ಚಂಡಿಗಡ್ (ಪಂಜಾಬ್): ಮೊಹಾಲಿಯ ಇಂಜಿನಿಯರ್ ಮತ್ತು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರ ಪುತ್ರ ಕ್ಯಾಪ್ಟನ್ ವಿಭೋರ್ ಗುಲಾಟಿ ಎಂಬುವರು ಪಿನಾಕಾ ಮಲ್ಟಿ ಲಾಂಚ್ ರಾಕೆಟ್(ಎಂಎಲ್ಆರ್ಎಸ್) ವ್ಯವಸ್ಥೆಯನ್ನು ನಾಳೆ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ನಲ್ಲಿ ಪ್ರತಿನಿಧಿಸಲಿದ್ದಾರೆ.
ಕ್ಯಾಪ್ಟನ್ ವಿಭೋರ್ ಗುಲಾಟಿ ಅವರು ಭಾರತೀಯ ಸೇನೆಯನ್ನು ಸೇರುವ ಮೊದಲು ಬೆಂಗಳೂರಿನಲ್ಲಿ ಡೇಟಾ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಇವರು ಪಿನಾಕಾ ಮಲ್ಟಿ ಲಾಂಚ್ ರಾಕೆಟ್(ಎಂಎಲ್ಆರ್ಎಸ್) ಅನ್ನು ಲಾಂಚ್ ಮಾಡುವ ವ್ಯವಸ್ಥೆಯನ್ನು ಸೇನೆಯ ಪ್ರತಿನಿಧಿಯಾಗಿ ನಾಳಿನ ಗಣರಾಜ್ಯೋತ್ಸವದಲ್ಲಿ ಮುನ್ನಡೆಸಲಿದ್ದಾರೆ.
ನಮ್ಮ ದೇಶದ ಅತ್ಯಾಧುನಿಕವಾದ ತಂತ್ರಜ್ಞಾನಗಳನ್ನು ಬಳಸಿಕೊಂಡು ಪಿನಾಕಾ ರಾಕೆಟ್ ಲಾಂಚರ್ನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸುಮಾರು 37.5 ಕಿ.ಮೀ. ಸಾಗುವ ಮೂಲಕ ಶತ್ರುಗಳನ್ನು ನಾಶ ಪಡಿಸುವಂತಹ ಶಕ್ತಿಯನ್ನು ಹೊಂದಿದ್ದು, ಭವಿಷ್ಯದಲ್ಲಿ ಇವು 90 ಕಿ.ಮೀ ವೇಗದಲ್ಲಿಯೂ ಗುಂಡು ಹಾರಿಸುವ ಸಾಮರ್ಥ್ಯ ಹೊಂದಲಿವೆ ಎಂದು ಕ್ಯಾಪ್ಟನ್ ಹೇಳಿದ್ದಾರೆ.