ಅಹ್ಮದಾಬಾದ್: ಪ್ರಖ್ಯಾತ ಪೂರಿ ಜಗ್ನನಾಥ ದೇಗುಲಕ್ಕೆ ಇಂದು ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ ಅವರು, ಮಂಗಳಾರತಿ ಬೆಳಗಿದರು.
ಪ್ರತಿ ವರ್ಷದಂತೆ ಜಗನ್ನಾಥ ದೇಗಲದಲ್ಲಿ ರಥಯಾತ್ರೆ ನಡೆಯುತ್ತಿದ್ದು, ಅಮಿತ್ ಶಾ ಪತ್ನಿ ಸೊನಾಲ್ ಶಾ ಸಮೇತ ಭಾಗವಹಿಸಿದ್ದಾರೆ.
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಜಗನ್ನಾಥ ದೇಗುಲಕ್ಕೆ ಅವರು ಭೇಟಿ ನೀಡಿದ್ದಾರೆ. 2 ದಿನಗಳ ಪ್ರವಾಸ ಕೈಗೊಂಡು ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇಂದಿನಿಂದ 9 ದಿನಗಳ ಕಾಲ ನಡೆಯುವ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲ್ಲಿದ್ದಾರೆ.