ETV Bharat / bharat

ರೈಲು ನಿಲ್ದಾಣ ಪ್ರವೇಶಕ್ಕೂ ಏರ್​ಪೋರ್ಟ್​ ಮಾದರಿ ಬೋರ್ಡಿಂಗ್ ಪಾಸ್​!! - ಕಾಂಟ್ಯಾಕ್ಟಲೆಸ್​ ಮಾದರಿ

ಒಂದೇ ಸ್ಥಳದಲ್ಲಿ ಎಲ್ಲ ಅಗತ್ಯ ಪರೀಕ್ಷೆಗಳನ್ನು ಮುಗಿಸಿ ಪ್ರಯಾಣಿಕರು ನಿಲ್ದಾಣದೊಳಗೆ ತೆರಳಬಹುದು. ರೈಲ್ವೆ ನಿಲ್ದಾಣದ ಒಂದು ಕೌಂಟರ್​ನಲ್ಲಿ ಈಗಾಗಲೇ ಕ್ಯೂಆರ್ ಕೋಡ್ ಆಧಾರಿತ ಟಿಕೇಟ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ..

Airport like boarding passes
Airport like boarding passes
author img

By

Published : Jun 19, 2020, 5:19 PM IST

ಪ್ರಯಾಗರಾಜ್ : ರೈಲ್ವೆ ನಿಲ್ದಾಣದಲ್ಲಿ ಸಂಪರ್ಕ ರಹಿತ ಟಿಕೇಟಿಂಗ್​ಗಾಗಿ ಪ್ರಯಾಗರಾಜ್ ರೈಲು ನಿಲ್ದಾಣದಲ್ಲಿ ಏರ್​ಪೋರ್ಟ್ ಮಾದರಿಯ ಬೋರ್ಡಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉತ್ತರ ಮಧ್ಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೊಸ ವ್ಯವಸ್ಥೆಯ ಕುರಿತು ಉತ್ತರ ಮಧ್ಯ ರೈಲ್ವೆಯ ಸಿಪಿಆರ್​ಒ ಅಜಿತ್ ಕುಮಾರ್‌ಸಿಂಗ್​ ಮಾಹಿತಿ ನೀಡಿದರು. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೊದಲಿಗೆ 4 ಚೆಕ್ ಇನ್ ಕೌಂಟರ್‌ಗಳಿರುವ ಬೋರ್ಡಿಂಗ್​ ಹಾಲ್​ಗೆ ಪ್ರವೇಶಿಸುತ್ತಾರೆ. ಕೊರೊನಾ ವೈರಸ್​ ಹರಡದಂತೆ ಮುನ್ನೆಚ್ಚರಿಕೆಯಾಗಿ ಈ ಎಲ್ಲ ಕೌಂಟರ್​ಗಳು ಸಂಪೂರ್ಣ ಕಾಂಟ್ಯಾಕ್ಟ್‌ಲೆಸ್​ ಮಾದರಿ ಕಾರ್ಯನಿರ್ವಹಿಸುತ್ತವೆ. ಕೌಂಟರ್​ನಲ್ಲಿ ಅಳವಡಿಸಿರುವ ಸ್ಕ್ಯಾನರ್​ ಟಿಕೇಟ್ ಸ್ಕ್ಯಾನ್ ಮಾಡುತ್ತದೆ ಹಾಗೂ ಅಲ್ಲಿಯೇ ಇರುವ ವೆಬ್​ಕ್ಯಾಮ್ ಪ್ರಯಾಣಿಕರ ಚಿತ್ರ ಸೆರೆಹಿಡಿಯುತ್ತದೆ.

ಈ ಎಲ್ಲ ಮಾಹಿತಿಗಳು ಕೌಂಟರ್ ಒಳಗಡೆ ಇರುವ ಸ್ಟಾಫ್ ಕಂಪ್ಯೂಟರ್​ಗೆ ರವಾನಿಸಲ್ಪಡುತ್ತವೆ ಎಂದು ಅಜಿತ್ ಕುಮಾರ್‌ ಸಿಂಗ್ ಹೇಳಿದರು. ಪ್ರಯಾಣಿಕರು ನಿಲ್ಲುವ ಸ್ಥಳ ಮತ್ತು ಕೌಂಟರ್ ನಡುವೆ ಗಾಜಿನ ಪರದೆ ಅಳವಡಿಸಲಾಗಿದೆ. ಎರಡೂ ಬದಿಯಲ್ಲಿ ಇರುವ ಮೈಕ್ರೊಫೋನ್ ಮೂಲಕ ಪ್ರಯಾಣಿಕರು ಕೌಂಟರ್ ಸಿಬ್ಬಂದಿಯೊಂದಿಗೆ ಮಾತನಾಡಬಹುದು. ಈ ವ್ಯವಸ್ಥೆಯಿಂದ ಟಿಕೆಟ್ ನೀಡುವ ಹಾಗೂ ಪ್ರಯಾಣಿಕರು ರೈಲು ಹತ್ತುವ ಪ್ರಕ್ರಿಯೆ ಸಂಪೂರ್ಣ ಭೌತಿಕ ಸಂಪರ್ಕರಹಿತವಾಗಲಿದೆ. ಇದೇ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಸಹ ಅಳವಡಿಸಲಾಗುತ್ತಿದೆ.

ಒಂದೇ ಸ್ಥಳದಲ್ಲಿ ಎಲ್ಲ ಅಗತ್ಯ ಪರೀಕ್ಷೆಗಳನ್ನು ಮುಗಿಸಿ ಪ್ರಯಾಣಿಕರು ನಿಲ್ದಾಣದೊಳಗೆ ತೆರಳಬಹುದು. ಪ್ರಯಾಗರಾಜ್​ ನಿಲ್ದಾಣದ ಒಂದು ಕೌಂಟರ್​ನಲ್ಲಿ ಈಗಾಗಲೇ ಕ್ಯೂಆರ್ ಕೋಡ್ ಆಧಾರಿತ ಟಿಕೇಟ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.