ಮುಂಬೈ: ಬಾಲಿವುಡ್ನ ಖ್ಯಾತ ನಟ, ಮೆಗಾಸ್ಟಾರ್ ಅಮಿತಾಬ್ ಬಚನ್ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಪ್ರೊಫೈಲ್ನಲ್ಲಿ ಅಮಿತಾಬ್ ಫೋಟೋ ಬದಲಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಫೊಟೋ ಪ್ರತ್ಯಕ್ಷವಾಗಿದೆ.
ಆಯಿಲ್ದಿಶ್ ಟಿಮ್ ತುರ್ಕಿಶ್ ಸೈಬರ್ ಆರ್ಮಿ ಎಂದು ಕರೆಸಿಕೊಳ್ಳುವ ಹ್ಯಾಕರ್ಗಳ ತಂಡ, ಕಳೆದ ಸೋಮವಾರ ಅಮಿತಾಬ್ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಇದರೊಂದಿಗೆ ಬೆದರಿಕೆ ಸಂದೇಶವನ್ನೂ ರವಾನಿಸಿದೆ.
ಇದು ನಾವು ಜಗತ್ತಿಗೆ ಹೇಳುತ್ತಿರುವ ಎಚ್ಚರಿಕೆಯ ಸಂದೇಶ. ಐಸ್ಲೆಂಡ್ ರಿಪಬ್ಲಿಕ್ಸ್, ತುರ್ಕಿಶ್ ಫುಟ್ಬಾಲರ್ಗಳ ಜೊತೆ ಅಗೌರವದಿಂದ ನಡೆದುಕೊಂಡಿರುವುದನ್ನು ನಾವು ಖಂಡಿಸುತ್ತೇವೆ. ನಾವು ಮೃದುವಾಗಿ ಮಾತನಾಡುತ್ತೇವೆ. ಆದರೆ ಜೊತೆಯಲ್ಲಿ ದೊಡ್ಡ ದೊಣ್ಣೆಯನ್ನು ಇಟ್ಟುಕೊಂಡೇ ಓಡಾಡುತ್ತೇವೆ. ದೊಡ್ಡ ಸೈಬರ್ ಹ್ಯಾಕ್ ಮಾಡುವ ಬಗ್ಗೆ ಮುನ್ನೆಚ್ಚರಿಕೆಯಾಗಿ ಈ ಹ್ಯಾಕ್ ಮಾಡಿ ಸಂದೇಶ ನೀಡಿದ್ದೇವೆ ಎಂದು ಹ್ಯಾಕರ್ಗಳು ಎಚ್ಚರಿಕೆ ನೀಡಿದ್ದಾರೆ.
ಇನ್ನು ಅಮಿತಾಬ್ ಫೋಟೋ ಇರಬೇಕಿದ್ದ ಪ್ರೊಫೈಲ್ ಜಾಗದಲ್ಲಿ ಪಾಕ್ ಪ್ರಧಾನಿ ಫೋಟೋ ಹಾಕಿದ್ದಲ್ಲದೆ, ಅಲ್ಲಿ ಲವ್ ಪಾಕಿಸ್ಥಾನ್ ಎಂದೂ ಬರೆಯಲಾಗಿತ್ತು. ಈ ಬಗ್ಗೆ ಅಮಿತಾಬ್ ಬಚ್ಚನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಹ್ಯಾಕ್ ಮಾಡಲಾದ ಟ್ವಿಟ್ಟರ್ ಅಕೌಂಟ್ ಮೊದಲಿನಂತೇ ಆಗಿದೆ.