ಗಾಂಧಿನಗರ(ಗುಜರಾತ್): ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಗುಜರಾತ್‌ನ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಜೊತೆ ಕೈಜೋಡಿಸಿರುವ ಸಂಸದ ಅಸಾದುದ್ದೀನ್ ಒವೈಸಿ ಅವರ ಅಖಿಲ ಭಾರತ ಮಜ್ಲಿಸ್-ಎ-ಇತ್ತ್ಹೇದುಲ್ ಮುಸ್ಲೀಮೀನ್ (ಎಐಐಎಂಐಎಂ) ಶನಿವಾರ ತನ್ನ ಹೊಸ ಘಟಕವನ್ನು ಗುಜರಾತ್ನಲ್ಲಿ ಪ್ರಾರಂಭಿಸಿದೆ.
ಎಐಎಂಐಎಂ ತನ್ನ ಮಾಜಿ ಮುಖ್ಯಸ್ಥ ಜಮಾಲ್ಪುರದ ಕಾಂಗ್ರೆಸ್ ಶಾಸಕ ಸಬೀರ್ ಕಬ್ಲಿವಾಲಾ ಅವರನ್ನು ಗುಜರಾತ್ ಎಐಐಎಂನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು, ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ.
ಮುಂಬರುವ ಚುನಾವಣೆಗಳಲ್ಲಿ ಪುರಸಭೆ ನಿಗಮಗಳು, ಪುರಸಭೆಗಳು ಮತ್ತು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸ್ಪರ್ಧಿಸುವುದಾಗಿ ಎಐಐಎಂ ಘೋಷಿಸಿತ್ತು. ಈ ಹಿನ್ನೆಲೆ ಒವೈಸಿ ಇತ್ತೀಚೆಗೆ ತಮ್ಮ ಪಕ್ಷದ ಮುಖಂಡರನ್ನು ಬಿಟಿಪಿ ಶಾಸಕ ಚೋತು ವಾಸವ ಅವರನ್ನು ಭೇಟಿಯಾಗಲು ಮತ್ತು ಅಹಮದಾಬಾದ್‌ನಲ್ಲಿ ಕಬ್ಲಿವಾಲಾ ಅವರನ್ನು ಭೇಟಿ ಮಾಡಲು ಭರೂಚ್‌ಗೆ ಕಳುಹಿಸಿದ್ರು.
ಬಿಟಿಪಿ ನಾಯಕ ವಾಸವ ಅವರೊಂದಿಗೆ ಮೈತ್ರಿ ಮಾಡಿಕೊಂಡು ನಾವು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಎಎಂಸಿ) ಚುನಾವಣೆಗಳಲ್ಲಿ ಮತ್ತು ಭರೂಚ್ ಪುರಸಭೆಯ ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದೇವೆ ಎಂದು AIMIM ಹೇಳಿತ್ತು.
ಬಿಜೆಪಿಯೊಂದಿಗಿನ ನಮ್ಮ ಹೋರಾಟವು ನೇರವಾದದ್ದು. ಮುಂದಿನ ದಿನಗಳಲ್ಲಿ ನಾವು ರಾಜ್ಯದ ಇತರ ಭಾಗಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಮತ್ತು ಗುಜರಾತ್ನಲ್ಲಿ ನಮ್ಮ ನೆಲೆ ಸ್ಥಾಪಿಸುತ್ತೇವೆ ಎಂದು AIMIM ವಿಶ್ವಾಸ ವ್ಯಕ್ತಪಡಿಸಿದೆ. ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಅಸಮಾಧಾನಿತ ನಾಯಕರನ್ನು ಸ್ವಾಗತಿಸುತ್ತದೆ ”ಎಂದು ಗುಜರಾತ್‌ನ ಎಐಎಂಐಎಂ ಪ್ರಧಾನ ಕಾರ್ಯದರ್ಶಿ ಹಮೀದ್ ಭಟ್ಟಿ ಹೇಳಿದ್ದಾರೆ. ನಮ್ಮ ಪಕ್ಷವು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಕನಿಷ್ಠ 15 ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದ್ದು, ಭರೂಚ್ ಪುರಸಭೆಯ ಚುನಾವಣೆಗೆ ಇಂದು ಬಿಟಿಪಿಯೊಂದಿಗೆ ಸೀಟು ಹಂಚಿಕೆ ನಡೆಯಲಿದೆ ಎಂದೂ ತಿಳಿಸಿದ್ದಾರೆ.
''ಮಾಜಿ ಶಾಸಕ ಸಬೀರ್ಭಾಯ್ ಕಾಬೂಲಿವಾಲಾ ಅವರನ್ನು ಎಐಐಎಂ ಗುಜರಾತ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಲು ಸಂತೋಷವಾಗಿದೆ. ನಾನು ಅವರಿಗೆ ಶುಭ ಹಾರೈಸುತ್ತೇನೆ ಮತ್ತು ಗುಜರಾತ್ ಜನರ ಪಾಲಿಗೆ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿ ಎಐಐಎಂ ಹೊರಹೊಮ್ಮಲಿದೆ ಎಂದು ನನಗೆ ವಿಶ್ವಾಸವಿದೆ ''ಅಂತಾ ಒವೈಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೋರ್ಟ್ ಆವರಣದಲ್ಲೇ ಪತ್ನಿಗೆ ತಲಾಖ್ ನೀಡಿದ ಭೂಪ!