ETV Bharat / bharat

ಸೋಂಕಿತರನ್ನು 6 ಕಿಮೀ ದೂರದ ಆಸ್ಪತ್ರೆಗೆ ಕರೆದೊಯ್ಯಲು 9 ಸಾವಿರ ಕೇಳಿದ ಆ್ಯಂಬುಲೆನ್ಸ್​ ಚಾಲಕ

author img

By

Published : Jul 26, 2020, 4:59 PM IST

ಕೋವಿಡ್​ ಸೋಂಕಿತ ಬಾಲಕರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್​ ಚಾಲಕ ಅಧಿಕ ಮೊತ್ತದ ಹಣ ಬೇಡಿಕೆಯಿಟ್ಟಿದ್ದಲ್ಲದೇ ಹೀನಾಯವಾಗಿ ನಡೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

Ambulance
ಆ್ಯಂಬುಲೆನ್ಸ್​

ಕೋಲ್ಕತ್ತಾ: ಕೊರೊನಾ ಸೋಂಕಿತ ಇಬ್ಬರು ಸಹೋದರರನ್ನು ಒಂದು ಆಸ್ಪತ್ರೆಯಿಂದ 6 ಕಿ.ಮೀ ದೂರದಲ್ಲಿರುವ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್​ ಚಾಲಕ 9,200 ರೂ. ಬೇಡಿಕೆಯಿಟ್ಟಿದ್ದಾನೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮಕ್ಕಳ ಆರೋಗ್ಯ ಸಂಸ್ಥೆ (ICH)ಯಲ್ಲಿ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ 9 ತಿಂಗಳ ಗಂಡು ಮಗು ಹಾಗೂ 9 ವರ್ಷದ ಆತನ ಅಣ್ಣನಿಗೆ ಸೋಂಕು ತಗುಲಿತ್ತು. ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲು ಮುಂದಾದಾಗ ಆ್ಯಂಬುಲೆನ್ಸ್ ಡ್ರೈವರ್​ 9,200 ರೂ. ಕೊಡುವಂತೆ ಹೇಳಿದ್ದಾನೆ. ನನ್ನ ಬಳಿ ಅಷ್ಟೊಂದು ಹಣ ಇಲ್ಲೆವೆಂದು ಹೇಳಿದರೂ ಆತ ಗಮನ ನೀಡಲಿಲ್ಲ ಎಂದು ಬಾಲಕರ ತಂದೆ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ನನ್ನ ಕಿರಿಯ ಮಗನಿಗೆ ನೀಡಿದ್ದ ಆಕ್ಸಿಜನ್​ ಪೂರೈಕೆಯನ್ನು​ ನಿಲ್ಲಿಸಿ, ಆ್ಯಂಬುಲೆನ್ಸ್ ಒಳಗೆ ಕುಳಿತಿದ್ದ ನನ್ನ ಪತ್ನಿಯನ್ನು ಹೊರಹಾಕಿದ್ದಾನೆ. ಬಳಿಕ ವೈದ್ಯರು ಮಧ್ಯ ಪ್ರವೇಶಿ ಚರ್ಚಿಸಿ 2000 ರೂ.ಗೆ ತೆಗೆದುಕೊಳ್ಳುವಂತೆ ಚಾಲಕನಿಗೆ ಸೂಚಿಸಿದ್ದು, ಇದಕ್ಕಾಗಿ ಐಸಿಎಚ್​ ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.