ETV Bharat / bharat

ಒಂದು ರಾಜ್ಯ, ಮೂರು ರಾಜಧಾನಿ: ಜಗನ್​ ನಿರ್ಧಾರಕ್ಕೆ ನಾಯ್ಡು ಆಕ್ರೋಶ, ಉಗ್ರ ಹೋರಾಟದ ಎಚ್ಚರಿಕೆ!

ಆಂಧ್ರಪ್ರದೇಶದಲ್ಲಿ ಒಂದು ರಾಜ್ಯ, ಮೂರು ರಾಜಧಾನಿ ಮಸೂದೆ ನಿನ್ನೆ ತಡರಾತ್ರಿ ಅಂಗೀಕಾರಗೊಂಡಿದ್ದು, ಅದರ ವಿರುದ್ಧ ಸಮರ ಸಾರಲು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.

author img

By

Published : Jan 21, 2020, 2:09 AM IST

Updated : Jan 21, 2020, 10:00 AM IST

AP Legislature has approved the ruling decentralization bil
ಜಗನ್​ ನಿರ್ಧಾರಕ್ಕೆ ಚಂದ್ರಬಾಬು ಆಕ್ರೋಶ

ಅಮರಾವತಿ: ಅಧಿಕಾರ ವಿಕೇಂದ್ರೀಕರಣ ಹಾಗೂ ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಆಂಧ್ರಪ್ರದೇಶದ ವಿಧಾನಸಭೆಯಲ್ಲಿ ಮೂರು ರಾಜಧಾನಿ ಮಸೂದೆಗೆ ಸಚಿವ ಸಂಪುಟದಲ್ಲಿ ಅಂಗೀಕಾರ ಸಿಕ್ಕಿದ್ದು, ಬಹಳಷ್ಟು ಹೈಡ್ರಾಮಾದ ನಡುವೆ ತಡರಾತ್ರಿ ಈ ಮಸೂದೆ ಅಂಗೀಕಾರವಾಗಿದೆ.

ಜಗನ್​ ನಿರ್ಧಾರಕ್ಕೆ ಚಂದ್ರಬಾಬು ಆಕ್ರೋಶ

ನೂತನ ನೀತಿಯಿಂದಾಗಿ ವಿಶಾಖಪಟ್ಟಣಂನಲ್ಲಿ ಕಾರ್ಯಾಂಗ, ಅಮರಾವತಿಯಲ್ಲಿ ಶಾಸಕಾಂಗ ಹಾಗೂ ಕರ್ನೂಲ್​​ನಲ್ಲಿ ನ್ಯಾಯಾಂಗ ಆಡಳಿತವಿರಲಿದೆ. ಇದೇ ಕಾರಣಕ್ಕಾಗಿ ಆಂಧ್ರ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ವಿಶೇಷ ಅಧಿವೇಶನ ಕರೆದಿದ್ದರು. ಈ ವೇಳೆ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ್ದಕ್ಕಾಗಿ ತೆಲುಗಂ ದೇಶಂ ಪಕ್ಷದ 17 ಶಾಸಕರನ್ನ ವಿಧಾನಸಭೆಯಿಂದ ಅಮಾನತುಗೊಳಸಲಾಯ್ತು. ಈ ವೇಳೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಪಕ್ಷದ ಇತರೆ ನಾಯಕರು, ವಿಧಾನಸಭೆ ಮುಂಭಾಗ ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಈ ವೇಳೆ ಅವರನ್ನ ವಶಕ್ಕೆ ಪಡೆದುಕೊಂಡು ತದನಂತರ ಮಂಗಳಗಿರಿ ಪೊಲೀಸ್​ ಠಾಣೆಗೆ ಕರೆತಂದು ನಂತರ ರಿಲೀಸ್​ ಮಾಡಲಾಯ್ತು. ಈ ವೇಳೆ ಮಾತನಾಡಿರುವ ಅವರು, ದೇಶದ ಯಾವುದೇ ರಾಜ್ಯದಲ್ಲೂ ಈ ರೀತಿಯ ನಿರ್ಧಾರ ಕೈಗೊಂಡಿಲ್ಲ. ಆಂಧ್ರಪ್ರದೇಶದಕ್ಕೆ ಈ ದಿನ ಕಪ್ಪು ದಿನ. ನಾವು ಅ ಮರಾವತಿ ಹಾಗೂ ಆಂಧ್ರಪ್ರದೇಶ ರಕ್ಷಣೆಗಾಗಿ ಎಲ್ಲ ರೀತಿಯಲ್ಲೂ ಹೋರಾಟ ನಡೆಸಲು ಸಿದ್ಧ ಎಂದು ತಿಳಿಸಿದ್ದಾರೆ.

  • #UPDATE Former Andhra Pradesh CM and TDP chief N Chandrababu Naidu was detained outside the state assembly, as he wanted to go into villages in Amaravati. Police took him and others in a police van and dropped them at his residence. https://t.co/9cN8bGhiEZ

    — ANI (@ANI) January 20, 2020 " class="align-text-top noRightClick twitterSection" data=" ">

Intro:Body:

AP Legislature has approved the ruling decentralization bill.  Assembly passed the bill of three capitals. Executive in Visakha, Legislative Capital in Amravati

Conclusion:
Last Updated : Jan 21, 2020, 10:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.