ವಿಜಯನಗರಂ: ಆಂಧ್ರಪ್ರದೇಶ ಪೊಲೀಸರು ಲಾಕ್‌ಡೌನ್ ಉಲ್ಲಂಘಿಸುವವರಿಗೆ ಕೋವಿಡ್-19 ಕುರಿತ ಘೋಷಣಾ ಫಲಕ ಹಿಡಿಯುವ ಶಿಕ್ಷೆ ವಿಧಿಸಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಜನರು ಯಾವುದೇ ಕಾರಣಗಳಿಲ್ಲದೆ ಸುಖಾಸುಮ್ಮನೆ ಮಾಸ್ಕ್ ಧರಿಸದೇ ಹೊರಗೆ ತಿರುಗಾಡುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಎಷ್ಟೇ ಮನವಿ ಮಾಡಿದರೂ ನಾಗರಿಕರು ಕೇಳುತ್ತಿಲ್ಲ.
ಹೀಗಾಗಿ ಆಂಧ್ರೆಪ್ರದೇಶ ಪೊಲೀಸರು ಕೊರೊನಾ ವೈರಸ್ ತಡೆಗಟ್ಟಲು, ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಈ ಕ್ರಮ ಕೈಗೊಂಡಿದ್ದಾರೆ.