ನೋಯ್ಡಾ: ಭಾರತದಲ್ಲಿದ್ದ 300 ವಿದೇಶಿಯರನ್ನು ಮರಳಿ ಲಂಡನ್ಗೆ ಕಳುಹಿಸುವಲ್ಲಿ ಏರ್ ಇಂಡಿಯಾ ಯಶಸ್ವಿಯಾಗಿದೆ.
ಈ ಯಶಸ್ಸಿನ ಹಿಂದಿರುವ ಪೈಲಟ್ ಹೆಸರು ರಾಜೆಶ್ ಕುಮಾರ್ ಗುರ್ಜರ್.

ತನ್ನ ಮಾನವೀಯತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿರುವ ರಾಜೇಶ್, ಗ್ರೇಟರ್ ನೋಯ್ಡಾದ ಅಗಾಪುರ ಎಂಬ ಪುಟ್ಟ ಹಳ್ಳಿಗೆ ಸೇರಿದವರು.
ಎಲ್ಲಾ ಪೈಲಟ್ಗಳು ವಿದೇಶಿಯರನ್ನು ಕರೆದೊಯ್ಯಲು ನಿರಾಕರಿಸಿದಾಗ, ರಾಜೇಶ್ ವಿಮಾನ ಹಾರಿಸಲು ಒಪ್ಪಿ, ವಿದೇಶಿಯರನ್ನು ಅವರ ದೇಶಕ್ಕೆ ತಲುಪಿಸಿದ್ದಾರೆ.

ಭಾರತದಲ್ಲಿ ವಿದೇಶಿಯರನ್ನು ಕ್ವಾರಂಟೈನ್ಗೆ ಒಳಪಡಿಸಿದ್ದರಿಂದ ಅವರು ಇಲ್ಲಿಯೇ ಉಳಿದಿದ್ದರು. ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಅವರನ್ನು ತಮ್ಮ ದೇಶಕ್ಕೆ ಕಳುಹಿಸಿಕೊಡಲಾಯಿತು.
ವಿದೇಶಿಯರನ್ನು ಲಂಡನ್ಗೆ ಕರೆದೊಯ್ಯುವ ಯೋಜನೆಯ ಕುರಿತು ಪೈಲಟ್ಗಳಿಗೆ ಕೇಳಿದಾಗ, ಎಲ್ಲರೂ ಇದರಿಂದ ಹಿಂದೆ ಸರಿದರು. ಆದರೆ ರಾಜೇಶ್ ಅವರಿಗೆ ಸಹಾಯ ಮಾಡಲು ಒಪ್ಪಿಕೊಂಡು, ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.
ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಏಪ್ರಿಲ್ 13ರಂದು ಮುಂಜಾನೆ 2.30ಕ್ಕೆ ಹೊರಟು 11.00 ಗಂಟೆಗೆ ಲಂಡನ್ ತಲುಪಿತು. ಅಮೃತಸರದಿಂದ 230 ಹಾಗೂ ದೆಹಲಿಯಿಂದ 70 ಮಂದಿ ಪ್ರಯಾಣಿಕರು ವಿಮಾನದಲ್ಲಿದ್ದರು.