ಅಹಮದಾಬಾದ್(ಗುಜರಾತ್): ಲೋಕಸಭಾ ಚುನಾವಣೆಗೂ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದ ಶಾಸಕ ಅಲ್ಪೇಶ್ ಠಾಕೂರ್ ಮತ್ತು ದವಲ್ಸಿಂಗ್ ಜಲಾ ಕೊನೆಗೂ ಬಿಜೆಪಿ ಸೇರಿದ್ದಾರೆ.
-
Ahmedabad: Alpesh Thakor & Dhaval Singh Zala join Bharatiya Janata Party (BJP) in presence of Gujarat BJP President, Jitu Vaghani. pic.twitter.com/qgcHc6RvwT
— ANI (@ANI) July 18, 2019 " class="align-text-top noRightClick twitterSection" data="
">Ahmedabad: Alpesh Thakor & Dhaval Singh Zala join Bharatiya Janata Party (BJP) in presence of Gujarat BJP President, Jitu Vaghani. pic.twitter.com/qgcHc6RvwT
— ANI (@ANI) July 18, 2019Ahmedabad: Alpesh Thakor & Dhaval Singh Zala join Bharatiya Janata Party (BJP) in presence of Gujarat BJP President, Jitu Vaghani. pic.twitter.com/qgcHc6RvwT
— ANI (@ANI) July 18, 2019
ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಜಿತು ವಘಾನಿ ನೇತೃತ್ವದಲ್ಲಿ ಕಮಲ ಪಾಳಯ ಸೇರಿಕೊಂಡಿದ್ದಾರೆ ಈ ಇಬ್ಬರು ಮುಖಂಡರು. ಕೋಲಿ ಠಾಕೂರ್ ಸಮುದಾಯಕ್ಕೆ ಸೇರಿದ ಅಲ್ಪೇಶ್ ಠಾಕೂರ್ ಅವರು 2017ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಗುಜರಾತ್ನಲ್ಲಿ ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ ಜತೆ ಸೇರಿ ಅಲ್ಪೇಶ್ ಠಾಕೂರ್ ಕೂಡ ಬಿಜೆಪಿ ವಿರುದ್ಧ ಪ್ರಬಲ ಹೋರಾಟ ಮಾಡಿದ್ದರು. ಆದರೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಮುಡಿದಿದ್ದಾರೆ.
ಗುಜರಾತ್ ಕಾಂಗ್ರೆಸ್ ಘಟಕದಲ್ಲಿನ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದ ಅಲ್ಪೇಶ್, ಪಕ್ಷದಲ್ಲಿ ಯುವ ಮುಖಂಡರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.