ಬಿಗ್-ಬಿ ಅಂದ್ರೆನೇ ಹಾಗೆ. ಅವರದು ದೊಡ್ಡ ಹೃದಯ. ಯಾವಾಗಲೂ ಅಭಿಮಾನಿಗಳನ್ನು ಒಂದಲ್ಲಾ ಒಂದು ರೀತಿ ರಂಜಿಸುವ ಅಮಿತಾಭ್ ಟಿಕ್ಟಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಟಿಕ್ಟಾಕ್ ಯುವ ಪೀಳಿಗೆಯಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿದೆ. ತಮ್ಮ ನೆಚ್ಚಿನ ನಟ-ನಟಿಯರ ಸಿನಿಮಾಗಳ ಡೈಲಾಗ್ಗೆ ಅಥವಾ ಹಾಡಿಗೆ ಡಬ್ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈಗ ಸ್ವತಃ ಅಮಿತಾಭ್ ಬಚ್ಚನ್ ಕೂಡ ಟಿಕ್ಟಾಕ್ ಮಾಡಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ನೋಯ್ಡಾದ ದೀಪಿಕಾ ಶರ್ಮಾ ಎಂಬ ಸ್ಪರ್ಧಿ ಜೊತೆ ಬಿಗ್-ಬಿ ಟಿಕ್ಟಾಕ್ ಮಾಡಿದ್ದಾರೆ. ವೃತ್ತಿಯಲ್ಲಿ ಲೆಕ್ಚರರ್ ಆಗಿರುವ ದೀಪಿಕಾ, 12ನೇ ಪ್ರಶ್ನೆವರೆಗೂ ಆಟ ಆಡಿದರು. ಟಿಕ್ಟಾಕ್ ಪ್ರಿಯೆ ಆಗಿರುವ ದೀಪಿಕಾ ಶರ್ಮಾ ಅಮಿತಾಭ್ ಅವರೊಂದಿಗೆ ಟಿಕ್ಟಾಕ್ ಮಾಡುವ ಕೋರಿಕೆ ಇಟ್ಟರು. ಅದಕ್ಕೆ ಅಸ್ತು ಎಂದ ಬಿಗ್ ಬಿ ಆಟವನ್ನು ಮುಂದುವರೆಸುತ್ತಾರೆ.
-
His dialogues and songs are classic and shall remain timeless. While we all love to lip sync to his dialogues, Big B himself opted to make a Tiktok video with our contestant Deepika Sharma! Watch this fun filled episode tonight at 9 PM only on Sony @SrBachchan pic.twitter.com/rZTRtxDFjJ
— Sony TV (@SonyTV) August 30, 2019 " class="align-text-top noRightClick twitterSection" data="
">His dialogues and songs are classic and shall remain timeless. While we all love to lip sync to his dialogues, Big B himself opted to make a Tiktok video with our contestant Deepika Sharma! Watch this fun filled episode tonight at 9 PM only on Sony @SrBachchan pic.twitter.com/rZTRtxDFjJ
— Sony TV (@SonyTV) August 30, 2019His dialogues and songs are classic and shall remain timeless. While we all love to lip sync to his dialogues, Big B himself opted to make a Tiktok video with our contestant Deepika Sharma! Watch this fun filled episode tonight at 9 PM only on Sony @SrBachchan pic.twitter.com/rZTRtxDFjJ
— Sony TV (@SonyTV) August 30, 2019
12ನೇ ಪ್ರಶ್ನೆ ಬರುವ ವೇಳೆಗೆ ಎಲ್ಲ ಲೈಫ್ ಲೈನ್ಗಳನ್ನೂ ಕಳೆದುಕೊಂಡಿದ್ದ ದೀಪಿಕಾ, 6 ಲಕ್ಷ 40 ಸಾವಿರ ರೂ. ಹಣ ಗೆದ್ದು ಕ್ವಿಟ್ ಆಗ್ತಾರೆ. ಕೆಬಿಸಿ ಶೋನ ಕೊನೆಯಲ್ಲಿ ಮಾತು ಕೊಟ್ಟಂತೆ ಅಮಿತಾಭ್ ಬಚ್ಚನ್ ತಮ್ಮದೇ ಸಿನಿಮಾದ ಅಂಗ್ರೇಜಿ ಮೇ ಕೆಹ್ತೇ ಹೈ ಹಾಡಿಗೆ ಟಿಕ್ಟಾಕ್ ಮಾಡಿದ್ದಾರೆ.