ಶಂಷಾಬಾದ್/ತೆಲಂಗಾಣ: ಕರ್ನಾಟಕ ಮೂಲದ ಏರ್ಪೋರ್ಟ್ ಉದ್ಯೋಗಿಯೊಬ್ಬರು ಮೊಬೈಲ್ನಲ್ಲಿ ಚಾಟಿಂಗ್ ಮಾಡುತ್ತ ಮೂರಂತಸ್ತಿನ ಮಹಡಿಯಿಂದ ಕೆಳಗೆ ಬಿದ್ದು ಸಾವಿಗೀಡಾಗಿರುವ ಘಟನೆ, ತೆಂಲಗಾಣದ ಶಂಷಾಬಾದ್ನಲ್ಲಿ ಜರುಗಿದೆ.
ಬಾಗಲಕೋಟೆ ಮೂಲದ ಸಿಮ್ರನ್ ಮೃತ ಮಹಿಳೆ. ಇವರು ಏರ್ಪೋರ್ಟ್ನ ಗ್ರಾಹಕ ಸೇವಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಮೃತ ಮಹಿಳೆ ಶವವನ್ನು ಉಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಿದ್ದು, ಶವ ಪರೀಕ್ಷೆ ನಡೆಯುತ್ತಿದೆ. ಈ ಸಂಬಂಧ ಶಂಷಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.