ETV Bharat / bharat

ಯಾರೂ ನಿರ್ಗತಿಕರೇ ಅಲ್ಲ, ನೆಲೆ ಇಲ್ಲದವರಿಗಿದೇ ಅಪ್ನಾ ಘರ್‌: ಭಾರದ್ವಾಜ ದಂಪತಿಯ ಮಾನವೀಯ ಕಾರ್ಯ..! - ಅಪ್ನಾ ಘರ್

ಅಪ್ನಾ ಘರ್ ಆಶ್ರಮದಲ್ಲಿ ಪ್ರಸ್ತುತ ಸಾವಿರಾರು ನಿರ್ಗತಿಕ ಮಕ್ಕಳು, ಯುವಕರು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ.

Apna Ghar ashram special story
ನಿರ್ಗತಿಕರ ಪಾಲಿನ ಆಶ್ರಯದಾತ ‘ಅಪ್ನಾ ಘರ್’
author img

By

Published : Sep 10, 2020, 6:00 AM IST

ಭರತ್ಪುರ(ರಾಜಸ್ಥಾನ): ಗಂಡ ತೊರೆದ ಹೆಣ್ಣುಮಕ್ಕಳು. ಮಗನಿಂದ ಬೇರ್ಪಟ್ಟ ಹೆತ್ತವರು. ಪೋಷಕರಿಂದ ದೂರವಾದ ಮಕ್ಕಳಿಗಿದು ನಮ್ಮ ಮನೆ ಎಂಬಂತಿದೆ. ಇಂಥವರಿಗೆ ಆಶ್ರಯ ಕಲ್ಪಿಸಲು ಕಟ್ಟಿಸಿರುವ ಈ ಆಶ್ರಮಕ್ಕೆ ಅಪ್ನಾ ಘರ್ ಎಂದು ಹೆಸರು.

ದೇಶದಲ್ಲಿ ಯಾರೂ ಬೀದಿ ಹೆಣ ಆಗಬಾರದು ಎಂಬುದೇ ಇದರ ಉದ್ದೇಶ. ಕಳೆದ 20 ವರ್ಷಗಳಿಂದ ನಿರ್ಗತಿಕರನ್ನ ಆಶ್ರಯ ನೀಡಿ ಆರೈಕೆ ಮಾಡ್ತಿದೆ. ಭಾರತ ಮತ್ತು ನೇಪಾಳ ಸೇರಿ ಸುಮಾರು 36 ಅಪ್ನಾ ಘರ್‌ ಶಾಖೆಗಳಿವೆ. ಪ್ರಸ್ತುತ 6,400 ನಿರ್ಗತಿಕರಿಗೆ ಆಶ್ರಯ ಕಲ್ಪಿಸಿದೆ. ಡಾ. ಬಿ ಎಂ ಭಾರದ್ವಾಜ್ ಮತ್ತು ಮಾಧುರಿ ಭಾರದ್ವಾಜ್ ಇದರ ಸಂಸ್ಥಾಪಕರು. ಈವರೆಗೂ 22,000ಕ್ಕೂ ಅಧಿಕ ನಿರ್ಗತಿಕರ ಪಾಲನೆ ಮಾಡಿ, ಮರಳಿ ಅವರವರ ಕುಟುಂಬ ಅಥವಾ ಸಂಬಂಧಿಗಳ ಬಳಿ ಸೇರಿಸುವ ಮಹತ್ಕಾರ್ಯ ಮಾಡಲಾಗಿದೆ.

ನಿರ್ಗತಿಕರ ಪಾಲಿನ ಆಶ್ರಯದಾತ ‘ಅಪ್ನಾ ಘರ್’

2000ದಲ್ಲಿ ಅಪ್ನಾ ಘರ್ ಆಶ್ರಮ ಸ್ಥಾಪಿಸಲಾಯಿತು. ಪ್ರಸ್ತುತ, 6400 ನಿರ್ಗತಿಕ ಮಕ್ಕಳು, ಯುವಕರು, ಮಹಿಳೆಯರು ಮತ್ತು ವೃದ್ಧರು ಆಶ್ರಮದಲ್ಲಿದ್ದಾರೆ. ಇನ್ನೂ ಮೂರು ಶಾಖೆ ತೆರೆಯಲು ಯೋಜಿಸಲಾಗಿದೆ. ಅಪ್ನಾ ಘರ್ ಅಸಹಾಯಕರಿ ಕಾಳಜಿ ಜತೆಗೆ ಅವರನ್ನ ಬೆಂಬಲಿಸುತ್ತೆ. ಅನಾರೋಗ್ಯ ಮತ್ತು ಗಾಯಗೊಂಡ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಚಿಕಿತ್ಸೆ ಸಹ ಕಲ್ಪಿಸ್ತಿದೆ. ಕಳೆದ 20 ವರ್ಷಗಳಲ್ಲಿ, 22,000 ಜನರನ್ನ ಮರಳಿ ಅವರ ಮನೆಗಳಿಗೆ ಸೇರಿಸಲಾಗಿದೆ.

ಬಾಂಗ್ಲಾದೇಶದ 50 ಮಂದಿ ಸಹ ಅದರಲ್ಲಿ ಸೇರಿದ್ದಾರೆ. ಡಾ.ಭಾರದ್ವಾಜ್ ಅವರ ಪ್ರಕಾರ, ಪ್ರತಿದಿನ 4-5 ವ್ಯಕ್ತಿಗಳು ಮತ್ತು ಪ್ರತಿ ತಿಂಗಳು ಸುಮಾರು 150 ಜನ ವಿವಿಧ ಕಾಯಿಲೆಗಳಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇಲ್ಲಿನ ನಿರ್ಗತಿಕರನ್ನು ಅವರ ಕುಟುಂಬಗಳೊಂದಿಗೆ ಸೇರಿಸಲು ಆಶ್ರಮದ ಹತ್ತು ಸ್ವಯಂಸೇವಕರ ತಂಡ ನಿಯೋಜಿಸಲಾಗಿದೆ. ಇವರು ಪೊಲೀಸರ ಸಹಕಾರದಿಂದ ಅವರಿಗೆ ಮರಳಿ ಮನೆಗೆ ತೆರಳಲು ಸಹಾಯ ಮಾಡುತ್ತಾರೆ.

ಡಾ.ಭಾರದ್ವಾಜ್ ಅವರ ಅಪ್ನಾ ಘರ್ ಸಂಪೂರ್ಣ ಸಾರ್ವಜನಿಕರ ಕೊಡುಗೆ ಅವಲಂಬಿದೆ. ಅಪ್ನಾ ಘರ್‌ಗೆ ಏನಾದರೂ ಸಹಾಯ ಬೇಕಾದಾಗ, ಆಶ್ರಮದ ಹೊರಗೆ ನೋಟಿಸ್ ಬೋರ್ಡ್‌ನಲ್ಲಿ ದೇವರಿಗೆ ಪತ್ರ ಬರೆಯಲಾಗುತ್ತದೆ. ಸಾರ್ವಜನಿಕರಲ್ಲಿ ಲೋಕೋಪಕಾರಿಗಳು ನೋಟಿಸ್ ಬೋರ್ಡ್‌ನ ಓದುತ್ತಾರೆ ಮತ್ತು ಆಶ್ರಮಕ್ಕೆ ಅಗತ್ಯ ಸಹಾಯ ನೀಡುತ್ತಾರೆ.

ಭಾರದ್ವಾಜ್ ದಂಪತಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಜನಪ್ರಿಯ ರಿಯಾಲಿಟಿ ಶೋ “ಕೌನ್ ಬನೇಗಾ ಕರೋಡ್​ಪತಿ”ಯಲ್ಲಿ ಭಾಗವಹಿಸಲು ಇವರಿಗೆ ಆಮಂತ್ರಿಸಲಾಗಿತ್ತು. ಈಗ ಶೀಘ್ರದಲ್ಲೇ 426 ಕೋಟಿ ರೂ. ವೆಚ್ಚದಲ್ಲಿ 150 ಬಿಘಾ ಭೂಮಿಯಲ್ಲಿ ನಿರ್ಗತಿಕರಿಗೆ ವಿಶ್ವ ದರ್ಜೆಯ ಆಶ್ರಮ ಕಟ್ಟಲು ಅಡಿಪಾಯ ಹಾಕಲಿದ್ದಾರಂತೆ ಡಾ. ಭಾರದ್ವಾಜ್‌. ಇಂಥವರ ಸಂಖ್ಯೆ ಸಾವಿರ, ಲಕ್ಷವಾಗಲಿ. ನಿರ್ಗತಿಕರಿಗೆ ಆಶಾಕಿರಣ ಬೆಳಗುತಿರಲಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.