ಡೋನ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಗೆ ಸೇರಿದ ಅಂತಾರಾಜ್ಯ ಕಳ್ಳರು ಬೆತಂಚೆರ್ಲಗೆ ಹೋಗಿದ್ದಾರೆ. ಈ ವಿಷಯ ಕರ್ನಾಟಕ ಪೊಲೀಸರು ಕರ್ನೂಲ್ ಪೊಲೀಸರಿಗೆ ತಿಳಿಸಿದ್ದಾರೆ. ಅವರು ಬೆತಂಚೆರ್ಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ಕೈಗೊಂಡಾಗ ಕಳ್ಳರು ಬೆತಂಚೆರ್ಲ-ಡೋನ್ ಹೈವೇ ಮೂಲಕ ಪರಾರಿಯಾಗಿದ್ದಾರೆ.
ಇನ್ನು ಬೆತಂಚೆರ್ಲ ಪೊಲೀಸರು ಡೋನ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಅಲ್ಲಿಂದಲೂ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಬಳಿಕ ಡೋನ್ ಪೊಲೀಸರು ಕೋಟ್ಲವಾರಿಪಲ್ಲೆ ಪೊಲೀಸ್ ಠಾಣೆಯ ಎಸ್ಐಗೆ ನರೇಂದ್ರಕುಮಾರ್ ರೆಡ್ಡಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆದ್ರೆ ಅವರಿಗೂ ಚಳ್ಳೆಹಣ್ಣು ತಿನಿಸಿ ಎಸ್ಕೇಪ್ ಆಗಿದ್ದಾರೆ.
ಈ ಸುದ್ದಿಯನ್ನು ವ್ಯಾಪಿಲಿ ಪೊಲೀಸರಿಗೆ ಮುಟ್ಟಿಸಲಾಗಿತ್ತು. ಎಸ್ಐ ಮಾರುತಿ ಶಂಕರ್ ಹೈವೇಯಲ್ಲಿ ತನಿಖೆ ಕೈಗೊಂಡಿದ್ದರು. ಈ ವೇಳೆ, ಕಳ್ಳರು ತಪ್ಪಿಸಿಕೊಳ್ಳಲು ಭರದಲ್ಲಿ ಡಿವೈಡರ್ಗೆ ಕಾರನ್ನು ಡಿಕ್ಕಿ ಹೊಡೆಸಿದ್ದಾರೆ. ಇನ್ನು ಕಳ್ಳರು ಕಾರಿನಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಎಸ್ಐ ಮಾರುತಿ ಗುಂಡು ಹಾರಿಸಿದ್ದಾರೆ. ಆದ್ರೆ ಬಾಷಾ ಎಂಬ ಕಳ್ಳ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದು, ಇನ್ನಿಬ್ಬರಾದ ರಾಕೇಶ್, ಲೋಕೇಶ್ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. 40 ಕಿ.ಮೀ ಚೇಸಿಂಗ್ನಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಹಿಡಿದಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.