ETV Bharat / bharat

ಲಕ್ಷಣರಹಿತ ಕೋವಿಡ್​ ರೋಗಿಗಳು ಮನೆಯಲ್ಲೇ ಪ್ರತ್ಯೇಕವಾಗಿರಿ: ಏಮ್ಸ್​ನಿಂದ ಜಾಗೃತಿ ವಿಡಿಯೋ - aiims hospital

ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದು ಹೇಗೆ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು? ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಕೋವಿಡ್​ ಸಂಬಂಧ ಯಾವೆಲ್ಲಾ ನಿಯಮಗಳನ್ನು ಮನೆಗಳಲ್ಲಿದ್ದು ಪಾಲಿಸಬೇಕು? ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು? ಏನಾದರೂ ಗೊಂದಲಗಳಿದ್ದರೆ ಯಾರನ್ನು ಸಂಪರ್ಕಿಸಬೇಕು? ಈ ಎಲ್ಲಾ ಕುರಿತಾದ ಮಾಹಿತಿಯನ್ನು ದೆಹಲಿಯ ಏಮ್ಸ್​ ಆಸ್ಪತ್ರೆ ತನ್ನ ಜಾಗೃತಿ ವಿಡಿಯೋದಲ್ಲಿ ತಿಳಿಸಿದೆ. ಈ ವಿಡಿಯೋ ಇಲ್ಲಿದೆ ನೋಡಿ.

aiims
ಏಮ್ಸ್​
author img

By

Published : Jul 5, 2020, 3:31 PM IST

ನವದೆಹಲಿ: ಕೊರೊನಾದಿಂದಾಗಿ ದಿನದಿಂದ ದಿನಕ್ಕೆ ಹಾನಿ ಹೆಚ್ಚುತ್ತಿದೆ. ಇದರೊಂದಿಗೆ, ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನೂ ಸೋಂಕು ಬಾಧಿಸುತ್ತಿದೆ. ಆಸ್ಪತ್ರೆಗಳಲ್ಲಿ ಕೋವಿಡ್​ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯ ಕಾರ್ಯಕರ್ತರ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದೆಹಲಿಯ ಪ್ರತಿಷ್ಟಿತ ಏಮ್ಸ್​ ಆಸ್ಪತ್ರೆ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದೆ.

ಲಕ್ಷಣರಹಿತ ಅಥವಾ ಕಡಿಮೆ ಸೋಂಕಿನ ಲಕ್ಷಣವಿರುವ ಕೋವಿಡ್ ರೋಗಿಗಳು ಮನೆಯಲ್ಲೇ ಪ್ರತ್ಯೇಕವಾಗಿರುವುದು ಅತ್ಯುತ್ತಮ ವಿಧಾನವಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊರೊನಾ ವೈರಸ್​ನ ಯಾವುದೇ ಲಕ್ಷಣವಿಲ್ಲದ ಕೋವಿಡ್​ ರೋಗಿಗಳು ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದು ಚಿಕಿತ್ಸೆ ಪಡೆಯುವುದು ಉತ್ತಮ ಎಂದು ದೆಹಲಿಯ ಏಮ್ಸ್​ ಆಸ್ಪತ್ರೆ ಕೂಡಾ ಹೇಳಿದೆ.

ಈ ಬಗ್ಗೆ ಜಾಗೃತಿ ಮೂಡಿಸಲು ಏಮ್ಸ್, ವಿಡಿಯೋವೊಂದನ್ನು ಮಾಡಿದ್ದು, ಶೀಘ್ರದಲ್ಲೇ ಇದನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಕೊರೊನಾ ರೋಗಿಗಳು ಮತ್ತೊಬ್ಬರ ಸಂಪರ್ಕ ಬರದಂತೆ ಕ್ವಾರಂಟೈನ್​ ಆಗುವುದು ಮುಖ್ಯ. ಕಡಿಮೆ ರೋಗಲಕ್ಷಣ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದ ಜನರು ಮನೆಯಲ್ಲೇ ಪ್ರತ್ಯೇಕವಾಗಿರುವುದು ಉತ್ತಮ ಆಯ್ಕೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.

ಏಮ್ಸ್​ನಿಂದ ಜಾಗೃತಿ ವಿಡಿಯೋ

ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದು ಹೇಗೆ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು? ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಕೋವಿಡ್​ ಸಂಬಂಧ ಯಾವೆಲ್ಲಾ ನಿಯಮಗಳನ್ನು ಮನೆಗಳಲ್ಲಿದ್ದು ಪಾಲಿಸಬೇಕು? ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇರಬೇಕು? ಏನಾದರೂ ಗೊಂದಲಗಳಿದ್ದರೆ ಯಾರನ್ನು ಸಂಪರ್ಕಿಸಬೇಕು? ಈ ಎಲ್ಲಾ ಕುರಿತಾದ ಮಾಹಿತಿಯನ್ನು ಏಮ್ಸ್​ ಆಸ್ಪತ್ರೆ ತನ್ನ ಜಾಗೃತಿ ವಿಡಿಯೋದಲ್ಲಿ ತಿಳಿಸಿದೆ. ಈ ವಿಡಿಯೋ ಇಲ್ಲಿದೆ ನೋಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.