ರೋಗಾಣುಗಳು ನಮ್ಮ ದೇಹದಲ್ಲಿ ವ್ಯತಿರಿಕ್ತ ಪ್ರಭಾವ ಬೀರುವ ಮೊದಲು ರೋಗಾಣುಗಳನ್ನು ಗುರುತಿಸಲು ಮತ್ತು ಅವುಗಳನ್ನು ತಡೆಯಲು ಲಸಿಕೆಗಳು ನೀಡಲಾಗುತ್ತದೆ.
ಸಾಮಾನ್ಯವಾಗಿ ಜ್ವರ, ದಡಾರ ಕಾಯಿಲೆಗಳನ್ನು ಕೊಲ್ಲಲು ದುರ್ಬಲ ವೈರಸ್‌ಗಳನ್ನು ಬಳಸಿ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಆದರೆ ಬೆಳೆಯುತ್ತಿರುವ ವೈರಸ್‌ಗಳು ಕೆಲವೊಂದು ತೀವ್ರವಾಗಿರುತ್ತವೆ ಮತ್ತು ಕೆಲವೊಮ್ಮೆ ಅಪಾಯಕಾರಿಯಾಗಿಯೂ ಇರುತ್ತವೆ.
ಕೋವಿಡ್-19 ಭಯಾನಕ ವೈರಸ್ ವಿರುದ್ಧ ಲಸಿಕೆಗಳನ್ನು ತಯಾರಿಸಲು ಇದೀಗ ವಿಜ್ಞಾನಿಗಳು ಹೊಸ-ಹೊಸ ಮತ್ತು ವೇಗವಾದ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ.
ಮಾನವನ ದೇಹ ರಚನೆಯಲ್ಲಿ ಸ್ಪೈಕ್ ಪ್ರೋಟೀನ್ ಒಳಗೊಂಡಿರುತ್ತದೆ, ಇದು ಮಾನವ ಜೀವಕೋಶಗಳಿಗೆ ಕೊರೊನಾ ವೈರಸ್ ಆಕ್ರಮಿಸಲು ಅನುವು ಮಾಡಿಕೊಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಸ್ಪೈಕ್ ಅನ್ನು ಗುರುತಿಸಿ ಅದನ್ನು ನಿರ್ಬಂಧಿಸಿದರೆ, ಜನರು ಕೊರೊನಾ ಸೋಂಕಿಗೆ ಒಳಗಾಗುವುದಿಲ್ಲ.
ಅನುವಂಶೀಯ ಕೋಶಗಳು, ಜೀವ ಕೋಶಗಳಿಗೆ ಸ್ಪೈಕ್ ಪ್ರೋಟಿನ್ ಉತ್ಪಾದಿಸಲು ಸಲಹೆ ನೀಡುತ್ತದೆ, ಹೀಗೆ ಉತ್ಪಾದಿಸಲಾದ ಪ್ರೋಟಿನ್ ಅನ್ನು ಆರ್ಎನ್ಎ ಗೆ ನೀಡುವುದರಿಂದ ವೈರಸ್ ಅನ್ನು ನಿಯಂತ್ರಿಸಬಹುದಾಗಿದೆ. ಇದು ಒಂದು ವಿಧಾನವಾಗಿದೆ.
ಮತ್ತೊಂದು ವಿಧಾನವನ್ನು ಡಿಎನ್‌ಎ ಲಸಿಕೆ ನೀಡುವ ಮೂಲಕ ಸಹ ವೈರಸ್ ನಿಯಂತ್ರಿಸಬಹುದು. ಈ ಎರಡು ವಿಧಾನಗಳ ಮೂಲಕ ವೈರಸ್ ಜೀವಕೋಶಗಳನ್ನು ತಲುಪದಂತೆ ನೋಡಿಕೊಳ್ಳಬಹುದು.