ವಿಲ್ಲುಪ್ಪುರಂ(ತಮಿಳುನಾಡು): ಅನುಚಿತ ವರ್ತನೆ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಥಳಿಸಿ ಕೊಂದಿರುವ ಆರೋಪ ಪ್ರಕರಣ ತಮಿಳುನಾಡಿನ ವಿಲ್ಲುಪ್ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಸ್. ಶಕ್ತಿವೇಲ್ ಎಂಬಾತ ಎಸ್ ಪುದೂರ್ ಎಂಬಲ್ಲಿ ಶೌಚಕ್ಕೆ ತೆರಳಿದ್ದಾಗ ಮಹಿಳೆವೋರ್ವಳ ಜೊತೆ ಅನುಚಿತವಾಗಿ ವರ್ತಿಸಿದ್ದಾನೆಂದು ಆರೋಪಿಸಿ ಜನರ ಗುಂಪು ಈತನ ಮೇಲೆ ಹಲ್ಲೆ ನಡೆಸಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗ್ತಿದೆ.
ಫೆಬ್ರವರಿ 12ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಕ್ತಿವೇಲ್ ಅನುಚಿತವಾಗಿ ವರ್ತಿಸಿಲ್ಲ ಎಂಬುದನ್ನು ಹೇಳುತ್ತಿದ್ದರೂ ಕೂಡಾ ಜನರ ಗುಂಪು ಈತನ ಮೇಲೆ ಹಲ್ಲೆ ನಡೆಸಿ ಕೊಂದಿದೆ ಶಕ್ತಿವೇಲ್ ಕುಟುಂಬದವರು ಆರೋಪಿಸುತ್ತಿದ್ದಾರೆ.
ಈ ಸಂಬಂಧ ಮೃತ ಶಕ್ತಿವೇಲ್ನ ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಇದೊಂದು ಜಾತಿಯಾಧಾರಿತ ಕೊಲೆ ಎಂದು ಆರೋಪ ಮಾಡಿದೆ ಹಾಗೂ ಕೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಸದ್ಯಕ್ಕೆ ಕೊಲೆ ಆರೋಪಿಗಳನ್ನು ದಿಂಡಿವನಂ ಕೋರ್ಟ್ ಮುಂದೆ ಹಾಜರುಪಡಿಲಾಗಿದೆ. ಫೆಬ್ರವರಿ 28ರವರೆಗೆ ಕುಡ್ಡಲ್ಲೋರ್ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳನ್ನು ಇರಿಸುವಂತೆ ಕೋರ್ಟ್ ಆದೇಶಿಸಿದೆ.
ಕೊಲೆಯ ಕಾರಣ ನಿಗೂಢವಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರವಷ್ಟೇ ಕೊಲೆಯ ಹಿಂದಿನ ನಿಜವಾದ ಕಾರಣ ಹೊರಬರಬೇಕಿದೆ.