ನವದೆಹಲಿ: ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) 20 ನೌಕರರಿಗೆ ಸೋಂಕು ತಗುಲಿದ್ದು, ಅವೆರಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಿಬ್ಬಂದಿ ಸಂಪರ್ಕಕ್ಕೆ ಬಂದವರನ್ನೆಲ್ಲಾ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಕೊರೊನಾ ವೈರಸ್ ವಿರುದ್ಧ ಡಿಎಂಆರ್‌ಸಿ ಕೂಡ ಹೋರಾಟ ನಡೆಸುತ್ತಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ನೌಕರರು ದುರದೃಷ್ಟವಶಾತ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ, ಅವರೆಲ್ಲರೂ ಸುರಕ್ಷಿತರಾಗಿದ್ದಾರೆ.
ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಗು ಸಿಂಗ್ ಅವರು ಸಾಮಾಜಿಕ ಅಂತರ ಪಾಲಿಸುವಂತೆ ನೌಕರರಿಗೆ ಮನವಿ ಮಾಡಿದ್ದಾರೆ. ಕೊರೊನಾ ಬಿಕ್ಕಟ್ಟಿನಲ್ಲೂ ಮೆಟ್ರೊ ಸೇವೆಯಲ್ಲಿ ಉತ್ಸಾಹ ಹೆಚ್ಚಿಸಿದೆ. ಸೋಂಕಿಗೆ ಒಳಗಾದವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಎಂದು ಅವರು ಹಾರೈಸಿದರು.
ಈವರೆಗೂ ದೆಹಲಿಯಲ್ಲಿ 25,004 ಪ್ರಕರಣಗಳಿದ್ದು, 650 ಮಂದಿ ಮೃತಪಟ್ಟಿದ್ದಾರೆ. 9,898 ಮಂದಿ ಗುಣಮುಖರಾಗಿದ್ದು, 14,456 ಸಕ್ರಿಯ ಪ್ರಕರಣಗಳಿವೆ.