ETV Bharat / bharat

ಟಿಟಿಡಿ ಸದಸ್ಯ ಎಂದು ನಂಬಿಸಿ ನಿವೃತ್ತ ಕರ್ನಲ್​​​ಗೆ ₹ 80 ಲಕ್ಷ ದೋಖಾ!

ತಿರುಪತಿ ದೇವಸ್ಥಾನ ಮಂಡಳಿಯ ಸದಸ್ಯರು ಎಂದು ನಂಬಿಸಿ ಮೋಸಗಾರರ ತಂಡ, ಚೆನ್ನೈನ ನಿವೃತ್ತ ಕರ್ನಲ್​​ ಒಬ್ಬರಿಗೆ ₹ 80 ಲಕ್ಷ ಮೋಸ ಮಾಡಿದ್ದಾರೆ. ಶೀಘ್ರವೇ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

author img

By

Published : Jul 7, 2020, 1:11 PM IST

Man duped of Rs 80 lakh in Tirupati temple fraud
80 ಲಕ್ಷ ವಂಚನೆ

ಹೈದರಾಬಾದ್​: ತಿರುಪತಿ ದೇವಸ್ಥಾನ ಮಂಡಳಿಗೆ ಗುತ್ತಿಗೆ ಆಧಾರದಲ್ಲಿ ಭದ್ರತೆ ನಿಯೋಜಿಸುವ ಕುರಿತು ಒಪ್ಪಂದ ಮಾಡಿಕೊಳ್ಳುವ ಭರವಸೆ ನೀಡಿದ ವಂಚಕರು, 72 ವರ್ಷದ ನಿವೃತ್ತ ಸೇನಾ ಕರ್ನಲ್​​​​ ಅವರಿಗೆ ₹ 80 ಲಕ್ಷ ಮೋಸ ಮಾಡಿ ಪರಾರಿಯಾಗಿದ್ದಾರೆ.

ನಿವೃತ್ತ ಸೇನಾ ಕರ್ನಲ್ ಕುಮಾರ್​, ಚೆನ್ನೈನ ತಂಬರಂನಲ್ಲಿ ಖಾಸಗಿ ಭದ್ರತಾ ಸಂಸ್ಥೆ ನಡೆಸುತ್ತಿದ್ದಾರೆ. ತಿರುಪತಿ ದೇವಾಲಯದ ಭದ್ರತಾ ಉದ್ದೇಶಕ್ಕಾಗಿ ಗುತ್ತಿಗೆಯಲ್ಲಿ 450 ಮಂದಿ ಬೇಕಾಗಿದ್ದಾರೆ ಎಂದು ಹೇಳಿದ್ದ ಸೆಂಥಿಲ್​ ಎಂಬಾತನನ್ನು ನಿವೃತ್ತ ಕರ್ನಲ್​​​ ​ಸಂಪರ್ಕಿಸಿದ್ದಾರೆ. ನಿವೃತ್ತ ಕರ್ನಲ್​​ಗೆ ತಾನು ತಿರುಪತಿ ದೇವಸ್ಥಾನ ಮಂಡಳಿ ಸದಸ್ಯ ಎಂದು ಸೆಂಥಿಲ್​​ ಹೇಳಿಕೊಂಡಿದ್ದನಂತೆ.

ಸೆಂಥಿಲ್​​​ ಜೊತೆಗೆ ಇನ್ನಿಬ್ಬರು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಅದರಲ್ಲಿ ಮಹಿಳೆಯೊಬ್ಬಳು ಸಹ ಇದ್ದಾಳೆ. ದೇವಸ್ಥಾನದಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಸೆಂಥಿಲ್​​​ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್​ ನಾಯ್ಡು ಅವರನ್ನು ನಿವೃತ್ತ ಕರ್ನಲ್​​​ಗೆ ಪರಿಚಯಿಸಿದ. ಬಳಿಕ ಕುಮಾರ್​ ಮತ್ತು ರಮೇಶ್​​ ಅವರೊಂದಿಗೆ ಮಾತುಕತೆ ನಡೆಸಿ ಸೆಂಥಿಲ್​​ ಒಪ್ಪಂದ ಕುದುರಿಸಿದ್ದಾನೆ.

ಕರ್ನಲ್ ಒಪ್ಪಂದದ ಪ್ರಕಾರ ತನ್ನ ಸಿಬ್ಬಂದಿಯನ್ನು ಕೂಡಾ ಒದಗಿಸಿದ್ದಾರೆ. ಆದರೆ, ಎಂಟು ತಿಂಗಳ ಕೆಲಸದ ನಂತರವೂ ಒಪ್ಪಂದದಂತೆ ಕರ್ನಲ್​​​​ಗೆ 80 ಲಕ್ಷ ಹಣವನ್ನು ಸೆಂಥಿಲ್​​ ನೀಡಿರಲಿಲ್ಲ. ಪರಿಣಾಮವಾಗಿ, ಅವರು ತಿರುಪತಿ ದೇವಸ್ಥಾನ ಮಂಡಳಿ ಸಮಿತಿಯನ್ನು ವಿಚಾರಿಸಿದರು. ಅಲ್ಲಿ ಅಂತಹ ಯಾವುದೇ ಒಪ್ಪಂದವನ್ನು ಅಧಿಕೃತವಾಗಿ ಅನುಮೋದಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಕರ್ನಲ್​​ ಈ ಕುರಿತು ಪ್ರಕರಣ ದಾಖಲಿಸಿದ್ದು, ಚೆನ್ನೈ ಕೇಂದ್ರ ಅಪರಾಧ ಶಾಖೆ ವಿಚಾರಣೆ ಆರಂಭಿಸಿದೆ ಮತ್ತು ಅಪರಾಧಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.