ಶ್ರೀಕಾಕುಲಂ: ಲಾಕ್ಡೌನ್ ನಡುವೆ ಗರ್ಭಿಣಿ ಮಹಿಳೆಯೊಬ್ಬಳನ್ನು ಆಸ್ಪತ್ರೆಗೆ ದಾಖಲಿಸಲು ಆಂಧ್ರ ಪ್ರದೇಶ ಪೊಲೀಸರು ನೆರವಾಗಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಗರ್ಭಿಣಿ ತುಶಿಜೆನಾ ಎಂಬುವರು ಗಂಡನ ಜೊತೆ ಭಾನುವಾರ ತೆಲಂಗಾಣದಿಂದ ತಮ್ಮೂರಿಗೆ ಬಸ್ನಲ್ಲಿ ತೆರಳುತ್ತಿದ್ದರು. ಬಸ್ ಆಂಧ್ರದ ಇಚಾಪುರಂ ತಲುಪುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅಲ್ಲಿದ್ದವರು ಇಚಾಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಬಂದ ಪೊಲೀಸರು, ಆಕೆಯನ್ನು ಇಚಾಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಹಿಳೆಯನ್ನು ಒಡಿಶಾದ ಬೆರ್ಹಾಂಪುರ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.