ಹೈದರಾಬಾದ್: ದೇಶಾದ್ಯಂತ ಎಲ್ಲ ವಲಯಗಳು ಮಾರಾಟಕ್ಕೆ ಮುಕ್ತವಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂದು ಸರಿಯಾಗಿಯೇ ಹೇಳಿದ್ದಾರೆ. ಇದೇ ರೀತಿ ಮಾಡಲು ದೇಶದ ಬೆನ್ನೆಲುಬು ರೈತರಿಗೆ ಯಾಕೆ ಅವಕಾಶ ಕೊಡಬಾರದು? ಮೇಲ್ನೋಟಕ್ಕೆ ಈ ವಾದವು ನಮ್ಮೆಲ್ಲರಿಗೂ ನ್ಯಾಯಯುತ ಪ್ರತಿಪಾದನೆಯಂತೆ ತೋರುತ್ತದೆ, ಆದರೆ ಇದು ಸರಿಯೇ?
ಈ ಪ್ರಶ್ನೆಗೆ ಸೂಕ್ತ ಉತ್ತರ ಹುಡುಕಬೇಕಾದರೆ ನಾವು ನಮ್ಮ ಭಾರತ ದೇಶದ ಸಂವಿಧಾನದ ಸ್ಥಾಪನಾ ವಿಚಾರಗಳಿಗೆ ಹಿಂತಿರುಗಬೇಕಾಗಿದೆ. ಈಸ್ಟ್ ಇಂಡಿಯನ್ ಕಂಪನಿಯ (ವಿಶ್ವದ ಮೊದಲ ಕೃಷಿ-ವ್ಯವಹಾರ ಎಂಎನ್‌ಸಿ) 350 ವರ್ಷಗಳ ಶೋಷಣೆಯ ನಂತರ, ಭಾರತೀಯ ರೈತರನ್ನು ಕನಿಷ್ಠ ಮಟ್ಟಕ್ಕೆ ಇಳಿಸಲಾಯಿತು. ಈ ಸಂದರ್ಭ ನಾವು ವಿನ್ ಸ್ಟನ್ ಚರ್ಚಿಲ್ ಅವರ ಸುಜನನಶಾಸ್ತ್ರ ನೀತಿಗೆ ಧನ್ಯವಾದ ಹೇಳಲೇಬೇಕು. ಬಂಗಾಳವು ಮಹಾ ಬರಗಾಲವನ್ನು ಅನುಭವಿಸುತ್ತಿದ್ದರೆ ಇತ್ತ ದೇಶದ ಉಳಿದ ಭಾಗದ ಜನ ನಿರ್ಗತಿಕರಾಗಿದ್ದರು. ಆದರೆ, ವೈಸ್‌ರಾಯ್ ಮತ್ತು ಅವರ ಪಕ್ಷಗಳು ಮಾತ್ರ ‘ಜಿನ್ ಮತ್ತು ಟಾನಿಕ್’ ಹೊಳೆಯಲ್ಲಿ ತೇಲುತ್ತಿದ್ದರು. ಕೃಷಿ-ನಿಗಮಗಳ ಅತಿರೇಕದ ಶೋಷಣೆಗೆ ಸಾಕ್ಷಿಯಾದ ಭಾರತೀಯ ಶಾಸಕಾಂಗದ ಪ್ರತಿನಿಧಿಗಳು ಏಳನೇ ವೇಳಾಪಟ್ಟಿ (ಆರ್ಟಿಕಲ್ 246) ಮೂಲಕ “ಕೃಷಿ” ಯನ್ನು ಪ್ರವೇಶ 14 ರಲ್ಲಿ ಮತ್ತು “ಮಾರುಕಟ್ಟೆ ಮತ್ತು ಮೇಳಗಳನ್ನು” ರಾಜ್ಯ ಪಟ್ಟಿಯ 28 ನೇ ಸ್ಥಾನದಲ್ಲಿ ಇರಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ, ಭಾರತವು ತನ್ನ ಭೂಮಿ ಮೇಲೆ ಅಂತಹ ಕ್ರೂರ ಸ್ವಾಧೀನದ ದಾಳಿಗೆ ತುತ್ತಾಗುವುದಿಲ್ಲ.
ವಿವಿಧ ರೀತಿಯ ಪ್ರತಿಯೊಂದು ಗಾತ್ರದ ಭೂಮಿಗಲ್ಲು ಎಲ್ಲ ರೀತಿಯ ಬೆಲೆ ಬೆಳೆಯಲು ಮತ್ತು ಮಾರುಕಟ್ಟೆಗಳಿಗೆ ಸರಿ ಹೊಂದುವುದಿಲ್ಲವಾದ್ದರಿಂದ ಅವರು ತಮ್ಮ ಸ್ವಂತ ಹೊಲಗಳ ಮೇಲೆ ರಾಜ್ಯಗಳಿಗೆ ಅತ್ಯುನ್ನತ ಸ್ವಾಯತ್ತತೆಯನ್ನು ನೀಡಲು ಮತ್ತು ಜಮೀನಿನನಲ್ಲಿ ಉತ್ಪಾದನೆಗೆ ಅವಕಾಶ ನೀಡಲು ಬಯಸಿದ್ದರು. ಪ್ರತಿಯೊಂದು ಪ್ರದೇಶ ಮತ್ತು ಕೃಷಿ - ಹವಾಮಾನವು ತನ್ನದೇ ಆದ ಸಾಮಾಜಿಕ ಮತ್ತು ಆರ್ಥಿಕ ಅಭ್ಯಾಸಗಳೊಂದಿಗೆ ಭಿನ್ನವಾಗಿವೇ. ಹೀಗಾಗಿ, ಕೇಂದ್ರ ನಿಯಂತ್ರಣ ನೀತಿಯು ಪ್ರಮಾದ ಮತ್ತು ಸಂಪೂರ್ಣ ದಬ್ಬಾಳಿಕೆಯಾಗಿದೆ.
ಎಪಿಎಂಸಿ (ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳು) ಕಾಯ್ದೆಯು ದೇಶದ ದೂರದ ಭಾಗದಲ್ಲಿರುವ ಪ್ರತಿಯೊಬ್ಬ ರೈತರಿಗೆ ಕನಿಷ್ಠ ನ್ಯಾಯಯುತವಾಗಿ ನಡೆಸಿಕೊಂಡಿವೆ ಮತ್ತು ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಾನ ಅವಕಾಶವನ್ನು ಕಲ್ಪಿಸಿವೆ. ಇದು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ನಿಲುಗಡೆ ಪರಿಶೀಲನೆಯಾಗಿಯೂ ಕಾರ್ಯನಿರ್ವಹಿಸಿತು, ಅಲ್ಲಿ ಅವರು ಪದಾರ್ಥದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬಹುದು, ಆದರೆ ಯಾವುದೇ ರೈತ ಅಥವಾ ವ್ಯಾಪಾರಿ ಅನ್ಯಾಯದ ಚೌಕಾಸಿ ಮಾಡುತ್ತಿರಲಿಲ್ಲ. ಸ್ಥಳೀಯ ರೈತರು ಮತ್ತು ವ್ಯಾಪಾರಿಗಳು ಸೇರಿದಂತೆ ಸ್ಥಳೀಯ ಪ್ರತಿನಿಧಿಗಳಿಂದ ಎಪಿಎಂಸಿ ಸಮಿತಿಯನ್ನು ರಚಿಸಲಾಯಿತು. ಒಮ್ಮೆ ಇದರಲ್ಲಿ ಲೋಪಗಳು ಕಂಡುಬಂದವು. ಎಲ್ಲಿ ರೈತರು ಒತ್ತಡದ ಮೇಲೆ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳ ಮಾರಾಟ ಅಥವಾ ಅನ್ಯಾಯದ ಬೆಳೆಗೆ ಮಾರುತ್ತಿದ್ದರೋ ಅಲ್ಲಿ ಮಂದಿ ವ್ಯಾಪ್ತಿಯನ್ನ ಮೀರಿ ಅಂತಾರಾಜ್ಯದವರೆಗೂ ಎಪಿಎಂಸಿ ಮಾರಾಟ ವ್ಯಾಪ್ತಿಯನ್ನ ವಿಸ್ತರಿಸಲಾಯಿತು.
ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಕನಿಷ್ಠ ಬೆಂಬಲ ಬೆಲೆಗಳು ರೈತರಿಗೆ ತಲುಪುವಂತೆ ನೋಡಿಕೊಳ್ಳಲು ಇದನ್ನು ಮಾಡಲಾಗಿದೆ. ಮಂದಿ ಇಲ್ಲದಿದ್ದರೆ ಎಂಎಸ್‌ಪಿಯನ್ನು ರೈತರಿಗೆ ತಲುಪಿಸುವುದು ಅಸಾಧ್ಯ. ವ್ಯಾಪಾರಿಯಂತೆ ಬೆಂಬಲ ಬೆಲೆಯನ್ನು ತಲುಪಿಸಲು ಖಾಸಗಿ ಉದ್ಯಮವನ್ನು ಇನ್ನೂ ನಂಬಲು ಸಾಧ್ಯವಿಲ್ಲ. ಐತಿಹಾಸಿಕವಾಗಿ, ಬೆಲೆ ನಿಯಂತ್ರಣವನ್ನು ಕಾಪಾಡುವ ನಿಯಮಗಳನ್ನು ತೆಗೆದುಹಾಕಿದ ನಂತರ, ಅಮೇರಿಕ ಮತ್ತು ಜಾಗತಿಕ ಮಟ್ಟದಲ್ಲಿ ಕೃಷಿ-ವ್ಯಾಪಾರ ದೈತ್ಯರಾದ ಕಾರ್ಗಿಲ್, ಲೂಯಿಸ್ ಡ್ರೆಫಿಯಸ್ ಮುಂತಾದವರು ಪ್ರಾಬಲ್ಯ ಸಾಧಿಸಿದ್ದನ್ನ ನಾವು ನೋಡಿದ್ದೇವೆ. ಆ ಬಳಿಕ, ರೈತ ಸಹಕಾರ ಸಂಘಗಳನ್ನು ವ್ಯವಸ್ಥಿತವಾಗಿ ಒಡೆಯಲಾಯಿತು ಮತ್ತು “ಮಾರುಕಟ್ಟೆ ಶಕ್ತಿಗಳು” ಅಮೇರಿಕಾದಲ್ಲಿ ಕೃಷಿ ಗುಲಾಮಗಿರಿಯ ಹೊಸ ಯುಗಕ್ಕೆ ಕಾರಣವಾದವು. ಇದರ ಫಲಿತಾಂಶವೆಂದರೆ, 2020 ರಲ್ಲಿ ಅಮೆರಿಕದ ಕೃಷಿ ಸಾಲವು 25 425 ಬಿಲಿಯನ್ ಮತ್ತು ಕೇವಲ ನಾಲ್ಕೇ ನಾಲ್ಕು ಕಂಪನಿಗಳು ವಿಶ್ವದ ಧಾನ್ಯ ಪೂರೈಕೆಯ ಶೇ. 70 ಕ್ಕಿಂತ ಅಧಿಕ ಪ್ರಮಾಣವನ್ನ ನಿಯಂತ್ರಿಸುತ್ತವೆ.
ಬಿಹಾರದ ಕುತೂಹಲಕಾರಿ ಪ್ರಕರಣ
ರೈತರ ಬೆಳೆಗೆ ಉತ್ತಮ ಬೆಲೆ ಒದಗಿಸುವ ಯತ್ನದಲ್ಲಿ ಬಿಹಾರವು 2006ರಲ್ಲಿ ಎಪಿಎಂಸಿ ಕಾಯ್ದೆ ತೆಗೆದುಹಾಕಿತು. ಖಾಸಗಿ ವಲಯವನ್ನು ರಾಜ್ಯಕ್ಕೆ ಪ್ರವೇಶಿಸಲು ಮತ್ತು ಪೂರೈಕೆ ಸರಪಳಿಗಳು- ಮಾರುಕಟ್ಟೆ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಿತು. ಆದರೆ, ಅವರ ನಿರೀಕ್ಷೆ ಹುಸಿಯಾಗಿ ಎಲ್ಲವು ವಿರುದ್ದವಾಯಿತು. ಕೃಷಿ - ವ್ಯಾಪಾರಿಗಳು ಹೇಳಿದಂತೆ ಸಾಕಷ್ಟು ಹೂಡಿಕೆ ಮಾಡಲಿಲ್ಲ, ಆದರೆ, ಕಷ್ಟ ಪಟ್ಟು ಕೃಷಿ ಮಾಡುತ್ತಿದ್ದ ರೈತರು ವ್ಯಾಪಾರಿಗಳಿಂದ ಮತ್ತಷ್ಟು ಹಿಂಡಲ್ಪಟ್ಟರು, ಎಪಿಎಂಸಿ ಕಾಯ್ದೆಯ ಕೊರತೆಯಿಂದಾಗಿ ರೈತರ ಉತ್ಪನ್ನಗಳಿಗೆ ವ್ಯಾಪಾರಿಗಳು ತಮಗೆ ಇಷ್ಟ ಬಂದಂತೆ ಕಡಿಮೆ ಬೆಲೆಯನ್ನು ನೀಡಲು ಮುಂದಾದರು ಮತ್ತು ನಂತರ ವರ್ಷದಿಂದ ವರ್ಷಕ್ಕೆ ಆಹಾರ ಪದಾರ್ಥಗಳನ್ನ ಪ್ಯಾಕ್ ಮಾಡಿ ಪಂಜಾಬ್ ಮತ್ತು ಹರಿಯಾಣದಾದ್ಯಂತ ಮಂಡಿಗಳಲ್ಲಿ ಮಾರಲು ಶುರು ಮಾಡಿದರು. ಈಗ ಈ ಅಕ್ರಮ ವ್ಯಾಪಾರವನ್ನು ಕಾನೂನು ಬದ್ಧಗೊಳಿಸಲಾಗಿದೆ. ಇದರ ಅಡಿ ಸಿಲುಕಿರುವ ರೈತರು ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದಾರೆ. .
ನಮ್ಮ ನಿಜವಾದ ಸಮಸ್ಯೆ ಏನೆಂದರೆ- ಭಾರತಕ್ಕೆ 50,000 ಕ್ಕೂ ಹೆಚ್ಚು ಮಂಡಿಗಳು ಬೇಕಾಗುತ್ತವೆ ಮತ್ತು ನಾವು ಇನ್ನೂ ಕೇವಲ 7000 ನಿಯಂತ್ರಿತ ಮಾರುಕಟ್ಟೆಗಳನ್ನ ಮಾತ್ರ ರಚಿಸುವಲ್ಲಿ ಯಶಸ್ಸು ಕಂಡಿದ್ದೇವೆ. ಒಂದು ವರದಿಯ ಪ್ರಕಾರ ಶೇ. 94ರಷ್ಟು ರೈತರು ಇನ್ನೂ ಆ ಮಂಡಿಗಳಿಗೆ ಪ್ರವೇಶವನ್ನು ಹೊಂದಿಲ್ಲ ಮತ್ತು ಇದರ ಜೊತೆಗೆ ಎಲ್ಲೆಡೆ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಸಮಸ್ಯೆ ಅಲ್ಲಿಯೂ ಇದೆ.
ಮಾನವ ನಿರ್ಮಿತ ಪ್ರತಿಯೊಂದು ವ್ಯವಸ್ಥೆಯು ಮಿತಿ ಮೀರಿದ ದುರಾಸೆ ಮತ್ತು ಭ್ರಷ್ಟಾಚಾರಕ್ಕೆ ಗುರಿಯಾಗುತ್ತದೆ, ಇದರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೊಂಡಿರುವ ಸರ್ಕಾರಗಳು ಬಹುಶಃ ದೊಡ್ಡ ಪ್ರಮಾಣದ ಬಲಿಪಶುಗಳಾಗಿವೆ. ಭ್ರಷ್ಟಾಚಾರ ಮತ್ತು ದುಷ್ಕೃತ್ಯಗಳು ಇರುವುದರಿಂದ ನಾವು ಪ್ರಜಾಪ್ರಭುತ್ವವನ್ನು ಕಳಚುತ್ತೇವೆ ಎಂದರ್ಥವೇ? ಖಂಡಿತಾ ಇಲ್ಲ, ಆದರೆ ಅದೇ ತರ್ಕವನ್ನು ಬಳಸುವುದರಿಂದ, ನಮ್ಮ ಸರ್ಕಾರ ಕೃಷಿ-ವ್ಯವಹಾರ ಮತ್ತು ‘ಕೃಷಿ-ಡಾಲರ್’ಗಳ ಬೆಳವಣಿಗೆಗಾಗಿ ರೈತರ ಹಿತವನ್ನ ತ್ಯಾಗ ಮಾಡಿದೆ. ಈ ಮಧ್ಯೆ, ಎಲ್ಲ ವಲಯಗಳು ಖಾಸಗಿ ಹೂಡಿಕೆಗೆ ಮುಕ್ತವಾಗಿವೆ ಎಂಬ ಹಣಕಾಸು ಸಚಿವರ ತರ್ಕ ಮತ್ತು ಇತರ ಕ್ಷೇತ್ರಗಳೊಂದಿಗೆ ಹೋಲಿಸಿದರೆ, ಅದು ಉತ್ತಮವಾಗಿಲ್ಲ. ಭಾರತವು ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಭೂ ಮಾರಾಟಕ್ಕೆ (ಕೃಷಿ) ನಿರ್ಬಂಧಗಳನ್ನು ಹೊಂದಿದೆ, ಲ್ಯಾಂಡ್ ಸೀಲಿಂಗ್ ಜೊತೆಗೆ ಬೇರೆಡೆ ಕೂಡ ಅದನ್ನ ಜಾರಿ ಮಾಡಬೇಕೆ? ಎಲ್ಲ ಕ್ರಮಗಳು ಕೇವಲ ಆರ್ಥಿಕ ದೃಷ್ಟಿಯಿಂದ ಇರಬಾರದು. ಅವುಗಳು ಜನರನ್ನ ಸೇಫ್ ಗಾರ್ಡ್ ಮಾಡಬೇಕು. .ಹಣಕಾಸು ಸಚಿವರು ಅತಂತ್ರ ಮತ್ತು ಅರ್ಧ ನಿರ್ಧಾರಗಳನ್ನ ಕೈಗೊಳ್ಳಬಾರದು. ಒಂದೋ ನಾವು ಎಲ್ಲ ಅಂಶಗಳಲ್ಲೂ ಉದಾರೀಕರಣಗೊಳಿಸಬೇಕು, ಏಕೆಂದರೆ ಈ ಪೀಸ್ಮೀ-ಲ್ ವಿಧಾನವು ಈಗಾಗಲೇ ನಮ್ಮ ಸಾಕಷ್ಟು ದಣಿದ ಕೃಷಿ ವಲಯವನ್ನು ಮತ್ತಷ್ಟು ಹಾಳುಮಾಡುತ್ತದೆ.
ಅಂತಿಮವಾಗಿ ನಾವು ಪರಿಗಣಿಸಬೇಕಾಗಿರುವುದು ಏನೆಂದರೆ, ಒಂದು ಪಕ್ಷ ಕಳೆದ ಹಲವು ವರ್ಷಗಳಿಂದ ಇಲ್ಲಿಯವರೆಗೂ ಬಿಹಾರದಲ್ಲಿ ಆಗಿರುವ ಖಾಸಗೀಕರಣದ ಮಾಡೆಲ್ ಸಮಗ್ರ ಭಾರತಕ್ಕೆ ಅನ್ವಯವಾದರೆ, ಕೃಷಿ ಉತ್ಪತ್ತಿ ವೆಚ್ಚ ಹೆಚ್ಚಿರುವ ಈ ಸಂದರ್ಭದಲ್ಲಿ ಕಡಿಮೆ ಬೆಲೆ ನೀಡಿ ರೈತರನ್ನ ಹಿಂಡಿ ಹಿಪ್ಪೆ ಮಾಡಿದರೆ ಭಾರತದ ಕೃಷಿ ವ್ಯವಸ್ಥೆ ಸ್ವಾವಲಂಬಿಯಾಗುವುದಿಲ್ಲ ಬದಲಾಗಿ ಅಗ್ರಿ-ಬ್ಯುಸಿನೆಸ್ ಕಂಪನಿಗಳ ಮೇಲೇ ಪರಾವಲಂಬಿಯಾಗುತ್ತದೆ.
ಭಾರತವು ಮತ್ತೊಂದು ಈಸ್ಟ್ ಇಂಡಿಯಾ ಕಂಪನಿಯ ದಾಳಿಯಿಂದ ತನ್ನ ರೈತರನ್ನು ರಕ್ಷಿಸಲು ಅದು ಬಯಸಿದರೆ. ಅಮೇರಿಕ ದೇಶ ಮಾಡಿದಂತೆ ವ್ಯಾಪಾರಕ್ಕಾಗಿ ಉದ್ಯಮಿಗಳಿಗೆ ಕೃಷಿ ದಾರಿ ತೆರೆಯಲು ಸಾಧ್ಯವಿಲ್ಲ.
ಲೇಖಕರು - ಇಂದ್ರ ಶೇಖರ್ ಸಿಂಗ್
ನಿರ್ದೇಶಕ - ಪಾಲಿಸಿ ಅಂಡ್ ಔಟ್ ರೀಚ್, ನ್ಯಾಷನಲ್ ಸೀಡ್ ಅಸೋಸಿಯೇಶನ್ ಆಫ್ ಇಂಡಿಯಾ