ನವದೆಹಲಿ: 2017ರಲ್ಲಿ ನಡೆದ ಸಂಜೋತಾ ಎಕ್ಸ್ಪ್ರೆಸ್ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿದ್ದ ನಾಲ್ವರು ಆರೋಪಿಗಳನ್ನ ಎನ್‌ಐಎ ಕೋರ್ಟ್ ಖುಲಾಸೆಗೊಳಿಸಿ ಆದೇಶಿಸಿದೆ.
ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿದ್ದ ಆರ್ಎಸ್ಎಸ್ನ ಮಾಜಿ ಕಾರ್ಯಕರ್ತ ಸ್ವಾಮಿ ಅಸೀಮಾನಂದ ಸೇರಿ ನಾಲ್ವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ಪಂಚಕುಲಾ ನ್ಯಾಯಾಲಯ ಖುಲಾಸೆಗೊಳಿಸಿ, ಮಹತ್ವದ ತೀರ್ಪು ಹೊರಡಿಸಿದೆ.
ಪ್ರಕರಣದಲ್ಲಿ ಅಸೀಮಾನಂದ ಸೇರಿ ಲೋಕೇಶ್ ಶರ್ಮಾ, ಕಮಲ್ ಚೌಹಾಣ್ ಮತ್ತು ರಾಜೀಂದರ್ ಚೌಧರಿ ನಾಲ್ವರು ಆರೋಪಿಗಳಾಗಿದ್ದರು. ಆದರೆ, ಈಗ ಅವರ ವಿರುದ್ಧ ಸರಿಯಾದ ಸಾಕ್ಷ್ಯ ನೀಡಲು ವಿಫಲಗೊಂಡಿರುವ ಕಾರಣ ನಾಲ್ವರನ್ನ ಖುಲಾಸೆಗೊಳಸಲಾಗಿದೆ. ಈ ಘಟನೆಯಲ್ಲಿ ಭಾರತೀಯ ರೈಲ್ವೆ ವಿಭಾಗದ ನಾಲ್ವರು ಸಿಬ್ಬಂದಿ, ಪಾಕ್‌ನ 42 ಪ್ರಯಾಣಿಕರೂ ಸೇರಿ 68 ಮಂದಿ ಸಾವನ್ನಪ್ಪಿದ್ದರು.