ETV Bharat / bharat

ಕೋವಿಡ್ ಗುಣಪಡಿಸುವ ಪ್ರತಿಕಾಯ ಅಭಿವೃದ್ಧಿಯಲ್ಲಿ ಮಹತ್ವದ ತಿರುವು; ಲಸಿಕೆ ಇನ್ನೂ ಲಭ್ಯವಿಲ್ಲ: ಇಸ್ರೇಲ್ ರಾಯಭಾರಿ - ಇಸ್ರೇಲ್

ಇಸ್ರೇಲ್‍ನಲ್ಲಿ ಕೊರೊನಾ ವೈರಸ್‍ ಹರಡುವಿಕೆ,ನಿಯಂತ್ರಣ ಹಾಗೂ ಲಸಿಕೆ ಕಂಡು ಹಿಡಿಯುವ ಕಾರ್ಯದ ಪ್ರಗತಿ ಕುರಿತಾಗಿ ಇಸ್ರೇಲ್‍ ರಾಯಭಾರಿ ಡಾ. ರೋನ್ ಮಲ್ಕಾ ಮಾಹಿತಿ ನೀಡಿದ್ದಾರೆ.

AntiBody Breakthrough To Cure Covid19 But Not Vaccine Yet - Israeli Envoy
ಇಸ್ರೇಲ್ ರಾಯಭಾರಿ
author img

By

Published : May 8, 2020, 5:35 PM IST

ಇಸ್ರೇಲ್‍ನಲ್ಲಿ ಕೊರೊನಾ ವೈರಸ್‍ನ್ನು ಗುಣಪಡಿಸಬಲ್ಲ ಪ್ರತಿಕಾಯದ ಸಂಶೋಧನೆಗಳು ಅತ್ಯಂತ ಪ್ರಗತಿಯಲ್ಲಿವೆ ಹಾಗೂ ಅದರಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಅಲ್ಲಿನ ರಾಯಭಾರಿ ಖಚಿತ ಪಡಿಸಿದ್ದಾರೆ. ಆದರೆ ಅವರು ಈಗ ಈ ಪ್ರಗತಿ ಹಾಗೂ ಸಂಶೋಧನೆಗಳು ಯಾವ ಹಂತದಲ್ಲಿದೆ ಎಂಬುದನ್ನು ಖಚಿತಪಡಿಸುವುದು ಹಾಗೂ ಮುಂದಿನ ದಿನಗಳಲ್ಲಿ ಕೋವಿಡ್19 ಮನುಷ್ಯರಿಗೆ ಸೋಂಕದಂತೆ ತಡೆಯಲು ಇದನ್ನು ಲಸಿಕೆಯಾಗಿ ಬಳಸಲು ಸಾಧ್ಯವೇ ಎಂಬುದನ್ನು ಹೇಳುವುದು ಕಷ್ಟ ಎಂದು ತಿಳಿಸಿದ್ದಾರೆ.

"ಸರಕಾರದ ಮಟ್ಟದಲ್ಲಿ ನಾವು ಸಮನ್ವಯ ಸಾಧಿಸುತ್ತಿದ್ದೇವೆ ಹಾಗೂ ಭಾರತ ಹಾಗೂ ಇಸ್ರೇಲ್ ದೇಶಗಳೆರಡರ ವಿಜ್ಞಾನಿಗಳು ಹಾಗೂ ವೃತ್ತಿಪರರು ಜತೆಯಾಗಿ ಲಸಿಕೆ ಹಾಗೂ ಪ್ರತಿಕಾಯ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದೇವೆ. ಈ ನಿರ್ದಿಷ್ಟ ಪ್ರತಿಕಾಯವನ್ನು ಭವಿಷ್ಯದಲ್ಲಿ ಲಸಿಕೆಯಾಗಿ ಬಳಸಲು ಸಾಧ್ಯವಿದೆಯೆನೋ? ಆದರೆ ಸದ್ಯದ ಮಟ್ಟಿಗೆ, ಇದು ಒಂದು ಲಸಿಕೆ ಅಲ್ಲ. ಬದಲಿಗೆ ಮನುಷ್ಯನ ದೇಹದೊಳಕ್ಕೆ ಸೇರಿದರೆ, ಕೊರೊನಾ ವೈರಸ್ ಕೊಲ್ಲಬಲ್ಲ ಒಂದು ಔಷಧ," ಎಂದು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ಡಾ. ರೋನ್ ಮಲ್ಕಾ ತಿಳಿಸಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಸರಣ ತಡೆಯಲು ಸುಮಾರು 50 ವಿಷಯಗಳಲ್ಲಿ ಭಾರತ ಹಾಗೂ ಇಸ್ರೇಲ್ ಜತೆಯಾಗಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಕಡಿಮೆ ವೆಚ್ಚದ ಉಪಕರಣಗಳನ್ನು ಕಂಡುಹಿಡಿಯುವ ಇನ್‍ಕ್ಯುಬೇಟರ್ ಕೂಡಾ ಸೇರಿದೆ. ವಿಜ್ಞಾನ, ತಂತ್ರಜ್ಞಾನ, ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಉತ್ತಮ ನಿರ್ಣಯಗಳನ್ನು ಹಂಚಿಕೊಳ್ಳಲು ಹಾಗೂ ದತ್ತಾಂಶಗಳ ವಿನಿಮಯಕ್ಕೆ ಭಾರತದಲ್ಲಿ ಇಸ್ರೇಲ್ ಈಗಾಗಲೆ ಓರ್ವ ಸಂಪರ್ಕ ಅಧಿಕಾರಿಯನ್ನು ನಾಮಕರಣ ಮಾಡಿದೆ. ಈ ಬಿಕ್ಕಟ್ಟು ಭಾರತ-ಇಸ್ರೇಲ್‍ಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿದೆ. ನಮ್ಮ ನಡುವಣ ಪರಸ್ಪರ ಗೌರವ ಹಾಗೂ ಸಹಕಾರವನ್ನು ಗಮನದಲ್ಲಿಟ್ಟುಕೊಂಡು, ನಾವು ಭಾರತವನ್ನು ಅತ್ಯಂತ ಅತ್ಯಮೂಲ್ಯ ಹಾಗೂ ನಿಕಟ ಸ್ನೇಹಿತನೆಂದು ಗುರುತಿಸಿದ್ದೇವೆ ಎಂದು ಅವರು ತಿಳಿಸಿದರು.

ಈ ಹಿಂದೆ ಸೋಮವಾರದಂದು, ಇಸ್ರೇಲ್‍ನ ರಕ್ಷಣಾ ಸಚಿವರಾದ ನಫ್ಟಾಲಿ ಬೆನ್ನೆಟ್ ತಮ್ಮ ಹೇಳಿಕೆಯೊಂದರಲ್ಲಿ, ಇಸ್ರೇಲ್‍ನ ಇಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ಅಭಿವೃದ್ಧಿಪಡಿಸಿದ, ಮಾನವ ಪ್ರತಿಕಾಯವೊಂದು ನಮ್ಮ ದೇಹದೊಳಕ್ಕೆ ಕೊಲ್ಲಬಲ್ಲ ಪ್ರತಿಕಾಯ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದ್ದರು. ಐಐಬಿಆರ್ ನಿರ್ದೇಶಕರನ್ನು ಉಲ್ಲೇಖಿಸಿದ ಹೇಳಿಕೆಯೊಂದರ ಪ್ರಕಾರ, ಈ ಪ್ರತಿಕಾಯದ ಸೂತ್ರಕ್ಕೆ ಪೇಟೆಂಟ್ ಪಡೆಯಲಾಗುತ್ತಿದ್ದು, ಒಮ್ಮೆ ಪೇಟೆಂಟ್ ದೊರೆತ ಬಳಿಕ ದೊಡ್ಡ ಮಟ್ಟದಲ್ಲಿ ಜಾಗತಿಕ ಉತ್ಪಾದನೆ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಇಂತಹ ಸಂಶೋಧನೆಯನ್ನು ನೆದರ್​​​ಲ್ಯಾಂಡ್ ಕೂಡಾ ಮಾಡಿದೆ ಎಂದು ತಿಳಿದುಬಂದಿದೆ.

ಅಮೆರಿಕನ್ ಜ್ಯೂಯಿಶ್ ಸಮಿತಿ (ಎಜೆಸಿ)ಯ ಭಾಗವಾಗಿ ಆಯ್ಕೆ ಮಾಡಿದ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ, ಡಾ. ಮಲ್ಕಾ, ಈ ಪ್ರತಿಕಾಯದ ಬಗ್ಗೆ ಇನ್ನೂ ಹೆಚ್ಚಿನ ವಿವರ ಹಂಚಿಕೊಳ್ಳಲಾಗಿಲ್ಲ ಹಾಗೂ ಈ ಪ್ರತಿಕಾಯವನ್ನು ಯಾವಾಗ ದೊಡ್ಡ ಮಟ್ಟದಲ್ಲಿ ಉತ್ಪಾದಿಸಬಹುದು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಹೇಳಿದರು. "ನನಗೆ ಈ ಪ್ರತಿಕಾಯ ಅಭಿವೃದ್ಧಿ ಯಾವ ಹಂತದಲ್ಲಿದೆ ಎನ್ನುವುದು ತಿಳಿದಿಲ್ಲ. ಆದರೆ ಅದು ಖಂಡಿತಾ ಮುಂದುವರಿದ ಹಂತದಲ್ಲಿದೆ ಎನ್ನುವುದು ತಿಳಿದಿದೆ. ಈ ಪ್ರಕ್ರಿಯೆ ಮುಗಿದ ಬಳಿಕ, ಇದನ್ನು ದೊಡ್ಡ ಮಟ್ಟದಲ್ಲಿ ಉತ್ಪಾದಿಸಿ, ಎಲ್ಲರಿಗೂ ದೊರೆಯುವಂತೆ ಮಾಡಲು ಸಾಧ್ಯವಿದೆ ಎಂದು ನಾನು ಭಾವಿಸಿದ್ದೇನೆ," ಎಂದು ಅವರು ತಿಳಿಸಿದರು. ಇದು ನನಗೆ ತಿಳಿದಿರುವ ಮಾಹಿತಿ. ನಾವು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ... ನಾನಾ ವಿಧಗಳಲ್ಲಿ ಅದನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆ, ಪ್ರತಿಕಾಯ, ಪ್ರತಿವಿಷ ಹೀಗೆ ನಾನಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಪ್ರಯತ್ನ ನಡೆದಿದೆ. ಇವೆಲ್ಲಾ ನಾವು ಮುಖ್ಯವಾಗಿ ಕೆಲಸ ಮಾಡುತ್ತಿರುವ ಕ್ಷೇತ್ರಗಳು. ಇದು ಸಂಪೂರ್ಣ ಅಭಿವೃದ್ಧಿ ಹೊಂದುವವರೆಗೆ ನಾವು, ಈ ಸಾಂಕ್ರಾಮಿಕ ರೋಗದ ಹತೋಟಿಗೆ ಯತ್ನಿಸುತ್ತೇವೆ," ಎಂದು ಅವರು ತಿಳಿಸಿದರು.

ಇಸ್ರೇಲ್‍ನಲ್ಲಿ ಈವರೆಗೆ, 16,000 ಮಂದಿ ಕೋವಿಡ್ 19 ರೋಗಕ್ಕೆ ತುತ್ತಾಗಿದ್ದು, ಈ ಪೈಕಿ 10,000ಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. 5,000ಕ್ಕೂ ಅಧಿಕ ಪ್ರಕರಣಗಳು ಇನ್ನೂ ಕ್ರಿಯಾಶೀಲವಾಗಿವೆ. ಈ ಪೈಕಿ 70ಕ್ಕೂ ಅಧಿಕ ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಉಳಿದ ದೇಶಗಳಿಗೆ ಹೋಲಿಸಿದರೆ, ಇಲ್ಲಿ ಕೋವಿಡ್ 19 ಸಾವಿನ ಸಂಖ್ಯೆ ಕಡಿಮೆ ಇದ್ದು, ಕೇವಲ 230 ಸಾವುಗಳಷ್ಟೇ ಸಂಭವಿಸಿವೆ ಎಂದು ರಾಯಭಾರಿ ತಿಳಿಸಿದರು.

ಅಂತಾರಾಷ್ಟ್ರೀಯ ಒಳ ಬರುವ ವಿಮಾನಗಳನ್ನು ಅತಿ ಬೇಗನೆ ನಿಷೇಧಿಸಿ, ಲಾಕ್‍ಡೌನ್‍ ಘೋಷಿಸಿದ ವಿಶ್ವದ ಮೊದಲ ರಾಷ್ಟ್ರಗಳಲ್ಲೊಂದು ಇಸ್ರೇಲ್. ಈಗ ದೇಶದಲ್ಲಿ ಲಾಕ್‍ಡೌನ್ ಷರತ್ತುಗಳನ್ನು ಸಡಿಲಿಸಲಾಗುತ್ತಿದೆ. ಜನರ ಜೀವನ ಹಾಗೂ ಜೀವನೋಪಾಯದ ನಡುವೆ ಸಮತೋಲನ ಸಾಧಿಸಲು ಲಾಕ್‍ಡೌನ್ ಷರತ್ತುಗಳನ್ನು ಸಡಿಲಿಸಲಾಗುತ್ತಿದೆ ಎಂದು ರಾಯಭಾರಿ ತಿಳಿಸಿದರು. ಆರ್ಥಿಕ ಚಟುವಟಿಕೆಗಳಿಗೆ ಮರು ಚಾಲನೆ ನೀಡಬೇಕಿದೆ. ಹೀಗಾಗಿ ಲಾಕ್‍ಡೌನ್ ಸಡಿಲಿಕೆ ಪ್ರಾಯೋಗಿಕ ಹಂತದಲ್ಲಿದೆ. ಇದು ಈ ಕೋವಿಡ್19 ರೋಗಿಗಳ ಸಂಖ್ಯೆ ಹತೋಟಿಯಲ್ಲಿದ್ದರೆ ಮಾತ್ರ ಸಾಧ್ಯ. ಭಾರತ ಹಾಗೂ ಇಸ್ರೇಲ್‍ಗಳು ಲಾಕ್‍ಡೌನ್‍ನಿಂದ ಹೊರ ಬರುವ ತಂತ್ರೋಪಾಯಗಳ ಬಗ್ಗೆ ಈಗಾಗಲೆ ಮಾಹಿತಿ ವಿನಿಮಯ ಮಾಡಿಕೊಂಡಿವೆ ಎಂದು ರಾಯಭಾರಿ ಹೇಳಿದರು.

ಇಸ್ರೇಲ್ ನವೋದ್ಯಮಗಳಿಗೆ ಹೆಸರುವಾಸಿ. ಜತೆಗೆ ಸಂಶೋಧನೆ ಹಾಗೂ ಅಭಿವೃದ್ಧಿಗೂ ಕೂಡಾ. ಇವುಗಳಲ್ಲಿ ಲಭ್ಯವಿಲ್ಲ ತಂತ್ರಜ್ಞಾನವನ್ನು ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯವಾಗಿ 3ಡಿ ಮುದ್ರಣ, ವೈರಸ್ ನಿರೋಧಕ ಬಟ್ಟೆ ಅಭಿವೃದ್ಧಿ ಹಾಗೂ ಮುದ್ರಣ, ಮುಕ್ತ ಮೂಲದ ವೆಂಟಿಲೇಟರ್​​​​ಗಳ ಅಭಿವೃದ್ಧಿ ಸೇರಿದೆ. ಕೋವಿಡ್ -19 ರೋಗಿಗಳ ಸಂಪರ್ಕಿತರನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಹಾಗೂ ಮೊಬೈಲ್ ಅಪ್ಲಿಕೇಶನ್‍ಗಳ ಬಳಕೆ ಬಗ್ಗೆ ಒಲವು ತೋರಿರುವ ರಾಯಭಾರಿ ಖಾಸಗಿತನದ ರಕ್ಷಣೆಗೆ ನಾವು ಜಾಗರೂಕವಾಗಿದ್ದು, ಅವುಗಳ ಬಳಕೆಯಲ್ಲಿ ಸಮತೋಲನ ಸಾಧಿಸಬೇಕು ಎಂದು ಅಭಿಪ್ರಾಯಪಟ್ಟರು. "ನಾವು ಯಾರ ಖಾಸಗಿತನ ಕೂಡಾ ಉಲ್ಲಂಘಿಸಬಾರದು. ಹೀಗಾಗಿ ನಾವು ಮೊತ್ತಮೊದಲನೆಯದಾಗಿ ಹಾಗೂ ಅತ್ಯಂತ ಪ್ರಾಮುಖ್ಯವಾಗಿ ಇವುಗಳ ಬಳಕೆಯಲ್ಲಿ ಸಮತೋಲನ ಸಾಧಿಸಬೇಕು. ಖಾಸಗಿತನ ಉಲ್ಲಂಘಿಸಬಾರದು. ಇಸ್ರೇಲ್ ಒಂದು ಸಮೃದ್ಧ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ನಾವು ಪ್ರತಿಯೊಬ್ಬರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಹಾಗೂ ಖಾಸಗಿತನವನ್ನು ಗೌರವಿಸುತ್ತೇವೆ. ಆದರೆ ಇನ್ನೊಂದೆಡೆ, ತಂತ್ರಜ್ಞಾನ ನಮಗೆ ಈ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಜನರ ಜೀವ ಉಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ನಾವು ಅತ್ಯಂತ ಜಾಗರೂಕತೆಯಿಂದ ಎಲ್ಲವನ್ನೂ ಸಮತೋಲನ ಮಾಡಬೇಕಾಗುತ್ತದೆ," ಎಂದು ಅವರು ತಿಳಿಸಿದರು.

ಭಾರತ ಸರಕಾರ ಕೋವಿಡ್ 19ರ ವಿರುದ್ಧದ ಹೋರಾಟಕ್ಕೆ ಅಭಿವೃದ್ಧಿ ಪಡಿಸಿರುವ ಆರೋಗ್ಯ ಸೇತು ಆ್ಯಪ್ ಬಗ್ಗೆಗಿನ ಟೀಕೆಗಳ ಬಗ್ಗೆ ಪ್ರಶ್ನಿಸಿದಾಗ, ನಂಬಿಕೆಯೆ ಯಾವುದೇ ಒಂದು ತಂತ್ರಜ್ಞಾವನ್ನು ಪರಿಣಾಮಕಾರಿಯಾಗಿ ಬಳಸಲು ಅತ್ಯಂತ ಮಹತ್ವವಾದ ಅಂಶ. "ಇಸ್ರೇಲ್‍ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಲು ಪೂರಕವಾಗಿರುವ ಅಂಶವೆಂದರೆ ನಂಬಿಕೆ. ಜನರು ಅದನ್ನು ಏಕೆ ಬಳಸುತ್ತಿದ್ದಾರೆ ಎಂಬುದನ್ನು ನಾವು ಅರಿಯಬೇಕು ಹಾಗೂ ಅದರಲ್ಲಿ ನಂಬಿಕೆ ಇಡಬೇಕು. ಇತರ ಸಂದರ್ಭಗಳಲ್ಲಿ ಯಾರೂ ಕೂಡಾ ಹೀಗೆ ಸಂಪರ್ಕ ಅರಿಯುವ ಪ್ರಯತ್ನ ಕೂಡಾ ಮಾಡಲಾರರು," ಎಂದು ಡಾ. ಮಲ್ಕಾ ತಿಳಿಸಿದರು. "ಆದರೆ ನಾವು ಈ ತಂತ್ರಜ್ಞಾನದ ಬಗ್ಗೆ ಅರಿವು ಹೊಂದಿರುವುದರಿಂದ, ನಾವು ಅಮೂಲ್ಯ ಜೀವಗಳನ್ನು ರಕ್ಷಿಸಬಹುದಾಗಿದೆ. ಒಂದು ನಿರ್ದಿಷ್ಟ ಅವಧಿಗೆ, ಹಲವಾರು ನಿಯಂತ್ರಣದೊಂದಿಗೆ, ಹಾಗೂ ನಾನಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ, ಪ್ರಜಾಪ್ರಭುತ್ವದಡಿಯಲ್ಲಿ ನಾವು ಒಂದಿಷ್ಟು ಕೆಲಸ ಮಾಡಲೇಬೇಕಾಗುತ್ತದೆ. ನಾವು ಪರಸ್ಪರ ನಂಬಿಕೆ ಹೊಂದಿದ್ದರೆ, ಇದು ಎಲ್ಲರಿಗೂ ಸ್ವೀಕಾರಾರ್ಹವಾಗುತ್ತದೆ," ಎಂದು ಅವರು ವಿಶ್ಲೇಷಿಸಿದರು.

ಇಸ್ರೇಲ್‍ನ ವೆಸ್ಟ್‍ಬ್ಯಾಂಕ್ ಪ್ರದೇಶದಲ್ಲಿ ಶುಚಿತ್ವದ ಕೊರತೆ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಕಾರಣದಿಂದ ಜನರು ತೊಂದರೆಗೀಡಾಗಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ರಾಯಭಾರಿಯವರು, ಪ್ಯಾಲೆಸ್ಟೈನ್ ಅಧಿಕಾರಿಗಳಿಗೆ ಇಸ್ರೇಲ್ ನೆರವಿನ ಹಸ್ತ ಚಾಚಿದೆ ಎಂದು ತಿಳಿಸಿದರು. "ಈ ಕೊರೊನಾ ವೈರಸ್ ಹತೋಟಿಯಲ್ಲಿಡಲು ಅನುಸರಿಸಬೇಕಾದ ಉತ್ತಮ ಅಭ್ಯಾಸಗಳನ್ನು ನಾವು ಪಾಲಿಸ್ಟೈನ್ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದೇವೆ," ಎಂದು ಅವರು ತಿಳಿಸಿದರು. "ಈ ಹಿಂದೆಂದಿಗಿಂತಲೂ ಇಂದು ನೆರೆ ರಾಷ್ಟ್ರಗಳೊಂದಿಗೆ, ಸ್ನೇಹಿತ ರಾಷ್ಟ್ರಗಳೊಂದಿಗೆ ಜತೆಯಾಗಿ ಕೆಲಸ ಮಾಡುವುದು ಮುಖ್ಯವಾಗಿದೆ. ಏಕೆಂದರೆ, ಈ ವೈರಸ್ ಎಲ್ಲರ ಶತ್ರು. ಕೆಲವು ಸೋಂಕುಗಳು ಪಸರಿಸುತ್ತಿವೆ. ಆದರೆ ಅವುಗಳು ಇನ್ನೂ ನಮ್ಮ ನಿಯಂತ್ರಣದಲ್ಲಿವೆ. ನಾವು ನಮಗೆ ಸಾಧ್ಯವಿರುವಷ್ಟು ನೆರವು ನೀಡುತ್ತಿದ್ದೇವೆ. ನಮ್ಮ ನೆರೆಹೊರೆಯವರು ಸಮಸ್ಯೆ ಎದುರಿಸುತ್ತಿದ್ದರೆ ಅವರು ಸಹಾಯಕ್ಕಾಗಿ ನಮ್ಮ ಮನೆಯ ಬಾಗಿಲು ತಟ್ಟಬಹುದು," ಎಂದು ಅವರು ಹೇಳಿದರು.

ಕೊರೊನಾ ವೈರಸ್‍ನ ಮೂಲದ ಬಗ್ಗೆ ಈಗ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ಬಗ್ಗೆ ಪ್ರಶ್ನಿಸಿದಾಗ ಅವರು, ಸದ್ಯ ನಮ್ಮ ಗುರಿ ವೈರಸ್‍ನ ವಿರುದ್ಧ ಹೋರಾಡುವುದಾಗಿದೆ. "ಈ ವೈರಸ್ ಎಲ್ಲಿಂದ, ಹೇಗೆ ಬಂತು ಎನ್ನುವುದರ ತನಿಖೆಯನ್ನು ನಂತರ ಕೈಗೆತ್ತಿಕೊಳ್ಳಬಹುದು. ಇಸ್ರೇಲ್ ಇಂತಹ ದೋಷಾರೋಪದಲ್ಲಿ ಸದ್ಯದ ಮಟ್ಟಿಗೆ ಭಾಗಿಯಾಗಿಲ್ಲ. ಈಗ ನಮ್ಮ ಎಲ್ಲಾ ಶಕ್ತಿ, ಶ್ರಮ ಹಾಗೂ ಗಮನ, ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವುದರ ಮೇಲಿದೆ," ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.