ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ಅವರು ಮಲೈಕಾ ಅರೋರಾ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಕ್ಕಾಗಿ ಈ ಹಿಂದೆ ಸುದ್ದಿಯಲ್ಲಿದ್ದರು. ಆದರೆ ಈಗ ತಮ್ಮ ಮೊದಲ ಡೇಟಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ.
ನಿರ್ಮಾಪಕ ಕರುಣ್ ಜೊಹಾರ್ ನಿರೂಪಣೆಯ ಇತ್ತೀಚಿನ ರಿಯಾಲಿಟಿ ಶೋ ವಾಟ್ ದಿ ಲವ್ ನಲ್ಲಿ ತಮ್ಮ ಪ್ರೀತಿ ವಿಷಯಗಳ ಬಗ್ಗೆ ಅವರು ಬಾಯ್ಬಿಟ್ಟಿದ್ದಾರೆ. ಕರಣ್ ಇತ್ತೀಚೆಗೆ ಸ್ಪರ್ಧಿ ಆಶಿಯನ್ನು ಅರ್ಜುನ್ ಜೊತೆಗೆ ಡೇಟಿಂಗ್ ಕಳುಹಿಸಲು ನಿರ್ಧರಿಸಿದ್ದರು. ಅದರಂತೆ ಅರ್ಜುನ್ ಬಳಿ ಆಶಿ ತಾನು ಇಷ್ಟಪಡುವ ಬಗ್ಗೆ ತಿಳಿಸಿದ್ದರು. ಅಲ್ಲದೇ ನನ್ನ ಗಮನವನ್ನು ಸೆಳೆಯಲು ಪ್ರಯತ್ನ ಪಡುತ್ತಿದ್ದಳು ಎಂದು ಅರ್ಜುನ್ ಹೇಳಿಕೊಂಡಿದ್ದಾರೆ.
ನಂತರ ತನ್ನ ಮೊದಲ ಡೇಟಿಂಗ್ ಅನುಭವದ ಬಗ್ಗೆ ಕರುಣ್ ಜೊತೆ ಮಾತನಾಡುತ್ತಾ, "ಇದು ನನ್ನ ಮೊದಲ ಡೇಟಿಂಗ್, ವಾಸ್ತವವಾಗಿ ನಿಜವಾಗಿಯೂ, ನಾನು ನಟನಾದಾಗಿನಿಂದ ಇದು ಆಶ್ಚರ್ಯಕರವಾಗಿ ಖುಷಿಯಾಗಿದೆ. ನಾನು ಆತಂಕದಲ್ಲಿದ್ದೆ, ಆದರೆ ಅದು ಚೆನ್ನಾಗಿತ್ತು. ಆಶಿ ತಮಾಷೆಯ ಹುಡುಗಿ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾಳೆ. ನಾನು ತುಂಬಾ ಖುಷಿ ಪಟ್ಟಿದ್ದೇನೆಂದು ಅರ್ಜುನ್ ತಿಳಿಸಿದ್ದಾರೆ.