ಮಹಾರಾಷ್ಟ್ರ: ಪಾಲ್ಘರ್ನಲ್ಲಿ ಇಂದು ಬೆಳಿಗ್ಗೆ 6:36ಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಸ್ಥಳೀಯ ನಾಗರಿಕರು ಆಘಾತಕ್ಕೊಳಗಾಗಿದ್ದಾರೆ.
![An earthquake of magnitude 2.7 occurred in palghar](https://etvbharatimages.akamaized.net/etvbharat/prod-images/earthquake_sep4_0409newsroom_1599219848_20.jpg)
ಹಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತದ್ದ ಮಳೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಕಡಿಮೆಯಾಗಿದ್ದು, ಇದೀಗ ಭೂಕಂಪದಿಂದಾಗಿ ಜನ ಮತ್ತೆ ಆತಂಕಕ್ಕೊಳಗಾಗಿದ್ದಾರೆ.