ಅಮರಾವತಿ (ಆಂಧ್ರಪ್ರದೇಶ): ತನ್ನ ತಂದೆಗೆ ಔಷದ ತರಲು ಹೋದ ವ್ಯಕ್ತಿ ಸಾವಿಗೀಡಾಗಿದ್ದು, ಪೊಲೀಸರು ಹಲ್ಲೆ ಮಾಡಿದ್ದೇ ತಮ್ಮ ಮಗನ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಟ್ಟೇನಪಲ್ಲಿ ಪಟ್ಟಣದ ಸಬ್ ಇನ್ಸ್‌ಪೆಕ್ಟರ್ ಆರ್.ರಮೇಶ್ ಬಾಬು ಅವರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. 33 ವರ್ಷದ ಮೃತ ವ್ಯಕ್ತಿ ಶೇಕ್ ಘೌಸ್ ಮರದ ವ್ಯಾಪಾರಿಯಾಗಿದ್ದು, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು.
ಸಟ್ಟೇನಪಲ್ಲಿ ಪಟ್ಟಣದಲ್ಲಿ ಔಷಧ ತರಲು ಹೋದಾಗ ಎಸ್‌ಐ ಈತನನ್ನು ಚೆಕ್‌ಪೋಸ್ಟ್‌ನಲ್ಲಿ ತಡೆದು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಆತ ಕುಸಿದುಬಿದ್ದು ಸಾವಿಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈತನ ಸೋದರ ಸಂಬಂಧಿ ಘಟನಾ ಸ್ಥಳಕ್ಕೆ ಧಾವಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಆ ಹೊತ್ತಿಗೆ ಆತ ಪ್ರಾಣಪಕ್ಷಿ ಹಾರಿಹೋಗಿತ್ತು.