ವಿಶಾಖಪಟ್ಟಣ(ಆಂಧ್ರಪ್ರದೇಶ):ವಿಶಾಖಪಟ್ಟಣಂನಲ್ಲಿ ಕರ್ತವ್ಯದಲ್ಲಿದ್ದಾಗ ನೌಕಾಪಡೆ ಅಧಿಕಾರಿಯೊಬ್ಬರು ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಮೃತ ಅಧಿಕಾರಿ ರಾಹುಲ್ ಜಂಗಿನ್ ಈ ದುರ್ಘಟನೆ ಸಂಭವಿಸಿದಾಗ ಭಾರತೀಯ ನೌಕಾ ಹಡಗು ಐಎನ್ಎಸ್ ರಜಪೂತ್ನಲ್ಲಿ ಕೆಲಸ ಮಾಡುತ್ತಿದ್ದರು.
ವೈದ್ಯಕೀಯ ಅಧಿಕಾರಿಗಳು ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅಧಿಕಾರಿ ಮೃತಪಟ್ಟಿದ್ದಾರೆ.
ಇನ್ನು ಮುಂದಕ್ಕೆ ಈ ರೀತಿಯ ದುರ್ಘಟನೆ ಸಂಭವಿಸದಂತೆ ನೌಕಾಪಡೆಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.
ರಾಹುಲ್ ಜಂಗಿನ್ ಅವರ ಮೃತದೇಹವನ್ನು ರಾಜಸ್ಥಾನದ ಝುಂಝುನು ಎಂಬಲ್ಲಿರುವ ಅವರ ಮನೆಗೆ ತಲುಪಿಸಿ, ಅಲ್ಲಿ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.