ETV Bharat / bharat

ಲಾಕ್​ಡೌನ್​ ವೇಳೆ ಬೆಕ್ಕುಗಳ ನೆರವಿಗೆ ಬಂದ ಕೇರಳ ಹೈಕೋರ್ಟ್..

ಆನ್​ಲೈನ್​ ಮೂಲಕ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​, ಪ್ರಕಾಶ್​ಗೆ ಆಹಾರ ತೆಗೆದುಕೊಂಡು ಬರಲು ಮನೆಯಿಂದ ಹೊರಗಡೆ ತೆರಳಲು ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.

Kerala HC
ಕೇರಳ ಹೈಕೋರ್ಟ್
author img

By

Published : Apr 6, 2020, 6:29 PM IST

ಕೊಚ್ಚಿ(ಕೇರಳ) : ತನ್ನ ಬೆಕ್ಕುಗಳಿಗೆ ಹೊರಗಿನಿಂದ ಆಹಾರ ತರಲು ಪೊಲೀಸರಿಗೆ ಮನವಿ ಮಾಡಿ ಅನುಮತಿ ನಿರಾಕರಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್​ ಮೊರೆ ಹೋಗಿದ್ದ. ಈಗ ಆ ಆತನ ಮನವಿಯನ್ನ ಹೈಕೋರ್ಟ್‌ ಪುರಸ್ಕರಿಸಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿರುವ ಮೂರು ಬೆಕ್ಕುಗಳಿಗೆ ಆಹಾರ ತರಲು ಮನೆಯಿಂದ ಹೊರಗೆ ತೆರಳಲು ಅನುಮತಿ ನೀಡಬೇಕೆಂದು ಕೊಚ್ಚಿ ಮೂಲದ ಎನ್ ಪ್ರಕಾಶ್​​ ಎಂಬಾತ ಪೊಲೀಸರಲ್ಲಿ ಮನವಿ ಮಾಡಿದ್ದ. ಆದರೆ, ಪೊಲೀಸರು ಆತನ ಮನವಿ ತಿರಸ್ಕರಿಸಿದ್ದರು. ಇದರಿಂದ ಬೇಸತ್ತ ಪ್ರಕಾಶ್​​​ ಕೇರಳ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಲಾಕ್​ಡೌನ್ ವೇಳೆ ಮನೆಯಿಂದ ಹೊರಗಡೆ ತೆರಳಿ ಬೆಕ್ಕಿಗೆ ಆಹಾರ ತರಲು ಅನುಮತಿ ಕೊಡಿಸಬೇಕೆಂದು ಮನವಿ ಮಾಡಿದ್ದ.

ತಾನು ಸಸ್ಯಾಹಾರಿಯಾದ ಕಾರಣ ಮನೆಯಲ್ಲಿ ಬೆಕ್ಕಿಗೆ ಆಹಾರ ತಯಾರಿಸಲು ಸಾಧ್ಯವಾಗ್ತಿಲ್ಲ ಎಂದೂ ಉಲ್ಲೇಖಿಸಿದ್ದ. ಜೊತೆಗೆ ಬೆಕ್ಕುಗಳ ಫೋಟೋ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್​ ಬೀದಿ ನಾಯಿಗಳಿಗೆ ಆಹಾರ ನೀಡುವಂತೆ ಹೇಳಿಕೆ ನೀಡಿದ್ದ ವರದಿಯನ್ನೂ ಲಗತ್ತಿಸಿದ್ದ. ಆನ್​ಲೈನ್​ ಮೂಲಕ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​, ಪ್ರಕಾಶ್​ಗೆ ಆಹಾರ ತೆಗೆದುಕೊಂಡು ಬರಲು ಮನೆಯಿಂದ ಹೊರಗಡೆ ತೆರಳಲು ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.