ನವದೆಹಲಿ: ಪ್ಲಾಸ್ಟಿಕ್ ಬಳಕೆಯನ್ನು ಬಳಕೆಗೆ ಕಡಿವಾಣ ಹಾಕುವಂತೆ ಪ್ರಧಾನಿ ಮೋದಿ ಈಗಾಗಲೇ ದೇಶದ ಜನತೆಗೆ ಕರೆಕೊಟ್ಟಿದ್ದು, ಇದೇ ನಿಟ್ಟಿನಲ್ಲಿ ದೇಶದ ಖ್ಯಾತ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸ್ಪಂದಿಸಿದೆ.
ಅಕ್ಟೋಬರ್ 2ರಿಂದ ಏಕಬಳಕೆಯ ಪ್ಲಾಸ್ಟಿಕ್ಗಳಾದ ಬ್ಯಾಗ್, ಕಪ್ ಹಾಗೂ ಸ್ಟ್ರಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಏರ್ ಇಂಡಿಯಾ ಸಂಸ್ಥೆ ತೀರ್ಮಾನಿಸಿದೆ.
ಪ್ಲಾಸ್ಟಿಕ್ಗಳಲ್ಲಿ ದೊರೆತ್ತಿದ್ದ ಎಲ್ಲ ಆಹಾರ ವಸ್ತುಗಳು ಇನ್ನು ಮುಂದೆ ಏರ್ ಇಂಡಿಯಾ ವಿಮಾನಗಳಲ್ಲಿ ಕಾಗದ ಆಕ್ರಮಿಸಿಕೊಳ್ಳಲಿವೆ.
ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಪ್ಲಾಸ್ಟಿಕ್ ಬಳಕೆಯನ್ನು ಕನಿಷ್ಠಮಟ್ಟಕ್ಕೆ ಇಳಿಕೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಮನವಿ ಮಾಡಿದ್ದರು.