ನಾಗರ್ ಕರ್ನೂಲ್: ಗಂಡ-ಹೆಂಡತಿ ಇಡೀ ರಾತ್ರಿ ಕಿತ್ತಾಡಿಕೊಂಡಿದ್ದಾರೆ. ಬೆಳಗ್ಗೆ ಗಂಡನಿಗೆ ಏನಾಯ್ತೋ ಏನೋ ಗೊತ್ತಿಲ್ಲ. ಕೂಡಲೇ ತನ್ನ ನಾಲಿಗೆಯನ್ನು ಕಟ್ ಮಾಡಿ ತಾಯಿಯ ಕೈಗೆ ಕೊಟ್ಟಿದ್ದಾನೆ. ಈ ಘಟನೆ ನಾಗರ್ ಕರ್ನೂಲ್ ಜಿಲ್ಲೆಯ ಸಾರ್ಲಪಲ್ಲಿ ಗ್ರಾಮದಲ್ಲಿ ನಡೆದಿದ್ದು, ಜನ ಶಾಖ್ ಆಗಿದ್ದಾರೆ.
ಸಾರ್ಲಪಲ್ಲಿ ಗ್ರಾಮದ ನಿವಾಸಿ ಚಂದ್ರಯ್ಯ ತನ್ನ ಹೆಂಡ್ತಿ ಜೊತೆ ಮಂಗಳವಾರ ರಾತ್ರಿ ಜಗಳವಾಡಿದ್ದಾನೆ. ರಾತ್ರಿಯೆಲ್ಲ ಜಗಳವಾಡಿದ ಚಂದ್ರಯ್ಯ ಕೋಪದಲ್ಲೆ ಕಾಲ ಕಳೆದಿದ್ದಾನೆ. ಬೆಳಗ್ಗೆ ಚಂದ್ರಯ್ಯ ತನ್ನ ನಾಲಿಗೆಯನ್ನು ಕಟ್ ಮಾಡಿಕೊಂಡಿದ್ದಾನೆ.
ಬಾಯಲ್ಲಿ ರಕ್ತ ನೋಡಿದ ತಾಯಿ ಮಗನನ್ನು ವಿಚಾರಿಸಿದ್ದಾರೆ. ಕೋಪಗೊಂಡ ಚಂದ್ರಯ್ಯ ತಾಯಿಯ ಕೈಗೆ ತುಂಡಾದ ನಾಲಿಗೆಯನ್ನು ಕೊಟ್ಟಿದ್ದಾನೆ. ಕೂಡಲೇ ತಾಯಿ ಸ್ಥಳೀಯರ ನೆರವಿನಿಂದ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾಬೂಬ್ನಗರ ಆಸ್ಪತ್ರೆಗೆ ದಾಖಲಿಸಿದರು. ಅಷ್ಟೋತ್ತಿಗಾಗಲೇ ತಡವಾಗಿದ್ದು, ನಾಲಿಗೆಯನ್ನು ಮರುಜೋಡಣೆಗೆ ಅವಕಾಶವಿಲ್ಲವೆಂದು ವೈದ್ಯರು ಹೇಳಿದ್ದಾರೆ.