕಾರಿದ್ದಾರೆ.

ನಂತರ ಆರ್​ಜೆಡಿ ಕಾರ್ಯಕರ್ತರು ಮತ್ತೊಂದು ರೈಲ್ವೆ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ್​​ ಬಂದ್​ ವೇಳೆಯೇ ಬಂದ ರೈಲು: ಚೆಲ್ಲಾಪಿಲ್ಲಿಯಾಗಿ ಪ್ರಾಣ ಉಳಿಸಿಕೊಂಡ ಆರ್​ಜೆಡಿ ಕಾ​ರ್ಯಕರ್ತರು

Last Updated : Dec 8, 2020, 10:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.