ETV Bharat / bharat

ನ. 2ರಿಂದ ಆಂಧ್ರದಲ್ಲಿ ಶಾಲೆ ರೀ ಓಪನ್​... ಮಾರ್ಗಸೂಚಿ ರಿಲೀಸ್​ ಮಾಡಿದ ಸರ್ಕಾರ! - ನವೆಂಬರ್​ 2ರಿಂದ ಆಂಧ್ರದಲ್ಲಿ ಶಾಲೆ ರೀ ಓಪನ್​

ಆಂಧ್ರಪ್ರದೇಶದಲ್ಲಿ ನವೆಂಬರ್​ 2ರಿಂದ ಶಾಲೆಗಳು ಪುನಾರಂಭಗೊಳ್ಳುತ್ತಿದ್ದು, ಅದಕ್ಕಾಗಿ ಅಲ್ಲಿನ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

Andhra pradesh schools
Andhra pradesh schools
author img

By

Published : Oct 20, 2020, 8:25 PM IST

ವಿಜಯವಾಡ(ಆಂಧ್ರಪ್ರದೇಶ): ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಬಂದ್​ ಆಗಿದ್ದ ಶಾಲೆಗಳು ಇದೀಗ ಆಂಧ್ರಪ್ರದೇಶದಲ್ಲಿ ನವೆಂಬರ್​ 2ರಿಂದ ರೀ ಓಪನ್​​ ಆಗಲಿದ್ದು, ಅದಕ್ಕಾಗಿ ಮಾರ್ಗಸೂಚಿ ರಿಲೀಸ್​ ಮಾಡಲಾಗಿದೆ.

ಇದೇ ವಿಚಾರವಾಗಿ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​​ ರೆಡ್ಡಿ, ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯಿಂದ 148 ದಿನಗಳ ಶೈಕ್ಷಣಿಕ ವರ್ಷ ನಡೆಸಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಎರಡು ದಿನಗಳಿಗೊಮ್ಮೆ ಕ್ಲಾಸ್​ ನಡೆಸಲು ನಿರ್ಧಾರ ಮಾಡಲಾಗಿದೆ. ಅದರಂತೆ 1,3,5,7,9 ಕ್ಲಾಸ್​ ವಿದ್ಯಾರ್ಥಿಗಳಿಗೆ ಒಂದು ದಿನ ಹಾಗೂ 2,4,6,8 ತರಗತಿ ವಿದ್ಯಾರ್ಥಿಗಳಿಗೆ ಮತ್ತೊಂದು ದಿನ ಕ್ಲಾಸ್​ ನಡೆಯಲಿವೆ.

ನವೆಂಬರ್​ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದವರೆಗೆ ಶಾಲೆ ನಡೆಯಲಿದ್ದು, ಬಿಸಿಯೂಟ ಸೇವನೆ ಮಾಡಿದ ಬಳಿಕ ಮನೆಗೆ ತೆರಳಬಹುದಾಗಿದೆ.

ಮಾರ್ಗಸೂಚಿ ಪಾಲನೆ ಕಡ್ಡಾಯ

ಹ್ಯಾಡ್​ ಸ್ಯಾನಿಟೈಸ್​ ಬಳಕೆ, ಸಾಮಾಜಿಕ ಅಂತರ ಕಡ್ಡಾಯವಾಗಿದ್ದು, ಶಾಲಾ ಕೊಠಡಿಯೊಳಗೆ ಎರಡು ಭಾಗಗಳಲ್ಲಿ ವಿಂಗಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಿತ್ಯ ಶಾಲಾ ಕ್ಲಾಸ್​ ರೂಂಗಳಿಗೆ ಸ್ಯಾನಿಟೈಸ್​ ಮಾಡುವುದು ಕಡ್ಡಾಯಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.