ನವದೆಹಲಿ: ವಾರದ ಹಿಂದೆ ನಾಪತ್ತೆಯಾಗಿದ್ದ AN-32 ವಿಮಾನದ ಅವಶೇಷ ಪತ್ತೆ ಮಾಡಿರುವ ಭಾರತೀಯ ವಾಯುಪಡೆ, ಅವಘಡದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ವಿಮಾನದಲ್ಲಿದ್ದ 13 ಮಂದಿಯ ಮೃತದೇಹಗಳನ್ನು ಹಾಗೂ ಬ್ಲಾಕ್ ಬಾಕ್ಸ್ ಅನ್ನು ವಾಯುಪಡೆ ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಬದುಕುಳಿದ ಯಾರೊಬ್ಬರನ್ನೂ ನಾವು ಪತ್ತೆ ಮಾಡಲಾಗಲಿಲ್ಲ. ಈ ಬಗ್ಗೆ ವಿಮಾನದಲ್ಲಿದ್ದ 13 ಮಂದಿಯ ಕುಟುಂಬಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದೆ.
-
IAF Pays tribute to the brave Air-warriors who lost their life during the #An32 crash on 03 Jun 2019 and stands by with the families of the victims. May their soul rest in peace.
— Indian Air Force (@IAF_MCC) June 13, 2019 " class="align-text-top noRightClick twitterSection" data="
">IAF Pays tribute to the brave Air-warriors who lost their life during the #An32 crash on 03 Jun 2019 and stands by with the families of the victims. May their soul rest in peace.
— Indian Air Force (@IAF_MCC) June 13, 2019IAF Pays tribute to the brave Air-warriors who lost their life during the #An32 crash on 03 Jun 2019 and stands by with the families of the victims. May their soul rest in peace.
— Indian Air Force (@IAF_MCC) June 13, 2019
8 ಮಂದಿಯ ರಕ್ಷಣಾ ತಂಡ ಇಂದು ವಿಮಾನ ಅಪಘಾತಕ್ಕೊಳಗಾದ ಪ್ರದೇಶ ತಲುಪಿತ್ತು.
-
Following air-warriors lost their life in the tragic #An32 crash - W/C GM Charles, S/L H Vinod, F/L R Thapa, F/L A Tanwar, F/L S Mohanty, F/L MK Garg, WO KK Mishra, Sgt Anoop Kumar, Cpl Sherin, LAC SK Singh, LAC Pankaj, NC(E) Putali & NC(E) Rajesh Kumar.
— Indian Air Force (@IAF_MCC) June 13, 2019 " class="align-text-top noRightClick twitterSection" data="
">Following air-warriors lost their life in the tragic #An32 crash - W/C GM Charles, S/L H Vinod, F/L R Thapa, F/L A Tanwar, F/L S Mohanty, F/L MK Garg, WO KK Mishra, Sgt Anoop Kumar, Cpl Sherin, LAC SK Singh, LAC Pankaj, NC(E) Putali & NC(E) Rajesh Kumar.
— Indian Air Force (@IAF_MCC) June 13, 2019Following air-warriors lost their life in the tragic #An32 crash - W/C GM Charles, S/L H Vinod, F/L R Thapa, F/L A Tanwar, F/L S Mohanty, F/L MK Garg, WO KK Mishra, Sgt Anoop Kumar, Cpl Sherin, LAC SK Singh, LAC Pankaj, NC(E) Putali & NC(E) Rajesh Kumar.
— Indian Air Force (@IAF_MCC) June 13, 2019
ದುರ್ಘಟನೆಯಲ್ಲಿ ವಿಂಗ್ ಕಮಾಂಡರ್ ಜಿ.ಎಂ ಚಾರ್ಲ್ಸ್, ಸ್ಕ್ವಾಡ್ರನ್ ಲೀಡರ್ ಹೆಚ್. ವಿನೋದ್, ಫ್ಲೈಟ್ ಲೆಫ್ಟಿನೆಂಟ್ ಆರ್. ತಾಪ, ಎ. ತನ್ವರ್, ಎಸ್, ಮೊಹಂತಿ, ಎಂ.ಕೆ ಜಾರ್ಜ್, ವಾರಂಟ್ ಆಫೀಸರ್ ಕೆ.ಕೆ. ಮಿಶ್ರ, ಸರ್ಜೆಂಟ್ ಅನೂಪ್ ಕುಮಾರ್, ಕಾರ್ಪೊರಲ್ ಶೆರೈನ್, ಲೀಡ್ ಏರ್ಕ್ರಾಫ್ಟ್ ಮನ್ ಎಸ್.ಕೆ. ಸಿಂಗ್, ಪಂಕಜ್, ನಾನ್ ಕಾಂಬಾಟೆಂಟ್ ಪುಟಾಲಿ ಹಾಗೂ ರಾಜೇಶ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.
ಘಟನೆಯಲ್ಲಿ ಮೃತಪಟ್ಟ ವಾಯುಪಡೆ ಸಿಬ್ಬಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
-
For over 10 days India has hoped & prayed that our 13 Air-Warriors on the missing IAF #AN32 were safe.
— Rahul Gandhi (@RahulGandhi) June 13, 2019 " class="align-text-top noRightClick twitterSection" data="
Sadly, it is now confirmed that all 13 have perished in a crash.
My deepest condolences to the families of our 13 brave men in uniform. You are in my thoughts & prayers. https://t.co/8mPRLjKMoZ
">For over 10 days India has hoped & prayed that our 13 Air-Warriors on the missing IAF #AN32 were safe.
— Rahul Gandhi (@RahulGandhi) June 13, 2019
Sadly, it is now confirmed that all 13 have perished in a crash.
My deepest condolences to the families of our 13 brave men in uniform. You are in my thoughts & prayers. https://t.co/8mPRLjKMoZFor over 10 days India has hoped & prayed that our 13 Air-Warriors on the missing IAF #AN32 were safe.
— Rahul Gandhi (@RahulGandhi) June 13, 2019
Sadly, it is now confirmed that all 13 have perished in a crash.
My deepest condolences to the families of our 13 brave men in uniform. You are in my thoughts & prayers. https://t.co/8mPRLjKMoZ
ವಿಮಾನದಲ್ಲಿ ನಾಪತ್ತೆಯಾಗಿದ್ದ ವಾಯುಪಡೆ ಯೋಧರು ಸುರಕ್ಷಿತವಾಗಿ ವಾಪಸ್ಸಾಗುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಇಂದು ಅವರೆಲ್ಲ ಮೃತಪಟ್ಟಿದ್ದಾರೆ ಎಂದು ಕೇಳಿ ದುಃಖವಾಗಿದೆ ಎಂದು ರಾಹುಲ್ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಭವಿಸಿದ್ದು ಹೇಗೆ?
ಜೂನ್ 3ರಂದು ಅಸ್ಸೋಂನ ಜೊರ್ಹಾತ್ನಿಂದ ಹೊರಟಿದ್ದ ವಾಯುಸೇನೆಯ ವಿಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ವಾರಗಟ್ಟಲೆ ವಿಮಾನ ಪತ್ತೆಕಾರ್ಯ ನಡೆಸಿದರೂ ಪ್ರತಿಕೂಲ ವಾತಾವರದಿಂದಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಮಂಗಳವಾರ 12,000 ಅಡಿ ಎತ್ತರದ ಪರ್ವತ ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದವು. ದಟ್ಟಮೋಡಗಳಿಂದ ಮಾರ್ಗ ಗೋಚರಿಸದೆ ವಿಮಾನ, ಪರ್ವತಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿತ್ತು.