ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ರಣಭೂಮಿಯಲ್ಲಿ ಮುಂದೆನಿಂತು ಎರಡು ಯುದ್ಧ ನಡೆಸುವಷ್ಟು ಸಂಪೂರ್ಣವಾಗಿ ಸಿದ್ಧವಾಗಿದೆ. ಲಡಾಖ್‌ನಲ್ಲಿ ಚೀನಾ ಎದುರಿಸುವಂತಹ ಸಾಮರ್ಥ್ಯ ಹೊಂದಿದೆ ಎಂದು ಐಎಎಫ್ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಹೇಳಿದ್ದಾರೆ.
ಅಕ್ಟೋಬರ್ 8ರಂದು ವಾಯುಪಡೆಯ ದಿನಾಚರಣೆಯ ಮುನ್ನ ನಡೆದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭದೌರಿಯಾ, ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ನಡುವಿನ ಮಾತುಕತೆ ಫಲಪ್ರದವಾಗಲಿದೆ ಎಂದು ಆಶಿಸಿದ್ದಾರೆ.
ಈಗ ನಡೆಯುತ್ತಿರುವ ಸಂವಾದದ ಪ್ರಕ್ರಿಯೆಯು ನಿಧಾನವಾಗಿದೆ. ಎರಡೂ ಕಡೆಯವರು ಚಳಿಗಾಲದಲ್ಲಿ ನೆಲೆಯೂರಲು ಸಜ್ಜಾಗಿದ್ದಾರೆಂದು ಅವರು ಒಪ್ಪಿಕೊಂಡರು. ಲಡಾಖ್ನಾದ್ಯಂತ ಹತ್ತಾರು ಸೈನಿಕರು ಮತ್ತು ಮಿಲಿಟರಿ ಕ್ಯಾಂಪ್ಗಳನ್ನು ನಿಯೋಜಿಸಲಾಗಿದೆ ಎಂದರು.
ಲಡಾಖ್‌ನಲ್ಲಿನ ಸವಾಲು ಸ್ಪಷ್ಟವಾಗಿ ಹೊರಬರುತ್ತಿದ್ದಂತೆ ಐಎಎಫ್ ತನ್ನ ಪಡೆಗಳನ್ನು ತ್ವರಿತವಾಗಿ ನಿಯೋಜಿಸಿದೆ. ಚೀನಾ ಪಡೆಗಳ ಒಳನುಸುಳುವಿಕೆ ಮತ್ತು ಗಡಿ ಪ್ರದೇಶಗಳಲ್ಲಿ ಮಿಲಿಟರಿ ಮತ್ತು ವಾಯು ಪಡೆ ನಿಯೋಜಿಸುವಿಕೆಯನ್ನು ಉಲ್ಲೇಖಿಸಿದರು.
ಭಾರತೀಯ ಸೈನ್ಯಕ್ಕೆ ಬೇಕಾದ ಯುದ್ಧ ಸಾಮಗ್ರಿಗಳ ಬಗ್ಗೆ ಮಾತನಾಡಿದ ಅವರು, ನಮಗೆ ಯಾವೆಲ್ಲ ಉಪಕರಣಗಳು ಅಗತ್ಯವಿತ್ತೋ ಅವೆಲ್ಲವೂ ಲಭ್ಯವಾಗಿವೆ. ಲಡಾಖ್‌ನಲ್ಲಿ ಮಾತ್ರವಲ್ಲ, ಐಎಎಫ್ ಈ ಪ್ರದೇಶದಾದ್ಯಂತ ಬಲವಾಗಿ ತನ್ನ ಪಡೆ ನಿಯೋಜಿಸಿದೆ. 2008ರಲ್ಲಿನ ಲಡಾಖ್‌ನಲ್ಲಿ ದೌಲತ್ ಬೇಗ್ ಓಲ್ಡಿ ವಾಯುನೆಲೆಯ ಕಾರ್ಯಾಚರಣೆಯು ಚೀನಿಯರಿಗೆ ದೊಡ್ಡ ಅಪಾಯವಾಗಿದೆ ಎಂದು ಹೇಳಿದರು.
ನಾವು ಬಹಳಷ್ಟು ಉತ್ತಮ ಸ್ಥಾನದಲ್ಲಿದ್ದೇವೆ. ಯಾವುದೇ ಸಂಘರ್ಷದ ಸಂದರ್ಭದಲ್ಲಿ ಚೀನಾ ನಮ್ಮನ್ನು ಉತ್ತಮಗೊಳಿವಾಗಿಸಲಬಲ್ಲದು ಎಂಬುದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಎದುರಾಳಿಯನ್ನು ಕಡಿಮೆ ಅಂದಾಜು ಮಾಡುವ ಪ್ರಶ್ನೆಯೇ ನಮ್ಮಲ್ಲಿ ಇಲ್ಲ. ಚೀನಾ ಮನುಷ್ಯ, ಯಂತ್ರ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಿದೆ ಎಂದರು.