ETV Bharat / bharat

ಅಹಮದಾಬಾದ್​ಗೆ ಟ್ರಂಪ್​ ಭೇಟಿ: ಹೇಗಿದೆ ಗೊತ್ತೇ ಭದ್ರತಾ ವ್ಯವಸ್ಥೆ? - ನಮಸ್ತೆ ಟ್ರಂಪ್​​

ನಾಳೆ ಡೊನಾಲ್ಡ್​ ಟ್ರಂಪ್​ ಅಹಮದಾಬಾದ್​​ಗೆ ಭೇಟಿ ನೀಡುತ್ತಿದ್ದಾರೆ. ಭದ್ರತೆಗಾಗಿ 33 ಡೆಪ್ಯೂಟಿ ಪೊಲೀಸ್​ ಕಮಿಷನರ್​​​, 75 ಎಸಿಪಿ, 300 ಪೊಲೀಸ್​​ ಇನ್ಸ್​​ಪೆಕ್ಟರ್​​, 100 ಸಬ್​ ಇನ್ಸ್​​ಪೆಕ್ಟರ್​​, 1,200 ಜವಾನರು, 2,000 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ.

Ahmedabad Commissioner of Police, Ashish Bhatia
ನಾಳೆ ಅಹಮದಾಬಾದ್​ಗೆ ಟ್ರಂಪ್​ ಭೇಟಿ
author img

By

Published : Feb 23, 2020, 7:27 PM IST

ಅಹಮದಾಬಾದ್‌(ಗುಜರಾತ್): ನಾಳೆ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭೇಟಿ ನೀಡುತ್ತಿದ್ದಾರೆ. ಅಹಮದಾಬಾದ್​​ನಲ್ಲಿ ಆಯೋಜನೆಗೊಂಡಿರುವ 'ನಮಸ್ತೆ ಟ್ರಂಪ್'​ ಮೆಗಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದು ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

ಅಹಮದಾಬಾದ್​ ಪೊಲೀಸರು ತಮ್ಮ ಭದ್ರತಾ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಈ ಬಗ್ಗೆ ಅಹಮದಾಬಾದ್​ ಪೊಲೀಸ್​​ ಕಮಿಷನರ್​​ ಆಶಿಶ್​​ ಭಾಟಿಯಾ ಮಾಧ್ಯಮಗಳ ಮುಂದೆ ವಿವರಿಸಿದ್ರು.

ನಾಳೆ ಅಹಮದಾಬಾದ್​ಗೆ ಟ್ರಂಪ್​ ಭೇಟಿ

ಮೊಟೇರಾ ಸ್ಟೇಡಿಯಂ ಸುತ್ತಮುತ್ತ ಹಾಗು ನಗರಾದ್ಯಂತ ಭದ್ರತೆಗಾಗಿ 33 ಡೆಪ್ಯೂಟಿ ಪೊಲೀಸ್​ ಕಮಿಷನರ್​​​, 75 ಎಸಿಪಿ, 300 ಪೊಲೀಸ್​​ ಇನ್ಸ್​​ಪೆಕ್ಟರ್​​, 100 ಸಬ್​ ಇನ್ಸ್​​ಪೆಕ್ಟರ್​​, 12000 ಜವಾನರು, 2000 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಸಬರಮತಿ ಆಶ್ರಮಕ್ಕೆ ಟ್ರಂಪ್​ ಭೇಟಿಕೊಡಲಿದ್ದು, ಟ್ರಾಫಿಕ್​​ಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಲಾಗಿದೆ ಎಂದರು.

ಇನ್ನು ಕೆಲವು ಅನುಮಾನಾಸ್ಪದ ವ್ಯಕ್ತಿಗಳನ್ನು ಈಗಾಗಲೇ ಬಂಧಿಸಿದ್ದೇವೆ. ಬಂಧಿತರ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಆಯುಕ್ತರು ನಿರಾಕರಿಸಿದರು.

ಸೋಮವಾರ ಬೆಳಿಗ್ಗೆ 11.30ಕ್ಕೆ ಅಹಮದಾಬಾದ್​​ ಏರ್​ಪೋರ್ಟ್​​ಗೆ ಟ್ರಂಪ್​ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಂತರ 12 ಗಂಟೆಯಿಂದ ರೋಡ್​ ಶೋ ಏರ್ಪಡಿಸಲಾಗಿದೆ. ಇದಾದ ಮೇಲೆ ಬೃಹತ್‌ ಮೊಟೇರಾ ಸ್ಟೇಡಿಯಂನಲ್ಲಿ ವರ್ಣರಂಜಿತ ಕಾರ್ಯಕ್ರಮವಿದ್ದು, ನಂತ್ರ ಟ್ರಂಪ್​ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ ನಮಸ್ತೆ ಟ್ರಂಪ್​ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಬಳಿಕ ಅವರು ಆಗ್ರಾಕ್ಕೆ ತೆರಳಲಿದ್ದಾರೆ ಎಂದು ಅಹಮದಾಬಾದ್​​ ಪೊಲೀಸ್​ ಕಮಿಷನರ್ ಆಶಿಶ್​​ ಭಾಟಿಯಾ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.