ETV Bharat / bharat

ಜ.31ಕ್ಕೆ ಕೇಂದ್ರ ಬಜೆಟ್​​ ಅಧಿವೇಶನ! - 2020-21 ನೇ ಸಾಲಿನ ಕೇಂದ್ರ ಬಜೆಟ್

2020-21 ನೇ ಸಾಲಿನ ಕೇಂದ್ರ ಬಜೆಟ್​ ಅಧಿವೇಶನವನ್ನ ಜನವರಿ 31 ರಿಂದ ಫೆಬ್ರವರಿ 11ರವರೆಗೆ ನಡೆಸಲು ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ.

PM Modi
ಮೋದಿ ನೇತೃತ್ವದ ಸರ್ಕಾರ
author img

By

Published : Jan 9, 2020, 10:40 AM IST

Updated : Jan 9, 2020, 10:48 AM IST

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್​ ಅಧಿವೇಶನವನ್ನ ಜನವರಿ 31 ರಿಂದ ಫೆಬ್ರವರಿ 11ರವರೆಗೆ ನಡೆಸಲು ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

  • The Union Budget represents the aspirations of 130 crore Indians and lays out the path towards India’s development.

    I invite you all to share your ideas and suggestions for this year’s Budget on MyGov. https://t.co/zVCL06TdLn

    — Narendra Modi (@narendramodi) January 8, 2020 " class="align-text-top noRightClick twitterSection" data=" ">

ಫೆಬ್ರವರಿ ಒಂದರಂದು ಸರ್ಕಾರ ತನ್ನ ಬಜೆಟ್​ ಮಂಡನೆ ಮಾಡಲಿದೆ. ಚುನಾವಣೆ ಬಳಿಕ ಮೊದಲ ಬಜೆಟ್​ ಮಂಡನೆ ಮಾಡಿದ್ದ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್​ ತಮ್ಮ ಎರಡನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದ ಮೂಲಗಳಿಂದ ಹೊರ ಬಿದ್ದಿದೆ.

ಇನ್ನೊಂದೆಡೆ ಎರಡನೇ ಹಂತದ ಬಜೆಟ್​ ಅಧಿವೇಶನವನ್ನ ಮಾರ್ಚ್​ 2 ರಿಂದ ಏಪ್ರಿಲ್​ ಮೂರರವರೆಗೂ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಅಧಿವೇಶನ ಭಾರಿ ಕಾವಿನಿಂದ ಕೂಡಿರುವ ಸಾಧ್ಯತೆಗಳಿವೆ. ಕಳೆದ ಅಧಿವೇಶನದಲ್ಲಿ ಮಂಡನೆ ಆಗಿ ಸಂಸತ್​ನ ಅನುಮೋದನೆ ಪಡೆದಿರುವ ಸಿಎಎ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ. ಉಳಿದಂತೆ ಆರ್ಥಿಕ ಕುಸಿತ ಬಹುದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ.

Last Updated : Jan 9, 2020, 10:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.