ಅಮರಾವತಿ/ಆಂಧ್ರಪ್ರದೇಶ: ಕೇಂದ್ರ ಸಚಿವ ಅಮಿತ್ ಶಾ ತಿರುಪತಿಯಲ್ಲಿ ಮಾರ್ಚ್ 4 ರಂದು ನಡೆಯಲಿರುವ 29ನೇ ದಕ್ಷಿಣ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ದಕ್ಷಿಣ ವಲಯದ 8 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಹಾಗೂ ಅವರ ಮುಖ್ಯ ಕಾರ್ಯದರ್ಶಿಗಳು, ಸಲಹೆಗಾರರು ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ ಸಭೆಯಲ್ಲಿ ಸುಮಾರು 90 ರಿಂದ 100 ಗಣ್ಯರು ಮತ್ತು ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ "ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪುದುಚೇರಿಗಳು ಈ ದಕ್ಷಿಣ ವಲಯ ಮಂಡಳಿಯ ಸದಸ್ಯ ರಾಜ್ಯಗಳಾಗಿವೆ. ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತು ಲಕ್ಷದ್ವೀಪ ವಿಶೇಷ ಆಹ್ವಾನಿತ ಪ್ರದೇಶಗಳಾಗಿವೆ.
ಆತಿಥೇಯ ರಾಜ್ಯಗಳ ಸ್ವಾಗತ, ಭದ್ರತೆ, ಸಾರಿಗೆ, ಬೋರ್ಡಿಂಗ್ ಮತ್ತು ವಸತಿ ಸೇರಿದಂತೆ ಸಭೆಗೆ ಅಗತ್ಯವಾದ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಆಂಧ್ರಪ್ರದೇಶ ಸರ್ಕಾರವನ್ನು ಕೋರಲಾಗಿದೆ.
ಇದನ್ನೂ ಓದಿ:ಕೃಷಿ ಕಾಯ್ದೆ ವಿರೋಧಿಸಿ ಪ್ರಧಾನಿಗೆ 'ರಕ್ತ ಪತ್ರ' ರವಾನಿಸಿದ ಕರ್ನಾಟಕ ಕಿಸಾನ್ ಕಾಂಗ್ರೆಸ್