ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ 20 ರಂದು ಶಾಲಾ ಮಕ್ಕಳೊಂದಿಗೆ 'ಪರೀಕ್ಷಾ ಪೆ ಚರ್ಚಾ' ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸಲಹೆಗಳು ಹಾಗೂ ಪ್ರಶ್ನೆಗಳನ್ನು ಕೇಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮುಂಬರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೇಗೆ ತಯಾರಾಗಬೇಕು, ಹೇಗೆ ಪರೀಕ್ಷಾ ಒತ್ತಡ ಕಡಿಮೆ ಮಾಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡುವ ಪಿಎಂ ಮೋದಿಯ 'ಪರೀಕ್ಷಾ ಪೆ ಚರ್ಚಾ'ದ ಮೂರನೇ ಆವೃತ್ತಿ ಜ.20 ರಂದು ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕೇವಲ 9 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಕುರಿತು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತಮ್ಮ ಸಲಹೆ ಹಾಗೂ ಪ್ರಶ್ನೆಗಳನ್ನು http://bit.ly/_PPC2020 ಈ ಲಿಂಕ್ಗೆ ಹೋಗಿ ಕಳುಹಿಸಬಹುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (MHRD) ಟ್ವೀಟ್ ಮಾಡಿದೆ.
-
Only 9 days to go!
— Ministry of HRD (@HRDMinistry) January 11, 2020 " class="align-text-top noRightClick twitterSection" data="
Children are showing great enthusiasm & curiosity for Pariksha Pe Charcha 2020 to be held on 20 January 2020 at Talkatora Stadium.
Students, parents, and teachers - you can send your suggestions/questions for #ParikshaPeCharcha2020 at https://t.co/0ClZZZM0Dp pic.twitter.com/cb4muG7uUF
">Only 9 days to go!
— Ministry of HRD (@HRDMinistry) January 11, 2020
Children are showing great enthusiasm & curiosity for Pariksha Pe Charcha 2020 to be held on 20 January 2020 at Talkatora Stadium.
Students, parents, and teachers - you can send your suggestions/questions for #ParikshaPeCharcha2020 at https://t.co/0ClZZZM0Dp pic.twitter.com/cb4muG7uUFOnly 9 days to go!
— Ministry of HRD (@HRDMinistry) January 11, 2020
Children are showing great enthusiasm & curiosity for Pariksha Pe Charcha 2020 to be held on 20 January 2020 at Talkatora Stadium.
Students, parents, and teachers - you can send your suggestions/questions for #ParikshaPeCharcha2020 at https://t.co/0ClZZZM0Dp pic.twitter.com/cb4muG7uUF
'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕೇವಲ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವುದಿಲ್ಲ, ಜೊತೆಗೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ, ಪ್ರಶ್ನೆಗಳನ್ನು ಕೇಳುವ ಅವಕಾಶವನ್ನೂ ಆಯ್ದ ವಿದ್ಯಾರ್ಥಿಗಳಿಗೆ ನೀಡಲಿದೆ.
'ಕೃತಜ್ಞತೆ ಗುಣ ಶ್ರೇಷ್ಠ ', 'ನಿಮ್ಮ ಭವಿಷ್ಯವು ನಿಮ್ಮ ಆಕಾಂಕ್ಷೆಗಳನ್ನು ಅವಲಂಬಿಸಿರುತ್ತದೆ', 'ಪರೀಕ್ಷೆಗಳನ್ನು ಪರೀಕ್ಷಿಸುವುದು', 'ನಮ್ಮ ಕರ್ತವ್ಯಗಳು, ನಿಮ್ಮ ತೆಗೆದುಕೊಳ್ಳುವಿಕೆ' ಹಾಗೂ 'ಸಮತೋಲನವು ಪ್ರಯೋಜನಕಾರಿ'- ಎನ್ನುವ ವಿಷಯಗಳನ್ನು ನೀಡಲಾಗಿದ್ದು, ಸ್ಪರ್ಧಿಗಳು ಈ ಐದು ವಿಷಯಗಳಲ್ಲಿ ಯಾವುದಾದರೂ ಒಂದರ ಕುರಿತು ಗರಿಷ್ಠ 1,500 ಅಕ್ಷರಗಳ ಮಿತಿಯಲ್ಲಿ ಬರೆಯಬೇಕಾಗಿದೆ. ಆಯ್ದ ಉತ್ತಮ ಬರಹಗಳು ಮೋದಿ ಜೊತೆ ನಡೆಯುವ ಸಂವಾದ ಕಾರ್ಯಕ್ರಮದ ವೇಳೆ ಚರ್ಚೆಗೆ ಬರಲಿವೆ.