ETV Bharat / bharat

ಸುಶಾಂತ್ ಸಿಂಗ್​​ ಸಾವು ಪ್ರಕರಣ: ಶವ ಪರೀಕ್ಷೆ ವರದಿ ಪರಿಶೀಲನೆಗೆ ತಜ್ಞರ ತಂಡ ರಚಿಸಿದ ಏಮ್ಸ್! - SSR death case

ಸುಶಾಂತ್ ಸಿಂಗ್​​ ಸಾವು ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದ್ದು, ಸಿಬಿಐ ತನಿಖೆಗೆ ನೆರವಾಗುವಂತೆ ತಮ್ಮ ಸಹಾಯಕ್ಕಾಗಿ ಏಮ್ಸ್​ ಆಸ್ಪತ್ರೆಯನ್ನು ಸಂಪರ್ಕಿಸಿತ್ತು. ಆ ಬಳಿಕ, ಸುಶಾಂತ್​ ಶವಪರೀಕ್ಷೆ ವರದಿಗಳನ್ನು ಪರಿಶೀಲಿಸಲು ಐವರು ವಿಧಿವಿಜ್ಞಾನ ತಜ್ಞರ ತಂಡವನ್ನು ಏಮ್ಸ್​ ರಚಿಸಿದೆ.

SSR death case
SSR death caಸುಶಾಂತ್​ ಸಾವು ಪ್ರಕರಣse
author img

By

Published : Aug 22, 2020, 2:19 PM IST

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆ ವರದಿಗಳನ್ನು ಪರಿಶೀಲಿಸಲು ಐವರು ಸದಸ್ಯರ ವೈದ್ಯಕೀಯ ಮಂಡಳಿಯ ವಿಧಿವಿಜ್ಞಾನ ತಜ್ಞರನ್ನು ಏಮ್ಸ್ ಶುಕ್ರವಾರ ರಚಿಸಿದೆ.

ಸುಶಾಂತ್​ ಸಾವು ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದ್ದು, ಸಿಬಿಐ ತನಿಖೆಗೆ ನೆರವಾಗುವಂತೆ ತಮ್ಮ ಸಹಾಯಕ್ಕಾಗಿ ಏಮ್ಸ್​ ಆಸ್ಪತ್ರೆಯನ್ನು ಸಂಪರ್ಕಿಸಿತ್ತು. ಆ ಬಳಿಕ ಐವರನ್ನೊಳಗೊಂಡ ವಿಧಿವಿಜ್ಞಾನ ತಜ್ಞರ ತಂಡವನ್ನು ಸುಶಾಂತ್​ ಶವಪರೀಕ್ಷೆ ವರದಿಗಳನ್ನು ಪರಿಶೀಲಿಸಲು ಏಮ್ಸ್​ ರಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕೊಲೆಯ ಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಎಲ್ಲ ದೃಷ್ಟಿಕೋನಗಳಲ್ಲೂ ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದು ತಂಡವನ್ನು ಮುನ್ನಡೆಸಲಿರುವ ಏಮ್ಸ್ ಫೊರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ತಿಳಿಸಿದ್ದಾರೆ.

ತಂಡವು ಸುಶಾಂತ್​ ದೇಹದ ಗಾಯದ ಮಾದರಿಯನ್ನು ಮೌಲ್ಯಮಾಪನ ಮಾಡಿ, ಸಾಂದರ್ಭಿಕ ಸಾಕ್ಷ್ಯಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆಯೇ ಎಂಬುದನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.