ETV Bharat / bharat

ನಳೀನ್​, ಅನಂತ್​, ಪ್ರಗ್ಯಾ ಕ್ಷಮೆಗೆ ಶಾ ತಾಕೀತು... 10 ದಿನದಲ್ಲಿ ವರದಿ ನೀಡಲು ಆದೇಶ

ಗೋಡ್ಸೆ ಬಗ್ಗೆ ಸಮರ್ಥನೆ ಮಾಡಿಕೊಂಡ ಪ್ರಗ್ಯಾ ಸಿಂಗ್​, ಕರ್ನಾಟಕದ ಸಂಸದರಾದ ನಳೀನ್​ ಕುಮಾರ್ ಕಟೀಲು ಹಾಗೂ ರಾಹುಲ್​ ಟೀಕಿಸಿದ ಸಚಿವ ಅನಂತಕುಮಾರ್​ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಗರಂ ಆಗಿದ್ದಾರೆ.

author img

By

Published : May 17, 2019, 12:39 PM IST

Updated : May 17, 2019, 12:56 PM IST

ಅಮಿತ್​

ನವದೆಹಲಿ: ಗೋಡ್ಸೆ ಸಮರ್ಥಿಸಿಕೊಂಡ ಪ್ರಗ್ಯಾ ಸಿಂಗ್​, ಕರ್ನಾಟಕದ ಸಂಸದರಾದ ನಳೀನ್​ ಕುಮಾರ್ ಕಟೀಲು ಹಾಗೂ ರಾಹುಲ್​ ಟೀಕಿಸಿದ ​ಸಚಿವ ಅನಂತಕುಮಾರ್​ ಕ್ಷಮೆಯಾಚಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ತಾಕೀತು ಮಾಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಮಿತ್​ ಶಾ, ಮೂವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಗಳಾಗಿವೆ. ಈ ಹೇಳಿಕೆಗೂ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಬಿಜೆಪಿ ಪಾತ್ರ ಇದರಲ್ಲಿ ಏನೂ ಇಲ್ಲ. ಅವರು ತಮ್ಮ ಹೇಳಿಕೆಗಳನ್ನ ವಾಪಸ್​ ಪಡೆದು ಕ್ಷಮೆಯಾಚಿಸಬೇಕು. ಬಿಜೆಪಿ ಇವರ ಹೇಳಿಕೆಗಳನ್ನ ಗಂಭೀರವಾಗಿ ಪರಿಗಣಿಸುತ್ತದೆ. ಈ ಬಗ್ಗೆ ಪಕ್ಷದ ಶಿಸ್ತು ಕಮೀಟಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳುವ ಮೂಲಕ ವಿವಾದದಿಂದ ದೂರ ಉಳಿಯುವ ಮತ್ತು ಅದರಿಂದಾಗುವ ಡ್ಯಾಮೇಜ್​ ಕಂಟ್ರೋಲ್​ ಮಾಡಲು ಮುಂದಾಗಿದ್ದಾರೆ.

ಅಷ್ಟೇ ಅಲ್ಲ ಈ ಸಂಬಂಧ 10 ದಿನಗಳೊಳಗಾಗಿ ಮೂವರಿಂದ ಉತ್ತರ ಪಡೆದು ಪಕ್ಷದ ಆಂತರಿಕ ಶಿಸ್ತು ಸಮಿತಿ ವರದಿ ರೆಡಿ ಮಾಡಿ ಸಲ್ಲಿಕೆ ಮಾಡುವಂತೆ ಅಮಿತ್​ ಶಾ ಆದೇಶಿಸಿದ್ದಾರೆ.

  • Amit Shah:Statements of Ananthkumar Hegde,Pragya Thakur&Nalin Kateel are their personal opinion,BJP has nothing to do with it.They have withdrawn their statements&apologized. BJP has taken their statements seriously and sent these statements to disciplinary committee (file pic) pic.twitter.com/8ZJYAIeKBl

    — ANI (@ANI) May 17, 2019 " class="align-text-top noRightClick twitterSection" data=" ">

Intro:Body:

1 Tweet.txt   

close

Conclusion:
Last Updated : May 17, 2019, 12:56 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.