ವಿಶಾಖಪಟ್ಟಣಂ (ಆಂಧ್ರಪ್ರದೇಶ): ಭೂಮಿಯೊಳಗೆ ಕೇಬಲ್ ತಂತಿ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ಗೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ವಿಶಾಖಪಟ್ಟಣಂ ಬಳಿ ಇರುವ ಅಡವಿವರಂ ಪ್ರದೇಶದಲ್ಲಿ ನಡೆದಿದೆ.
ಮೃತರನ್ನು 60 ವರ್ಷದ ಎನ್.ದೇಮುಡು ಹಾಗೂ 36 ವರ್ಷದ ಪಿ.ನರಸಿಂಗರಾಜು ಎಂದು ಗುರುತಿಸಲಾಗಿದೆ. ಶಾಕ್ಗೆ ಒಳಗಾದ ತಕ್ಷಣ ಇವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಮೃತಪಟ್ಟಿದ್ದಾರೆ.
ಭೂಮಿಯೊಳಗೆ ಹೊಸ ಫೈಬರ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಕಂಬದ ವೈರ್ಗಳಿಗೆ ಕೇಬಲ್ ವೈರ್ ಸ್ಪರ್ಶಿಸಿದ ಕಾರಣ ಸಾವು ಸಂಭವಿಸಿದೆ ಎಂದು ಗೋಪಾಲಪಟ್ಣಂ ಇನ್ಸ್ಪೆಕ್ಟರ್ ಅಪ್ಪಾರಾವ್ ಸ್ಪಷ್ಟನೆ ನೀಡಿದ್ದು, ತನಿಖೆ ಮುಂದುವರೆದಿದೆ.