ETV Bharat / bharat

ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ: ಆಸ್ಪತ್ರೆಯಲ್ಲಿನ ಮಂಚಕ್ಕೆ ಕಟ್ಟಿ ಹಾಕಿದ ಆರೋಪ!

ಕೋವಿಡ್​ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರನ್ನು ಅಲ್ಲಿನ ಮಂಚಕ್ಕೆ ಕಟ್ಟಿ ಹಾಕಲಾಗಿದ್ದು, ಅದರಿಂದ ಬಿದ್ದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.

Thrissur Medical College
Thrissur Medical College
author img

By

Published : Oct 23, 2020, 3:19 PM IST

Updated : Oct 23, 2020, 3:29 PM IST

ತ್ರಿಶೂರ್​(ಕೇರಳ): ಕೇರಳದ ತ್ರಿಶೂರ್​ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ವಿರುದ್ಧ ಗಂಭೀರ ವೈದ್ಯಕೀಯ ನಿರ್ಲಕ್ಷ್ಯ ಕೇಳಿ ಬಂದಿದೆ. ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿನ ಮಂಚಕ್ಕೆ ಕಟ್ಟಿ ಹಾಕಿರುವ ವಿಡಿಯೋ ವೈರಲ್​ ಆಗಿದೆ.

ರೋಗಿಯನ್ನ ಆಸ್ಪತ್ರೆಯ ಮಂಚಕ್ಕೆ ಕಟ್ಟಿ ಹಾಕಿದ ವೈದ್ಯಕೀಯ ಸಿಬ್ಬಂದಿ

ತ್ರಿಶೂರ್​ನ ವೈದ್ಯಕೀಯ ಕಾಲೇಜ್​ನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ರೋಗಿಯ ಕೈಯನ್ನ ಮಂಚಕ್ಕೆ ಕಟ್ಟಿ ಹಾಕಿದ್ದರಿಂದ ಎದ್ದೇಳಲು ಪ್ರಯತ್ನಿಸಿರುವ ಮಹಿಳೆ ಹಾಸಿಗೆಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಆಕೆಯ ಸಂಬಂಧಿಕರು ಜಿಲ್ಲಾ ವೈದ್ಯಕೀಯ ಅಧಿಕಾರಿ ಹಾಗೂ ವೈದ್ಯಕೀಯ ಕಾಲೇಜು​ ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ್ದಾರೆ.

ನೆಲದ ಮೇಲೆ ಬಿದ್ದಿರುವ ಕಾರಣ ಮಹಿಳೆಯ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಇದರ ಜತೆಗೆ ಮುಖದ ವಿವಿಧ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿದು ಬಂದಿದೆ. ಇದರ ವಿಡಿಯೋವನ್ನು ಅದೇ ವಾರ್ಡ್​ನಲ್ಲಿದ್ದ ಮತ್ತೊಬ್ಬ ರೋಗಿ ತನ್ನ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ.

Last Updated : Oct 23, 2020, 3:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.