ನವದೆಹಲಿ: ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪಿಯೂಷ್ ಗೋಯಲ್ ವಂದೇ ಭಾರತ್ ಎಕ್ಸ್ಪ್ರೆಸ್ ನೂತನ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
-
Union Home Min Amit Shah at the flag-off ceremony of Vande Bharat Express from Delhi to Katra: I'm proud that this 'Made in India' train is being flagged-off from here today. The railways is working towards achieving its targets keeping in mind principles of speed,scale&service pic.twitter.com/eN5AFcabka
— ANI (@ANI) October 3, 2019 " class="align-text-top noRightClick twitterSection" data="
">Union Home Min Amit Shah at the flag-off ceremony of Vande Bharat Express from Delhi to Katra: I'm proud that this 'Made in India' train is being flagged-off from here today. The railways is working towards achieving its targets keeping in mind principles of speed,scale&service pic.twitter.com/eN5AFcabka
— ANI (@ANI) October 3, 2019Union Home Min Amit Shah at the flag-off ceremony of Vande Bharat Express from Delhi to Katra: I'm proud that this 'Made in India' train is being flagged-off from here today. The railways is working towards achieving its targets keeping in mind principles of speed,scale&service pic.twitter.com/eN5AFcabka
— ANI (@ANI) October 3, 2019
ಇದೇ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಮೇಡ್ ಇನ್ ಇಂಡಿಯಾ ಅಡಿ ನಿರ್ಮಾಣವಾಗಿರುವ ಈ ರೈಲು ಲೋಕಾರ್ಪಣೆ ಗೊಳಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಸೇವೆ ದೃಷ್ಟಿಯಲ್ಲಿ ಇಟ್ಟುಕೊಂಡು ರೈಲ್ವೆ ಇಲಾಖೆ ವೇಗವಾಗಿ ಗಣನೀಯ ಸಾಧನೆ ಮಾಡುತ್ತಿದೆ ಎಂದು ರೈಲ್ವೆ ಇಲಾಖೆ ಕಾರ್ಯವನ್ನ ಶ್ಲಾಘಿಸಿದ್ದಾರೆ.
ನವದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದ ಕಟ್ರಾ ಜಿಲ್ಲೆಗೆ ಸಂಪರ್ಕಿಸುವ ಈ ರೈಲು ಶನಿವಾರದಿಂದ ಮೊದಲ ಸಂಚಾರ ಆರಂಭಿಸಲಿದೆ. ಈಗಾಗಲೆ ಬುಕ್ಕಿಂಗ್ ಕೂಡ ಪ್ರಾರಂಭವಾಗಿದೆ. ಮಂಗಳವಾರ ಹೊರತು ಪಡಿಸಿ ವಾರದ 6 ದಿನಗಳ ಕಾಲ ಈ ರೈಲು ಸಂಚರಿಸಲಿದೆ. ಈ ರೈಲಿನಿಂದ ನವದೆಹಲಿಯಿಂದ ಕಟ್ರಾಗೆ ತಲುಪಲು ಈ ಮೊದಲಿಗಿಂತ 4 ಗಂಟೆಗಳ ಸಮಯ ಉಳಿತಾಯವಾಗಲಿದೆ.
ಇನ್ನು ರೈಲ್ವೇ ಸಚಿವ ಸುರೇಶ್ ಅಂಗಡಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಏರಿ ಪರಿಶೀಲನೆ ನಡೆಸಿದ್ದಾರೆ.