ETV Bharat / bharat

ಕೊರೊನಾ ಬಳಿಕ ಬಿಜೆಪಿಯಿಂದ ಕೈ ಶಾಸಕರ ಅಂತರ; ಮೇಲ್ಮನೆ ತಲುಪಲು ರೆಸಾರ್ಟ್‌ ರಾಜಕೀಯ - ಅಬು ರೋಡ್​

ಇತ್ತೀಚೆಗಷ್ಟೇ ಗುಜರಾತ್​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮೂವರು ಶಾಸಕರು ರಾಜಸ್ಥಾನದ ಅಬುರೋಡ್​ನಲ್ಲಿರುವ ರೆಸಾರ್ಟ್​ಗೆ ತಲುಪಿದ್ದಾರೆ.

Wildwinds Resort
ವೈಲ್ಡ್​ ವಿಂಡ್ಸ್​​​ ರೆಸಾರ್ಟ್
author img

By

Published : Jun 7, 2020, 10:45 AM IST

ಅಬುರೋಡ್​​ (ರಾಜಸ್ಥಾನ): ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಗುಜರಾತ್​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮೂವರು ಕಾಂಗ್ರೆಸ್ಸಿಗರು ರಾಜಸ್ಥಾನದ ಅಬುರೋಡ್​ ನಗರದಲ್ಲಿರುವ ವೈಲ್ಡ್​ ವಿಂಡ್ಸ್​​​ ರೆಸಾರ್ಟ್ ತಲುಪಿದ್ದಾರೆ.

ಕೆಲವು ದಿನಗಳ ಹಿಂದೆ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ನಿನ್ನೆಯಷ್ಟೇ ಗುಜರಾತ್​​​ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅದಾದ ನಂತರ ಬ್ರಿಜೇಶ್​ ಮೆರ್ಜಾ ಕೂಡಾ ರಾಜೀನಾಮೆ ಸಲ್ಲಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಎಂಎಲ್​ಎ ಗುಲಾಬ್​ ಸಿಂಗ್​ ರಜಪೂತ್ ''ಜನರಿಗೆ ಮೋಸ ಮಾಡುವವರು ಪಕ್ಷ ಬಿಟ್ಟಿದ್ದಾರೆ, ಯಾವ ಶಾಸಕನಿಂದಲೂ ಪಕ್ಷವನ್ನು ನಾಶಗೊಳಿಸಲು ಸಾಧ್ಯವಿಲ್ಲ. ಜನರು ಪಕ್ಷ ಬಿಟ್ಟವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಗುಡುಗಿದ್ದಾರೆ.

ರಾಜ್ಯಸಭಾ ಚುನಾವಣೆ ಜೂನ್ 19ರಂದು ನಡೆಯಲಿದ್ದು, ಇದರ ಬೆನ್ನಲ್ಲೇ ಶಾಸಕರು ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಈಗ ಸದ್ಯಕ್ಕೆ ರಾಜೀನಾಮೆ ನೀಡಿದ ಶಾಸಕ ಅಬು ರೋಡ್ ನಗರದಲ್ಲಿರುವ ವೈಲ್ಡ್​ ವಿಂಡ್ಸ್​​​ ರೆಸಾರ್ಟ್​ನಲ್ಲಿ ಉಳಿದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.