ETV Bharat / bharat

ರೆಡ್​ ಝೋನ್​ ಹುಡುಗನಿಗೆ ಗ್ರೀನ್​ ಝೋನ್​ ಹುಡುಗಿ ಜೊತೆ ಮದುವೆ: ಇದು ''ಗಡಿ ಕಲ್ಯಾಣ''! - ರೆಡ್​ ಝೋನ್​ ಹುಡುಗನಿಗೆ ಗ್ರೀನ್​ ಝೋನ್​ ಹುಡುಗಿ ಜೊತೆ ಮದುವೆ

ಕೊರೊನಾ ಲಾಕ್​ಡೌನ್​ ನಿಂದಾಗಿ ಮದುವೆ ನಿಶ್ಚಯವಾಗಿದ್ದ ಜೋಡಿಯೊಂದು ಇಬ್ಬರ ರಾಜ್ಯಗಳ ಗಡಿಗಳಲ್ಲಿ ವಿವಾಹವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

an-interstate-wedding-on-up-uttarakhand-border
ಗಡಿ ಕಲ್ಯಾಣ
author img

By

Published : May 4, 2020, 8:18 PM IST

ಉತ್ತರಾಖಂಡ್​ :ಕೊರೊನಾ ಲಾಕ್​ಡೌನ್​ ನಿಂದಾಗಿ ಮದುವೆ ನಿಶ್ಚಯವಾಗಿದ್ದ ಜೋಡಿಯೊಂದು ಇಬ್ಬರ ರಾಜ್ಯಗಳ ಗಡಿಗಳಲ್ಲಿ ವಿವಾಹವಾದ ಘಟನೆ ಉತ್ತರಾಖಂಡ್​ನಲ್ಲಿ ನಡೆದಿದೆ.

ಅರವಿಂದ್ ಕುಮಾರ್ (28) ಎಂಬುವವರಿಗೆ ಛಾಯಾ ರಾಣಿ(25) ಇವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಸಮಸ್ಯೆ ಎಂದರೆ ವರ ಅರವಿಂದ್ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಇವರು ವಾಸವಿರುವ ಬಿಜ್​ನೋರ್​ ಏರಿಯಾವನ್ನು ಕೊರೊನಾ ರೆಡ್​ ಝೋನ್​ ಎಂದು ಘೋಷಿಸಲಾಗಿದೆ. ಆದರೆ, ವಧು ಛಾಯಾ ರಾಣಿ ಉತ್ತರಾಖಂಡ್​ನ ಗ್ರೀನ್​ ಝೋನ್​ ನಲ್ಲಿದ್ದಾರೆ.

ಈ ಹಿನ್ನೆಲೆ ಅರವಿಂದ್ ಕುಮಾರ್ ಜಿಲ್ಲಾಡಳಿತದಿಂದ ಪಾಸ್​ ಪಡೆದು ತಮ್ಮ ಮನೆಯಿಂದ 150 ಕಿ.ಮೀ ದೂರವಿರುವ ಛಾಯಾ ಮನೆಗೆ ಹೊರಟಿದ್ದಾರೆ. ಆದರೆ, ರೆಡ್​ ಝೋನ್​ ನಿವಾಸಿಯಾದ ಕಾರಣ ಅವರನ್ನು ಉತ್ತರಾಖಂಡ್​ ಗಡಿಯೊಳಗೆ ಬಿಡದೇ ಪೊಲೀಸರು ತಡೆದಿದ್ದಾರೆ. ನಂತರ ಅರವಿಂದ್​ ವಧುವಿನ ಮನೆಗೆ ಫೋನ್​ ಮಾಡಿ ವಿಷಯ ಮುಟ್ಟಿಸಿದ್ದಾರೆ.

ಇದಕ್ಕೆ ಪರಿಹಾರ ಹುಡುಕಿದ ಛಾಯಾ ಮನೆಯವರು ತಕ್ಷಣ ಹೊರಟು ಉತ್ತರಾಖಂಡ್​ ಗಡಿಗೆ ಬಂದು ಅಲ್ಲಿಯೇ ಛಾಯಾ ರಾಣಿ ಹಾಗೂ ಅರವಿಂದ್ ಮದುವೆ ನೆರವೇರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅರವಿಂದ್​ ಪೊಲೀಸರು ನಮ್ಮನ್ನು ಚೆಕ್​ಪೋಸ್ಟ್​ ದಾಟಿ ಹೋಗಲು ಬಿಡಲಿಲ್ಲ, ಆದ ಕಾರಣ ಅವರಿಂದ ಅನುಮತಿ ಪಡೆದು, ಉತ್ತರಾಖಂಡ್​ ಗಡಿಯಲ್ಲೇ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.