ETV Bharat / bharat

ಗಡಿಯಲ್ಲಿ ಉದ್ವಿಗ್ನ ಸ್ಥಿತಿ: ಮರಗಟ್ಟುವ ಚಳಿ ಎದುರಿಸಲು ಸಿದ್ಧವಾಗ್ತಿರುವ ಸೇನೆ! - ಭಾರತ-ಚೀನಾ ನಡುವೆ ಗಡಿ ಸಮಸ್ಯೆ

ಲಡಾಖ್​ ಪ್ರದೇಶದಲ್ಲಿ ಮುಂದಿನ ತಿಂಗಳಿಂದ ಚಳಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈಗಾಗಲೇ ಭಾರತೀಯ ಯೋಧರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

Amid tensions at LAC
Amid tensions at LAC
author img

By

Published : Sep 16, 2020, 6:06 AM IST

ಲೇಹ್​: ಕಳೆದ ಕೆಲ ತಿಂಗಳಿಂದ ಭಾರತ-ಚೀನಾ ನಡುವೆ ಗಡಿ ವಿಚಾರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದರ ಮಧ್ಯೆ ಮರಗಟ್ಟುವ ಚಳಿ ಎದುರಿಸಲು ಭಾರತೀಯ ಸೇನೆ ಇದೀಗ ಸನ್ನದ್ಧವಾಗುತ್ತಿದೆ.

ಲಡಾಖ್​ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ತಾಪಮಾನ ಶೂನ್ಯಕ್ಕಿಂತಲೂ ಕೆಳಮಟ್ಟಕ್ಕೆ ಹೋಗಲಿದೆ. ಹೀಗಾಗಿ ಈ ಅವಧಿಯಲ್ಲಿ ಲಡಾಖ್​ನಿಂದ ಬೇರೆ ಬೇರೆ ಭಾಗಗಳಿಗೆ ಹೋಗುವ ಸಂಪರ್ಕ ಕಡಿತಗೊಳ್ಳಲಿದೆ. ಹೀಗಾಗಿ ಭಾರತ ಶಸ್ತ್ರಾಸ್ತ್ರ, ಇಂಧನ, ಆಹಾರ ಪದಾರ್ಥ ದಾಸ್ತಾನು ಮಾಡಿಕೊಳ್ಳುತ್ತಿದೆ.

ಇದರ ಜತೆಗೆ ತಾಪಮಾನ ಹೆಚ್ಚಿಸುವ ವಸ್ತುಗಳು, ಇಂಧನ, ಬಟ್ಟೆ ಸೇರಿದಂತೆ ಹೊಸ ಹೊಸ ಟೆಂಟ್​​​​ಗಳ ನಿರ್ಮಾಣ ಮಾಡುತ್ತಿದೆ. ಅಕ್ಟೋಬರ್​ ತಿಂಗಳಿಂದ ಚಳಿಗಾಲ ಆರಂಭಗೊಳ್ಳಲಿದ್ದು, ಏಪ್ರಿಲ್​ವರೆಗೂ ಇದು ಮುಂದುವರೆಯಲಿದೆ. ಹೀಗಾಗಿ ಚೀನಾ ಜತೆ ಮಾತ್ರವಲ್ಲದೇ ಚಳಿಯೊಂದಿಗೆ ಸೈನಿಕರು ಹೋರಾಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.