ಭೋಪಾಲ್ (ಮಧ್ಯಪ್ರದೇಶ): ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಖಂಡಿಸಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ಸಂಘದ ಸಿದ್ಧಾಂತ ಹೊಂದಿರುವ ಜನರು ಅಧಿಕಾರದಲ್ಲಿದ್ದು, ಅವರು ಕಾರ್ಮಿಕ ವಿರೋಧಿಗಳಾಗಿದ್ದಾರೆ ಎಂದು ಹೇಳಿದರು.
ಕೇಂದ್ರ ಶ್ರಮ ಸಂಗಥನ್ನ ಸತ್ಯಾಗ್ರಹದಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, "ಬಿಜೆಪಿ ಬಲಪಂಥೀಯರ ಸಿದ್ಧಾಂತವನ್ನು ಹೊಂದಿರುವ ಪಕ್ಷವಾಗಿದ್ದು, ಅದು ಕಾರ್ಮಿಕ ವಿರೋಧಿಯಾಗಿದೆ. 2014ರಿಂದ ಕೇಂದ್ರ ಸರ್ಕಾರ ಕೈಗೊಂಡ ಪ್ರತಿಯೊಂದು ನಿರ್ಧಾರವೂ ಕಾರ್ಮಿಕ ವಿರೋಧಿಯಾಗಿದೆ" ಎಂದು ಹೇಳಿದರು.
"ಸಾರ್ವಜನಿಕ ವಲಯಕ್ಕೆ ಯಾವುದೇ ತಾಂತ್ರಿಕ ಸಾಮರ್ಥ್ಯವಿಲ್ಲ ಎಂದು ತೋರಿಸಲು ಅವರು ಎಲ್ಲವನ್ನೂ ಖಾಸಗೀಕರಣಗೊಳಿಸಲು ಹೊರಟಿದ್ದಾರೆ" ಎಂದು ಅವರು ಹೇಳಿದರು.